Viral Video: ಸ್ಟೈಲ್ಆಗಿ ಸನ್​ಗ್ಲಾಸ್​ ತೊಟ್ಟು ಕುಳಿತ ಒರಾಂಗೂಟಾನ್! ವಿಡಿಯೋ ವೈರಲ್

ವಿಡಿಯೋವನ್ನು ಟಿಕ್​ಟಾಕ್​ನಲ್ಲಿ ಮೊದಲಿಗೆ ಹಂಚಿಕೊಳ್ಳಲಾಗಿದೆ. ಬಳಿಕ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಸಕತ್ ವೈರಲ್ ಆಗಿದೆ.

Viral Video: ಸ್ಟೈಲ್ಆಗಿ ಸನ್​ಗ್ಲಾಸ್​ ತೊಟ್ಟು ಕುಳಿತ ಒರಾಂಗೂಟಾನ್! ವಿಡಿಯೋ ವೈರಲ್
ಸ್ಟೈಲ್ಆಗಿ ಸನ್​ಗ್ಲಾಸ್​ ತೊಟ್ಟು ಕುಳಿತ ಒರಾಂಗೂಟಾನ್!
Follow us
TV9 Web
| Updated By: shruti hegde

Updated on: Aug 04, 2021 | 11:52 AM

ಒರಾಂಗೂಟಾನ್​ ಹೆಚ್ಚು ಬುದ್ಧಿವಂತ ಪ್ರಾಣಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಒರಾಂಗೂಟಾನ್​ ಎಷ್ಟು ಜಾಣರಿರುತ್ತಾರೆ ಎಂಬುದಕ್ಕೆ ಇಲ್ಲೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ಎಲ್ಲರಿಗೆ ಇಷ್ಟವಾಗುವಂತಿದೆ. ಸಿಕ್ಕ ಸನ್​ಗ್ಲಾಸ್​ಅನ್ನು ಸ್ಟೈಲ್ಆಗಿ ತೊಟ್ಟು ಒರಾಂಗೂಟಾನ್​ ಕುಳಿತುಕೊಂಡಿದೆ. ಅದರ ಮರಿ ಕೂಡಾ ದಿಟ್ಟಿಸಿ ನೋಡುತ್ತಿದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂಡೋನೇಷ್ಯಾದ ಮೃಗಾಲಯದಲ್ಲಿ ಪ್ರವಾಸಿಗರು ಸನ್​ಗ್ಲಾಸ್​ಅನ್ನು ಬೀಳಿಸಿದ್ದರು. ಅದನ್ನು ನೋಡಿದಾ ಒರಾಂಗೂಟಾನ್​ ಸ್ಟೈಲ್ಆಗಿ ಧರಿಸಿಕೊಳ್ಳುತ್ತಿದೆ. ವಿಡಿಯೋವನ್ನು ಟಿಕ್​ಟಾಕ್​ನಲ್ಲಿ ಮೊದಲಿಗೆ ಹಂಚಿಕೊಳ್ಳಲಾಗಿದೆ. ಬಳಿಕ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಸಕತ್ ವೈರಲ್ ಆಗಿದೆ.

ಕನ್ನಡಕವನ್ನು ಒಡೆದು ಹಾಕುತ್ತದೆ ಎಂದು ಸುತ್ತಲಿರುವ ಜನರು ಭಾವಿಸಿದ್ದರು. ಆದರೆ ಒರಾಂಗೂಟಾನ್​ ಎಲ್ಲರನ್ನೂ ಬೆರಗುಗೊಳಿಸುವಂತೆ ಮಾಡಿದೆ. ಸಿಕ್ಕ ಸನ್​ಗ್ಲಾಸ್​ಅನ್ನು ತೊಟ್ಟು ಮರಿಯನ್ನು ಎತ್ತಿಕೊಂಡು ಕುಳಿತುಕೊಂಡಿದೆ. ದೃಶ್ಯ ಪ್ರವಾಸಿಗರಿಗೆ ಆಶ್ಚರ್ಯಚಕಿರನ್ನಾಗಿ ಮಾಡಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಾನವ ಲಕ್ಷಣಗಳಿರುವ ಒರಾಂಗೂಟಾವನ್ನು ನೋಡಿ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಒರಾಂಗೂಟಾವನ್ನು ನೋಡಿದ ನೆಟ್ಟಿಗರೋರ್ವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ, ‘ನೀವು ಇಂಟರ್ನೆಟ್​ಗೆ ಸ್ಟಾರ್ ಆಗಿದ್ದೀರಿ’ ಎಂದಿದ್ದಾರೆ.

ಇದನ್ನೂ ಓದಿ:

‘ದಿ ವರ್ಡ್​ ಇಸ್​ ಗೋಯಿಂಗ್ ಅಪ್​ಸೈಡ್​ ಡೌನ್’ ಕೇರಳದ ವ್ಯಕ್ತಿ ಕ್ಲಿಕ್ಕಿಸಿದ ಚಿತ್ರಕ್ಕೆ ಉತ್ತಮ ಛಾಯಾಗ್ರಹಣ ಪ್ರಶಸ್ತಿ

Viral Video: ತನ್ನ ಸೊಂಡಿಲಿನ ಕೌಶಲ ಪ್ರದರ್ಶಿಸುತ್ತಾ ತುಂಟಾಟ ಮಾಡುತ್ತಿದೆ ಈ ಆನೆ ಮರಿ