ಸಿಬಿಎಸ್​ಇ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದೇ ಟ್ವಿಟರ್​ನಲ್ಲಿ ಹರಿಬಂದ ಉಲ್ಲಾಸದ ಜೋಕ್ಸ್​ಗಳನ್ನು ನೋಡಿ..

ಸಿಬಿಎಸ್​ಇ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದೇ ಟ್ವಿಟರ್​ನಲ್ಲಿ ಹರಿಬಂದ ಉಲ್ಲಾಸದ ಜೋಕ್ಸ್​ಗಳನ್ನು ನೋಡಿ..
ಸಿಬಿಎಸ್​ಇ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದೇ ಟ್ವಿಟರ್​ನಲ್ಲಿ ಹರಿಬಂದ ಉಲ್ಲಾಸದ ಜೋಕ್ಸ್​ಗಳು

ಸಿಬಿಎಸ್​ಇ 10ನೇ ತರಗತಿಯ ಫಲಿತಾಂಶಗಳನ್ನು ಘೋಷಿಸಿದ ತಕ್ಷಣ ಟ್ವಿಟರ್​ನಲ್ಲಿ ಹಾಸ್ಯದ ಕೆಲವು ಸಂಭಾಷಣೆಗಳನ್ನು ಹರಿಬಿಡಲಾಗಿದೆ.

TV9kannada Web Team

| Edited By: shruti hegde

Aug 04, 2021 | 9:38 AM

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಮಂಗಳವಾರ 10ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದೆ. 3.6 ರಲ್ಲಿ ಸುಮಾರು 2.6 ಲಕ್ಷ ವಿದ್ಯಾರ್ಥಿಗಳು ತಮ್ಮ 10ನೇ ಬೋರ್ಡ್ ಪರೀಕ್ಷೆಗಳಲ್ಲಿ ಶೇ.90ರಷ್ಟು ಅಂಕಗಳನ್ನು ಪಡೆದಿದ್ದಾರೆ. CBSC ಮಂಡಳಿಯು ಸಿದ್ಧಪಡಿಸಿದ ಮೌಲ್ಯಮಾಪನ ಮಾನದಂಡಗಳನ್ನು ಆಧರಿಸಿ ಫಲಿತಾಂಶವನ್ನು ಘೋಷಿಸಲಾಗಿದೆ. ಕೊವಿಡ್19 ಸಾಂಕ್ರಾಮಿಕದಿಂದಾಗಿ ಸಿಬಿಎಸ್ಇ​ 10ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಬೇಕಾಯಿತು. ಒಟ್ಟು 21,13,767 ಅಭ್ಯರ್ಥಿಗಳು 10ನೇ ತರಗತಿಯ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟೂ ಉತ್ತೀರ್ಣರು ಶೇ. 99.04. ಉತ್ತೀರ್ಣ ಶೇಕಡಾವಾರು ಸರಾಸರಿ ವರ್ಷಕ್ಕಿಂತ ಹೆಚ್ಚಾಗಿದೆ.

ಸಿಬಿಎಸ್​ಇ 10ನೇ ತರಗತಿಯ ಫಲಿತಾಂಶಗಳನ್ನು ಘೋಷಿಸಿದ ತಕ್ಷಣ ಟ್ವಿಟರ್​ನಲ್ಲಿ ಹಾಸ್ಯದ ಕೆಲವು ಸಂಭಾಷಣೆಗಳನ್ನು ಹರಿಬಿಡಲಾಗಿದೆ. ಕೆಲವರು ಸಂತೋಷವನ್ನು ಜತೆಗೆ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನಿತರರು ಜೋಕ್ಸ್​ಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

10ನೇ ತರಗತಿಯ ಪರೀಕ್ಷೆಗಳು ಮೇ 4ರಿಂದ ಪ್ರಾರಂಭವಾಗಬೇಕಿತ್ತು. ಅದಾಗ್ಯೂ, ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ ಕೊವಿಡ್19 ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆಯಿಂದಾಗಿ ಸರ್ಕಾರ ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ಧರಿಸಿತು. ಸಿಬಿಎಸ್​ಇ ಮಂಡಳಿಯ ಮೌಲ್ಯಮಾಪನದ ಪರ್ಯಾಯ ಆಧಾರದ ಮೇಲೆ ಮೌಲ್ಯಮಾನ ಮಾಡಲಾಗಿದೆ.

ಇದನ್ನೂ ಓದಿ:

Viral Video: ತನ್ನ ಸೊಂಡಿಲಿನ ಕೌಶಲ ಪ್ರದರ್ಶಿಸುತ್ತಾ ತುಂಟಾಟ ಮಾಡುತ್ತಿದೆ ಈ ಆನೆ ಮರಿ

Viral Video: ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಸ್ಟೆಪ್! ವಯಸ್ಸಿಗೂ ಮೀರಿದ ಅಭಿನಯ ನೀವೂ ನೋಡಿ ..

Follow us on

Related Stories

Most Read Stories

Click on your DTH Provider to Add TV9 Kannada