Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್

Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್
ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು!

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ವಿಶೇಷ ದಿನಕ್ಕಾಗಿ ವಧು ವರನಿಗೆ ತಯಾರಾಗಲು ಸಹಾಯ ಮಾಡುತ್ತಿದ್ದಾಳೆ. ಮೇಕಪ್ ಮಾಡುವುದರ ಜತೆಗೆ ಸಾಂಪ್ರದಾಯಿಕ ಉಡುಗೆ ತೊಡಿಸುತ್ತಿದ್ದಾಳೆ.

TV9kannada Web Team

| Edited By: shruti hegde

Aug 02, 2021 | 9:55 AM

ವಧು- ವರನ ನವಿರಾದ ಪ್ರೀತಿಯ ಬಂಧ ಮದುವೆ. ಸಡಗರ ಸಂಭ್ರಮದಿಂದ ಅಲಂಕಾರಗೊಂಡು ವಧು (Bride), ವರ (Groom) ಸಿದ್ಧರಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ(Social Media) ಮದುವೆ ಸಮಾರಂಭದ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತದೆ. ಇದೀಗ ವೈರಲ್ ಆದ ವಿಡಿಯೋವೂ ( Viral  Video) ಸಹ ಅಂಥದ್ದೇ. ಈಗತಾನೆ ಹಸೆ ಮಣೆ ಏರಲಿರುವ ಜೋಡಿ ಸುಂದರವಾಗಿ ಅಲಂಕಾರಗೊಳ್ಳುತ್ತಿದ್ದಾರೆ. ವಧು, ವರನನ್ನು ಸುಂದರವಾಗಿ ಕಾಣಿಸುವಂತೆ ಅಲಂಕಾರ ಮಾಡುತ್ತಿದ್ದಾಳೆ. ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದೆ.

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ವಿಶೇಷ ದಿನಕ್ಕಾಗಿ ವಧು ವರನಿಗೆ ತಯಾರಾಗಲು ಸಹಾಯ ಮಾಡುತ್ತಿದ್ದಾಳೆ. ಮೇಕಪ್ ಮಾಡುವುದರ ಜತೆಗೆ ಸಾಂಪ್ರದಾಯಿಕ ಉಡುಗೆ ತೊಡಿಸುತ್ತಿದ್ದಾಳೆ. ಇವರಿಬ್ಬರ ನವಿರಾದ ಕ್ಷಣವು ನೆಟ್ಟಿಗರಿಗೆ ಇಷ್ಟವಾಗುವಂತಿದೆ.

ಮದುವೆಯಲ್ಲಿ ವಧು – ವರರದ್ದೇ ಮುಖ್ಯ ಪಾತ್ರ. ಬಂದ ಅತಿಥಿಗಳೆಲ್ಲಾ ಮೊದಲು ನೋಡುವುದು ವಧು, ವರನನ್ನು. ಹಾಗಾಗಿ ಪ್ರತಿಯೊಬ್ಬರೂ ಸಹ ಮದುವೆಯಲ್ಲಿ ಸುಂದರವಾಗಿ ಕಾಣಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ವಧು ಕೂಡಾ ಅಂದದ ಉಡುಪು ತೊಟ್ಟು ನಿಂತಿದ್ದಾಳೆ. ತನ್ನ ಕೈಹಿಡಿಯುವವನೂ ಅಂದವಾಗಿ ಕಾಣಿಸಬೇಕೆಂದು ಸಹಾಯ ಮಾಡುತ್ತಿದ್ದಾಳೆ.

ಇಬ್ಬರೂ ಸಹ ಖುಷಿಯಿಂದ ಅಲಂಕಾರಗೊಂಡಿದ್ದಾರೆ. ಈಗತಾನೆ ದಾಂಪತ್ಯಕ್ಕೆ ಕಾಲಿಡಲು ಹೊರಟ ನವ ಜೋಡಿಗಳಿಗೆ ನೆಟ್ಟಿಗರು ಆಶೀರ್ವದಿಸಿದ್ದಾರೆ. ಇಬ್ಬರ ನಡುವಿನ ಪ್ರೀತಿ ಸದಾ ಕಾಲ ಹೀಗೇ ಇರಲಿ ಎಂದೂ ಹಾರೈಸಿದ್ದಾರೆ. ಒಳ್ಳೆಯ ಜೀವನವನ್ನು ನಡೆಸಿ ಎಂಬ ಹಾರೈಕೆಯ ಜತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

View this post on Instagram

A post shared by Weddingz.in (@weddingz.in)

ಇದನ್ನೂ ಓದಿ:

Viral Video: ಮದುವೆ ಮಂಟಪದಲ್ಲಿಯೂ ಲ್ಯಾಪ್​ಟಾಪ್​ ಹಿಡಿದು ಕುಳಿತ ವರ; ವಧುವಿನ ರಿಯಾಕ್ಷನ್ ಮಿಸ್ ಮಾಡ್ಕೊಳ್ಳೊ ಹಾಗೇ ಇಲ್ಲಾ!

Viral Video: ರೂಮ್ ತುಂಬಾ ಹೂವಿನ ಅಲಂಕಾರ ನೋಡಿ ಎಲ್ಲಿ ಮಲಗೋದು? ಎಂದ ವಧು; ವರನ ರಿಯಾಕ್ಷನ್ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada