Shocking: ರೈತನ ಹೊಟ್ಟೆ ಬಗೆದು ಸಾಯಿಸಿದ ಕಾಡುಪ್ರಾಣಿ; ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದುರ್ಘಟನೆ

ರೈತನ ಮೇಲೆ ದಾಳಿ ಮಾಡಿರುವ ಕಾಡುಪ್ರಾಣಿ ಯಾವುದು ಎನ್ನುವುದು ನಿಖರವಾಗಿ ತಿಳಿದುಬಂದಿಲ್ಲವಾದರೂ ಕಾಡುಹಂದಿ ಅಥವಾ ಚಿರತೆ ದಾಳಿ ಮಾಡಿರಬಹುದು ಎಂದು ಊಹಿಸಲಾಗಿದೆ.

Shocking: ರೈತನ ಹೊಟ್ಟೆ ಬಗೆದು ಸಾಯಿಸಿದ ಕಾಡುಪ್ರಾಣಿ; ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದುರ್ಘಟನೆ
ಕಾಡುಪ್ರಾಣಿ ದಾಳಿಗೆ ತುತ್ತಾದ ರೈತ
Follow us
TV9 Web
| Updated By: Skanda

Updated on: Jul 31, 2021 | 9:34 AM

ಮಂಡ್ಯ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವ ಕಾಡುಪ್ರಾಣಿಯ ದಾಳಿಗೆ (Wild Animal Attack) ಬಲಿಯಾದ ದಾರುಣ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನೆಲಮನೆ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದ್ದು. ರಾಮೇಗೌಡ (65 ವರ್ಷ) ಎಂಬುವವರನ್ನು ಕಾಡುಪ್ರಾಣಿಯೊಂದು ಹೊಟ್ಟೆ ಬಗೆದು ಸಾಯಿಸಿದೆ. ಜಮೀನಿಗೆ ಕೆಲಸಕ್ಕೆ ತೆರಳಿದ್ದ ರೈತ ಎಷ್ಟು ಹೊತ್ತಾದರೂ ಮನೆಗೆ ವಾಪಾಸ್ಸಾಗದಿದ್ದಾಗ ಭಯಗೊಂಡ ಮನೆ ಮಂದಿ ಜಮೀನಿಗೆ ಹೋಗಿ ನೋಡಿದ ವೇಳೆ ಅನಾಹುತ ಘಟಿಸಿರುವುದು ಬೆಳಕಿಗೆ ಬಂದಿದೆ. ರೈತನ ಮೇಲೆ ದಾಳಿ ಮಾಡಿರುವ ಕಾಡುಪ್ರಾಣಿ ಯಾವುದು ಎನ್ನುವುದು ನಿಖರವಾಗಿ ತಿಳಿದುಬಂದಿಲ್ಲವಾದರೂ ಕಾಡುಹಂದಿ ಅಥವಾ ಚಿರತೆ ದಾಳಿ ಮಾಡಿರಬಹುದು ಎಂದು ಊಹಿಸಲಾಗಿದೆ.

ಜಮೀನಿಗೆ ಕಾಡುಪ್ರಾಣಿಗಳು ಲಗ್ಗೆ ಇಡುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಒಂದೊಂದು ಪ್ರದೇಶಗಳಲ್ಲಿ ಒಂದೊಂದು ಬಗೆಯ ಪ್ರಾಣಿಗಳ ಹಾವಳಿ ಅಧಿಕವಾಗಿದೆ. ಒಂದೆಡೆ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡುವ ಪ್ರಾಣಿಗಳ ಉಪಟಳವಾದರೆ, ಇನ್ನೊಂದೆಡೆ ಕ್ರೂರ ಪ್ರಾಣಿಗಳೂ ಧಾವಿಸುತ್ತಿರುವುದರಿಂದ ಯಾವ ಸಂದರ್ಭದಲ್ಲಿ ಯಾವ ಪ್ರಾಣಿ ದಾಳಿ ಮಾಡುತ್ತದೋ ಎಂಬ ಭಯದಲ್ಲೇ ರೈತರು ದಿನ ಕಳೆಯುವಂತಾಗಿದೆ. ಸದರಿ ಘಟನೆಯ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡುಕೋಣಗಳ ಹಿಂಡು ಪ್ರತ್ಯಕ್ಷ ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದ ಬಳಿ ದೈತ್ಯ ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರನ್ನು ಆತಂಕಕ್ಕೆ ನೂಕಿದೆ. 20ಕ್ಕೂ ಹೆಚ್ಚು ಕಾಡುಕೋಣಗಳ ಗುಂಪು ಕೆಳಗೂರಿನ ಆಂಜನೇಯ ದೇವಸ್ಥಾನದ ಬಳಿ ಪ್ರತ್ಯಕ್ಷವಾಗಿದ್ದು, ಕಾಡುಕೋಣಗಳ ದೊಡ್ಡ ಗುಂಪನ್ನು ನೋಡಿ ಜನರು ದಂಗಾಗಿದ್ದಾರೆ.

WILD GAUR

ಕಾಡುಕೋಣಗಳ ಹಿಂಡು

ಸಾಧಾರಣವಾಗಿ ಮೂರು, ನಾಲ್ಕು ಕಾಡುಕೋಣಗಳು ಜಮೀನಿಗೆ ಲಗ್ಗೆ ಇಡುತ್ತವೆಯಾದರೂ ಈ ಪ್ರಮಾಣದಲ್ಲಿ ದೊಡ್ಡ ಹಿಂಡೇ ದಾಳಿಯಿಟ್ಟರೆ ಬೆಳೆಯನ್ನು ಕಾಪಾಡಿಕೊಳ್ಳುವುದೂ ಕಷ್ಟವಾಗುತ್ತದೆ. ಹೀಗಾಗಿ ಸುಮಾರು 20 ಕಾಡುಕೋಣಗಳ ದೊಡ್ಡ ಹಿಂಡು ನೋಡಿದ ಸ್ಥಳೀಯರು ಬೆಳೆ ಕಾಪಾಡಿಕೊಳ್ಳುವ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಕಾಡುಕೋಣಗಳ ಓಡಾಟವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಇದನ್ನೂ ಓದಿ: Viral Video: ಕೆಣಕಿದವರನ್ನು ಅಟ್ಟಾಡಿಸಿ ಹೊಸಕಿಹಾಕಿದ ಆನೆ; ವಿಡಿಯೋ ನೋಡಿ ತಪ್ಪು ಯಾರದ್ದು ನೀವೇ ಹೇಳಿ? 

ಕಾಡುಪ್ರಾಣಿಗಳ ಭಯಕ್ಕೆ ಶಿಕ್ಷಣದಿಂದ ದೂರವಾಗುತ್ತಿರುವ ಮಕ್ಕಳು; ಪರ್ಯಾಯ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ

(Wild animal Brutally killed farmer in Mandya)

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ