72 ವರ್ಷ ವಯಸ್ಕರನ್ನು ಹೆಗಲ ಮೇಲೆ ಹೊತ್ತುಕೊಂಡು ಲಸಿಕೆ ಕೆಂದ್ರಕ್ಕೆ ಸಾಗಿದ ಪೊಲೀಸ್ ಸಿಬ್ಬಂದಿ; ಹೃದಯಸ್ಪರ್ಶಿ ವಿಡಿಯೋ ವೈರಲ್
ಹೃದಯಸ್ಪರ್ಶಿ ವಿಡಿಯೋ ಇದೀಗ ಬಾರೀ ಸುದ್ದಿಯಲ್ಲಿದೆ. ಇಲ್ಲಿಯವರೆಗೆ 60 ರಿಟ್ವೀಟ್ ಮತ್ತು 420 ಲೈಕ್ಸ್ಗಳನ್ನು ಪಡೆದುಕೊಂಡಿದೆ. 6,600ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ.
ಪೊಲೀಸರು ಮತ್ತು ಸಶಸ್ತ್ರ ಪಡೆ ಜನರನ್ನು ರಕ್ಷಿಸಲು ಪ್ರತಿ ಕ್ಷಣವೂ ಕರ್ತವ್ಯಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜನರ ಏಳಿಗೆಯನ್ನು ಬಯಸುತ್ತಾ ರಕ್ಷಣೆಗೆಗಾಗಿ ನಿಂತಿರುತ್ತಾರೆ. ಇಲ್ಲೊಂದು ಹೃದಸ್ಪರ್ಶಿ ವಿಡಿಯೋ ಬಾರೀ ಸುದ್ದಿಯಲ್ಲಿದೆ. 72 ವರ್ಷದ ವಯಸ್ಕರನ್ನು ಹೆಗಲೆ ಮೇಲೆ ಹೊತ್ತು ಸಾಗಿದ ಪೊಲೀಸ್ ಸಿಬ್ಬಂದಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಸಿಬ್ಬಂದಿಗೆ ನೆಟ್ಟಿಗರು, ಸಲಾಂ.. ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಎಲ್ಲರ ಮನಗೆದ್ದಿದೆ. ಸಾಂಕ್ರಾಮಿಕ ರೋಗ ಹರಡುತ್ತಿದ್ದ ಕಠಿಣ ಸಮಯದಲ್ಲಿ ಭರವಸೆಯ ದಾರಿ ದೀಪವಾಗಿ ಪೊಲೀಸ್ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಕರ್ತವ್ಯಬದ್ಧ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಕ್ಲಿಪ್ಅನ್ನು ಈಶಾನ್ಯ ಪ್ರದೇಶ ಅಭಿವೃದ್ಧಿಯ ಕೇಂದ್ರ ಸಚಿವರಾಗಿರುವ ಡಾ. ಜಿತೇಂದ್ರ ಸಿಂಗ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಮೋಹನ್ ಸಿಂಗ್ ಎಂಬ ಪೊಲೀಸ್ ಸಿಬ್ಬಂದಿ 72 ವರ್ಷದ ಅಬ್ದುಲ್ ಗನಿ ಎಂಬ ವಯಸ್ಕರನ್ನು ಹೆಗಲ ಮೇಲೆ ಹೊತ್ತುಕೊಂಡು ಕೊರೊನಾ ಲಸಿಕೆ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದಾರೆ. ಇವರು ರಾಜ್ಯದ ರಿಯಾಸಿ ಜಿಲ್ಲೆಗೆ ಸಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
VIDEO:Proud of our frontline warrior SPO Mohan Singh from district #Reasi who helped 72 year old Abdul Gani by lifting him on his shoulder to get vaccinated. #IndiaFightsCorona pic.twitter.com/QAF36M560u
— Dr Jitendra Singh (@DrJitendraSingh) July 2, 2021
ಲಸಿಕೆ ಕೆಂದ್ರಕ್ಕೆ 72 ರ್ಷದ ವಯಸ್ಕರನ್ನು ಹೆಗಲ ಮೇಲೆ ಹೊತ್ತುಕೊಂಡು ರಿಯಾಸಿ ಜಿಲ್ಲೆಗೆ ಸಾಗಿದ ಎಸ್ಪಿಒ ಮೋಹನ್ ಸಿಂಗ್ರನ್ನು ನೋಡಿದರೆ ಹೆಮ್ಮೆಯಾಗುತ್ತದೆ ಎಂದು ಬರೆದಿಕೊಳ್ಳಲಾಗಿದೆ. ಇಂಡಿಯಾ ಫೈಟ್ಸ್ ಕೊರೊನಾ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟ್ ಹಂಚಿಕೊಳ್ಳಲಾಗಿದೆ.
ಹೃದಯಸ್ಪರ್ಶಿ ವಿಡಿಯೋ ಇದೀಗ ಬಾರೀ ಸುದ್ದಿಯಲ್ಲಿದೆ. ಇಲ್ಲಿಯವರೆಗೆ 60 ರಿಟ್ವೀಟ್ ಮತ್ತು 420 ಲೈಕ್ಸ್ಗಳನ್ನು ಪಡೆದುಕೊಂಡಿದೆ. 6,600ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಮೋಹನ್ ಸಿಂಗ್ ಅವರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ಬದ್ಧತೆಗೆ ಶ್ಲಾಘನೆ ವ್ಯಕ್ತವಾಗಿದೆ. ಇವರ ಮಾನವೀಯ ವರ್ತನೆಯನ್ನು ಶ್ಲಾಘಿಸಲೇಬೇಕು.. ಧನ್ಯವಾದಗಳು ಎಂದು ಇನ್ನು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ:
Viral Video: ಇದ್ಯಾವ ಜನ್ಮದ ಬಂಧವೋ?-ಒಂದೇ ತಟ್ಟೆಯಲ್ಲಿ ಊಟ ಮಾಡಿದ ಹಕ್ಕಿ ಮತ್ತು ಮನುಷ್ಯ
ನಿವೃತ್ತ ಚಾಲಕನನ್ನು ಕೂರಿಸಿಕೊಂಡು ಕಾರು ಚಾಲನೆ; ಹೃದಯಸ್ಪರ್ಶಿ ಕೊಡುಗೆ ನೀಡಿದ ಕೊಪ್ಪಳ ತಹಶೀಲ್ದಾರ್
Published On - 11:45 am, Mon, 5 July 21