ಕಾಲ್ಬೆರಳುಗಳಲ್ಲಿಯೇ ಪೆನ್ನು ಹಿಡಿದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿ; ಸ್ಪೂರ್ತಿ ತುಂಬುವ ಸುದ್ದಿ ಓದಲೇಬೇಕು

ಕಾಲ್ಬೆರಳುಗಳಲ್ಲಿಯೇ ಪೆನ್ನು ಹಿಡಿದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿ; ಸ್ಪೂರ್ತಿ ತುಂಬುವ ಸುದ್ದಿ ಓದಲೇಬೇಕು
ಸಾಂದರ್ಭಿಕ ಚಿತ್ರ

ಹುಟ್ಟಿದಾಗಿನಿಂದಲೂ ತನ್ನ ಕೈಗಳನ್ನು ಕಳೆದುಕೊಂಡ ವಿದ್ಯಾರ್ಥಿಗೆ ಓದು ಎಂದರೆ ಅಚ್ಚು- ಮೆಚ್ಚು. ದ್ವಿತೀಯ ಪರೀಕ್ಷೆಯಲ್ಲಿ ಕಾಲ್ಬೆರಳುಗಳ ಸಹಾಯದಿಂದ ಪರೀಕ್ಷೆ ಬರೆದು ಶೇ.70ರಷ್ಟು ಫಲಿತಾಂಶ ಪಡೆದಿದ್ದಾನೆ. ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಂತಿದ್ದಾನೆ.

TV9kannada Web Team

| Edited By: shruti hegde

Aug 02, 2021 | 12:00 PM

ಕಠಿಣ ಪರಿಶ್ರಮ ಮತ್ತು ಮನಸ್ಸಿನಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಂದು ಸಾಕ್ಷಿ ಇದೆ. ಹುಟ್ಟಿದಾಗಿನಿಂದಲೂ ತನ್ನ ಕೈಗಳನ್ನು ಕಳೆದುಕೊಂಡ ವಿದ್ಯಾರ್ಥಿಗೆ ಓದು ಎಂದರೆ ಅಚ್ಚು- ಮೆಚ್ಚು. ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು ಎಂಬ ಹುಮ್ಮಸ್ಸು. ಕಷ್ಟವಾದರೂ ಗುರಿಯನ್ನು ತಲುಪಲು ಇಷ್ಟಪಟ್ಟು ಕಾಲುಗಳ ಬೆರಳುಗಳಿಂದ ಬರೆಯುವ ಅಭ್ಯಾಸ ಮಾಡಿದ ಈ ವಿದ್ಯಾರ್ಥಿ. ದ್ವಿತೀಯ ಪರೀಕ್ಷೆಯಲ್ಲಿ ಕಾಲ್ಬೆರಳುಗಳ ಸಹಾಯದಿಂದ ಪರೀಕ್ಷೆ ಬರೆದು ಶೇ.70ರಷ್ಟು ಫಲಿತಾಂಶ ಪಡೆದಿದ್ದಾನೆ. ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಂತಿದ್ದಾನೆ.

ಲಕ್ನೋದ ತುಷಾರ್ ವಿಶ್ವಕರ್ಮ ತಮ್ಮ ಪಾದಗಳ ಸಹಾಯದಿಂದ ಪರೀಕ್ಷೆ ಬರೆದಿದ್ದಾರೆ. ಅವರ ಗುರಿಯನ್ನು ತಲುಪಲು ಸದಾ ಶ್ರಮಿಸುತ್ತಿದ್ದು ಒಳ್ಳೆಯ ಅಂಕ ಗಳಿಸುವ ಮೂಲಕ ಮೆಚ್ಚುಗೆಗೆ ಪಡೆದಿದ್ದಾನೆ.

ನಾನು ಹುಟ್ಟುವಾಗಲೇ ನನ್ನ ಕೈಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೆ ಇದು ನನ್ನ ನ್ಯೂನ್ಯತೆ ಎಂದು ನಾನು ಎಂದಿಗೂ ಭಾವಿಸಲಿಲ್ಲ. ನನ್ನ ಅಣ್ಣಂದಿರು ಶಾಲೆಗೆ ಹೋಗಲು ಪ್ರಾರಂಭಿಸಿದಾಗ, ನಾನೂ ಶಾಲೆಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹಠ ಮಾಡುತ್ತಿದ್ದೆ. ಆದರೆ ಬರೆಯುವ ಕಲೆಯನ್ನು ಹೇಗೆ ರೂಢಿಸಿಕೊಳ್ಳಲಿ ಎಂಬ ಚಿಂತೆ ಇತ್ತು. ಮನೆಯಲ್ಲಿ ಅಣ್ಣಂದಿರು ಅಭ್ಯಾಸ ಮಾಡುವಾಗಲೆಲ್ಲಾ ನನ್ನ ಕಾಲುಗಳ ಬೆರಳುಗಳ ಮೂಲಕ ಪೆನ್ನು ಹಿಡಿಯುವ ಅಭ್ಯಾಸ ಮಾಡಿಕೊಂಡೆ. ನನ್ನ ಎರಡು ಕಾಲುಗಳನ್ನೇ ಕೈಗಲಾಗಿ ಪರಿವರ್ತಿಸಿಕೊಂಡೆ ಎನ್ನುತ್ತಾರೆ ತುಷಾರ್.

ಪರೀಕ್ಷೆಯಲ್ಲಿ ಬರಹಗಾರರು ಸಲಹೆ ಅವಶ್ಯವೇ ಎಂದು ಕೇಳಿದಾಗ ತುಷಾರ್ ನಿರಾಕರಿಸಿದರು. ಆದರೆ ಸ್ವಲ್ಪ ಹೆಚ್ಚಿನ ಕಾಲಾವಕಾಶವನ್ನು ಕೇಳಿದರು. ಪರೀಕ್ಷೆಯಲ್ಲಿ ಕಾಲ್ಬೆರಳುಗಳಿಂದಲೇ ಉತ್ತರ ಬರೆದು ಶೇ. 70ರಷ್ಟು ಫಲಿತಾಂಶ ಪಡೆದಿದ್ದಾರೆ. ಕಠಿಣ ಪರಿಶ್ರಮಕ್ಕೆ ಒಳ್ಳೆಯ ಸಾಧನೆ ಎನ್ನುವ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ನನ್ನ ಉತ್ತರ ಪತ್ರಿಕೆ ಅಂದವಾಗಿ ಕಾಣಲು ನಾನು ಎರಡು ವಿಧದ ಪೆನ್ನಿನ ಬಳಕೆ ಮಾಡಿದ್ದೇನೆ. ನೀಲಿ ಹಾಗೂ ಕಪ್ಪು ಶಾಯಿಯ ಪೆನ್ನುನೊಂದಿಗೆ ಪರೀಕ್ಷೆ ಬರೆದಿದ್ದೇನೆ ಎಂದು ತುಷಾರ್ ಹೇಳಿದ್ದಾರೆ. ಸಣ್ಣ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ತುಷಾರ್ ತಂದೆ ಎಂದಿಗೂ ಮಗನನ್ನು ಬೆಂಬಲಿಸುತ್ತಾರೆ. ತುಷಾರ್, ಇಂಜಿನಿಯರ್ ಆಗುವ ಆಸೆ ಹೊಂದಿದ್ದು, ಸಾಧನೆಯತ್ತ ಸಾಗಲು ಪರಿಶ್ರಮ ಪಡುತ್ತಿದ್ದಾರೆ.

ನನ್ನನ್ನು ಶಾಲೆಗೆ ಸೇರಿಸಲು ತಂದೆ ರಾಕೇಶ್ ವಿಶ್ವಕರ್ಮ ತುಂಬಾ ಪ್ರಯತ್ನ ಪಟ್ಟಿದ್ದಾರೆ. ಕೆಲೆಡೆ ನನ್ನ ಪರಿಸ್ಥಿತಿ ನೋಡಿ ಶಾಲೆಗೆ ಸೇರಿಸಿಕೊಳ್ಳಲು ತಯಾರಿರಲಿಲ್ಲ. ಬಳಿಕವೇ ನಾನು ಕಾಲ್ಬೆರಳುಗಳಿಂದ ಬರೆಯುವ ಅಭ್ಯಾಸ ಮಾಡಿದೆ ಆಗ ನನ್ನನ್ನು ಶಾಲೆಗೆ ಸೇರಿಸಿಕೊಂಡರು. ನನ್ನ ಕಾಲುಗಳ ಮೂಲಕ ಪುಸ್ತಕದ ಹಾಳೆಗಳನ್ನೂ ತಿರುಗಿಸಬಲ್ಲೆ ಎಂದು ತುಷಾರ್ ಹೇಳಿದ್ದಾರೆ. ಈ ಕುರಿತಂತೆ ಇಂಡಿಯಾ ಟು ಡೇ ಸುದ್ದಿ ಮಾಡಿದೆ.

ಪ್ರತಿನಿತ್ಯ ಸುಮಾರು 6 ಗಂಟೆಗಳವರೆಗೆ ಅಭ್ಯಾಸ ಮಾಡುತ್ತಿದ್ದೆ. ನನ್ನನ್ನು ಬೆಂಬಲಿಸಿದ ಶಿಕ್ಷಕರಿಗೆ ನನ್ನ ಧನ್ಯವಾದಗಳು. ಪರೀಕ್ಷೆ ಬರೆಯಲು ನೆಲದ ಮೇಲೆ ಅವಕಾಶ ಕಲ್ಪಿಸಿಕೊಟ್ಟರು. ನಾನು ಪಡೆದ ಅಂಕದ ಬಗ್ಗೆ ನನಗೆ ಖುಷಿ ಇದೆ. 10ನೇ ತರಗತಿಯಲ್ಲಿ ಶೇ.67ರಷ್ಟು ಫಲಿತಾಂಶ ಪಡೆದಿದ್ದೆ ಇದೀಗ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಶೇ.70ರಷ್ಟು ಫಲಿತಾಂಶ ಪಡೆದಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

72 ವರ್ಷ ವಯಸ್ಕರನ್ನು ಹೆಗಲ ಮೇಲೆ ಹೊತ್ತುಕೊಂಡು ಲಸಿಕೆ ಕೆಂದ್ರಕ್ಕೆ ಸಾಗಿದ ಪೊಲೀಸ್​ ಸಿಬ್ಬಂದಿ; ಹೃದಯಸ್ಪರ್ಶಿ ವಿಡಿಯೋ ವೈರಲ್​

‘ನಾವೆಲ್ಲರೂ ಇವರಿಂದ ಕಲಿಯುವುದಿದೆ’ ಎಂದು ಸ್ಪೂರ್ತಿ ತುಂಬುವ ವಿಡಿಯೋ ಹಂಚಿಕೊಂಡ ಸಚಿನ್ ತೆಂಡೂಲ್ಕರ್

Follow us on

Related Stories

Most Read Stories

Click on your DTH Provider to Add TV9 Kannada