ನವ ಜೋಡಿಗೆ ಉಡುಗೊರೆ ನೀಡಲು ಸ್ನೇಹಿತರ ಸಕತ್ ಪ್ಲಾನ್! ಗಿಫ್ಟ್ ನೋಡಿ ನಗುತ್ತಾ ನಾಚಿ ತಲೆ ತಗ್ಗಿಸಿದ ವಧು

ನವ ಜೋಡಿಗೆ ಉಡುಗೊರೆ ನೀಡಲು ಸ್ನೇಹಿತರ ಸಕತ್ ಪ್ಲಾನ್! ಗಿಫ್ಟ್ ನೋಡಿ ನಗುತ್ತಾ ನಾಚಿ ತಲೆ ತಗ್ಗಿಸಿದ ವಧು
ನವ ಜೋಡಿಗೆ ಉಡುಗೊರೆ ನೀಡಲು ಸ್ನೇಹಿತರ ಸಕತ್ ಪ್ಲಾನ್!

Viral Video: ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಮಾರಂಭದಲ್ಲಿ ಜರುಗುವ ಅದೆಷ್ಟೋ ತಮಾಷೆಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಸ್ನೇಹಿತರು ಕೊಟ್ಟ ಉಡುಗೊರೆ ನೋಡಿ ವಧು ನಾಚಿ ತಲೆ ತಗ್ಗಿಸಿದ್ದಾಳೆ.

TV9kannada Web Team

| Edited By: shruti hegde

Aug 03, 2021 | 12:40 PM

ಮದುವೆ ಸಮಾರಂಭಗಳಲ್ಲಿ ಮಜಾ ಮಾಡಿದಷ್ಟು ಸಂತೋಷ, ಖುಷಿ ಇನ್ನೆಲ್ಲು ಸಿಗುವುದಿಲ್ಲ. ಅದರಲ್ಲಿಯೂ ನಮ್ಮ ಆಪ್ತ ಸ್ನೇಹಿತರ ವಿವಾಹ (Wedding) ಸಂದರ್ಭದಲ್ಲಿ ಕಾಲೆಳೆಯುತ್ತಾ, ನಗುತ್ತಾ ವಿಶೇಷ ಆಚರಣೆಯನ್ನು ಸಂಭ್ರಮಿಸುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ (Social Media) ಮದುವೆ ಸಮಾರಂಭದಲ್ಲಿ ಜರುಗುವ ಅದೆಷ್ಟೋ ತಮಾಷೆಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ವೈರಲ್ (Viral Video) ಆಗಿದೆ. ಸ್ನೇಹಿತರು (Friends) ಕೊಟ್ಟ ಉಡುಗೊರೆ (Gift) ನೋಡಿ ವಧು ನಾಚಿ ತಲೆ ತಗ್ಗಿಸಿದ್ದಾಳೆ.

ಮದುವೆಯ ಆಚರಣೆಗಳನ್ನೆಲ್ಲಾ ಮುಗಿಸಿದ ಬಳಿಕ ಉಡುಗೊರೆ ಕೊಟ್ಟು ನವ ಜೋಡಿಗಳಿಗೆ ಆಶೀರ್ವದಿಸುವುದು ಮೊದಲಿನಿಂದಲೂ ಬಂದಿದೆ. ವಧು ವರನಿಗೆ ಅಕ್ಷತೆ ಹಾಕಿ ಹಿರಿಯರು ಆಶೀರ್ವದಿಸುತ್ತಾರೆ. ಈಗೆಲ್ಲಾ ಅತಿಥಿಗಳೂ ಸಹ ಉಡುಗೊರೆಯನ್ನು ನೀಡುವ ಪದ್ಧತಿ ಆಚರಣೆಗೆ ಬಂದಿದೆ. ಅದರಲ್ಲಿಯೂ ವಿಶೇಷವಾಗಿ ಆಪ್ತ ಸ್ನೇಹಿತರು ಸರ್ಪ್ರೈಸ್ ಗಿಫ್ಟ್ ಕೊಡುತ್ತಾರೆ ಎಂಬ ನಿರೀಕ್ಷೆ ಸಾಮಾನ್ಯ. ಹಾಗಿರುವಾಗ ಈ ಜೋಡಿಗಳ ಮದುವೆಯಲ್ಲಿ ಸ್ನೇಹಿತರೆಲ್ಲಾ ಸೇರಿ ಸಕತ್ ಪ್ಲಾನ್ ಮಾಡಿದ್ದಾರೆ. ಕೊಡುವ ಗಿಫ್ಟ್ ನೋಡುತ್ತಿದ್ದಂತೆಯೇ ವಧು ನಗುತ್ತಾ ನಾಚಿ ತಲೆ ತಗ್ಗಿಸಿದ್ದಾಳೆ.

ವಿಡಿಯೋ ನೋಡಲು ತಮಾಷೆಯಾಗಿದೆ. ವಧು, ವರ ವೇದಿಕೆಯ ಮೇಲೆ ಆಸೀನರಾಗಿದ್ದಾರೆ. ಸ್ನೇಹಿತರು ಒಬ್ಬರಾದ ಮೇಲೆ ಒಬ್ಬರು ವೇದಿಕೆ ಬರುತ್ತಾರೆ. ಒಂದೊಂದು ರೂಪಾಯಿ ನಾಣ್ಯವನ್ನು ಕೈಯಲ್ಲಿ ಇಟ್ಟು ಅವರೇ ಆಶೀರ್ವಾದ ಪಡೆಯುತ್ತಿದ್ದಾರೆ. ಸ್ನೇಹಿತರ ಈ ಕಪಿಚೇಷ್ಟೆ ನೋಡಿದ ನೆಟ್ಟಿಗರು ಹಾಸ್ಯ ಮಾಡಿ ನಕ್ಕಿದ್ದಾರೆ.

ಇದನ್ನೂ ಓದಿ:

Viral Video: ರೂಮ್ ತುಂಬಾ ಹೂವಿನ ಅಲಂಕಾರ ನೋಡಿ ಎಲ್ಲಿ ಮಲಗೋದು? ಎಂದ ವಧು; ವರನ ರಿಯಾಕ್ಷನ್ ವೈರಲ್

Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada