Viral Video: ತನ್ನ ಸೊಂಡಿಲಿನ ಕೌಶಲ ಪ್ರದರ್ಶಿಸುತ್ತಾ ತುಂಟಾಟ ಮಾಡುತ್ತಿದೆ ಈ ಆನೆ ಮರಿ

Elephant: ಆನೆಮರಿಯೊಂದು ತನ್ನ ಸೊಂಡಿಲಿನ ಕೌಶಲ್ಯವನ್ನು ತೋರಿಸುತ್ತಿರುವುದು ಈಗ ನೆಟ್ಟಿಗರ ಗಮನ ಸೆಳೆದಿದೆ.

Viral Video: ತನ್ನ ಸೊಂಡಿಲಿನ ಕೌಶಲ ಪ್ರದರ್ಶಿಸುತ್ತಾ ತುಂಟಾಟ ಮಾಡುತ್ತಿದೆ ಈ ಆನೆ ಮರಿ
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: shivaprasad.hs

Updated on: Aug 03, 2021 | 5:38 PM

ಅಂತರ್ಜಾಲದಲ್ಲಿ ಪ್ರಾಣಿಗಳು ತುಂಟಾಟವಾಡುತ್ತಿರುವ ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲಿ ಬೆಕ್ಕು, ನಾಯಿ ಮೊದಲಾದ ಸಾಕು ಪ್ರಾಣಿಗಳ ಕುರಿತಾದ ವಿಡಿಯೊಗಳೇ ಹೆಚ್ಚು. ಆದರೆ ಅಪರೂಪಕ್ಕೆ ಇತರ ಪ್ರಾಣಿಗಳೂ ಸದ್ದು ಮಾಡುತ್ತವೆ. ಅಂತೆಯೇ, ಇಲ್ಲೊಂದು ಆನೆ ಮರಿ ತನ್ನ ಆಟದಿಂದ ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ಅಂತರ್ಜಾಲದಲ್ಲಿ ವೈರಲ್ ಆಗಿದೆ. ‘ಒಲೋರಿನ್’ ಎಂಬ ಆನೆ ಮರಿಯೊಂದು ತನ್ನ ಸೊಂಡಿಲನ್ನು ಎಲ್ಲೆಡೆ ತಿರುಗಿಸುತ್ತಾ, ಕೌಶಲ್ಯವನ್ನು ಪ್ರದರ್ಶಸಿಸುತ್ತಿರುವುದು ಎಲ್ಲರ ಗಮನ ಸೆಳೆದಿದ್ದು, ವೈರಲ್ ಆಗಿದೆ.

ಶೆಲ್ಡ್ರಿಕ್ ವೈಲ್ಡ್​ಲೈಫ್ ಟ್ರಸ್ಟ್ ಟ್ವಿಟರ್​ನಲ್ಲಿ ಹಂಚಿಕೊಂಡಿರುವ 29 ಸೆಕೆಂಡ್​ಗಳ ವಿಡಿಯೊದಲ್ಲಿ ಪುಟ್ಟ ಆನೆ ಮರಿ ತನ್ನ ಸೊಂಡಿಲಿನ ಪರಾಕ್ರಮ ಪ್ರದರ್ಶಿಸುತ್ತಿದೆ. ಅದಕ್ಕೆ ಸುಂದರವಾದ ಟಿಪ್ಪಣಿಯನ್ನೂ ಬರೆದಿರುವ ಶೆಲ್ಡ್ರಿಕ್ ವೈಲ್ಡ್​ಲೈಫ್, ‘ಒಲೋರಿನ್ ತನ್ನ ಸೊಂಡಿಲಿನ ಕೌಶಲ್ಯಗಳನ್ನು ತೋರಿಸುತ್ತಿದೆ. ಇದುವರೆಗೆ ಅದು ಸಂರಕ್ಷಿತ ಅರಣ್ಯದಲ್ಲಿ ತನ್ನ ಜೀವನವನ್ನೂ ಆಹಾರವನ್ನೂ ಪ್ರೀತಿಯಿಂದ ಸವಿಯುತ್ತಾ ಬೆಳೆಯುತ್ತಿದೆ. ಅನಾಥ ಮರಿಯೊಂದನ್ನು ಕಾಪಾಡಿ ಬೆಳೆಸುತ್ತಿರುವುದು ಹೃದಯಪೂರ್ವಕ ಬೆಳವಣಿಗೆ ಎಂದು ಹಂಚಿಕೊಂಡಿದೆ. (“Twist & Lift! Olorien shows off her trunks skills, out browsing in the forest. For all her reserved ways, she has a real love of life – and food! It’s all the more heartening considering she was rescued as a starved orphan infant.”)

ವಿಡಿಯೊ ಇಲ್ಲಿದೆ:

ವಿಡಿಯೊದಲ್ಲಿ ತೋರಿಸಿರುವಂತೆ ಮರಿಯು ತನ್ನ ಸೊಂಡಿಲಿನ ಮೂಲಕ ಎಲೆಗಳನ್ನು ಕೀಳುತ್ತಾ ಆಟವಾಡುತ್ತಿದೆ. ವಿಡಿಯೊಕ್ಕೆ ಬಹಳಷ್ಟು ವೀಕ್ಷಣೆಗಳು ಲಭಿಸುತ್ತಿದ್ದು, ನೆಟ್ಟಿಗರು ಮರಿಯ ಆಟಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಆ ಆನೆಮರಿಗೆ ತನಗೆ ಏನು ಬೇಕೆಂದು ತಿಳಿದಿದೆ. ಎಷ್ಟು ಜಾಣ ಆನೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದು, ‘ಎಷ್ಟೊಂದು ಚಟುವಟಿಕೆಯಿಂದಿದೆ ಈ ಮರಿ’ ಎಂದು ಮತ್ತೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Telegram New Update: ಇನ್ಮುಂದೆ ಟೆಲಿಗ್ರಾಮ್​ನಲ್ಲಿ ಒಂದೇ ಸಲ 1000 ಮಂದಿಗೆ ವಿಡಿಯೋ ಕರೆ ಮಾಡ್ಬಹುದು

ಜಿಮ್ನಾಸ್ಟಿಕ್ ಸ್ಪರ್ಧಿಗಳನ್ನು ತನ್ನ ಬೇಟೆ ಎಂದು ಭಾವಿಸಿದ ಮುದ್ದಾದ ಬೆಕ್ಕು; ವಿಡಿಯೊ ವೈರಲ್

(Viral Video Of small elephant Olorien shows her skills)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ