ನಿವೃತ್ತ ಚಾಲಕನನ್ನು ಕೂರಿಸಿಕೊಂಡು ಕಾರು ಚಾಲನೆ; ಹೃದಯಸ್ಪರ್ಶಿ ಕೊಡುಗೆ ನೀಡಿದ ಕೊಪ್ಪಳ ತಹಶೀಲ್ದಾರ್

ಇಲಾಖೆ ವಾಹನದಲ್ಲಿ ನಿವೃತ್ತ ಚಾಲಕ ರಾಜೇಸಾಬ್ ನನ್ನ ಕೂರಿಸಿಕೊಂಡು ಸ್ವತಹ ತಹಶೀಲ್ದಾರ್ ಸಿದ್ದೇಶ್ ರವರು ಚಾಲಕನ ಮನೆಯವರೆಗೂ ಡ್ರಾಪ್ ಮಾಡಿದ್ದಾರೆ. ತಾನೇ ವಾಹನ ಡ್ರೈವ್ ಮಾಡಿ ನಿವೃತ್ತ ಚಾಲಕನಿಗೆ ಅಪರೂಪದ ಕೊಡುಗೆ ನೀಡಿದ್ದಾರೆ. ಸದ್ಯ ತಹಶೀಲ್ದಾರ್ ಸಿದ್ದೇಶ್ ವಾಹನ ಚಲಾಯಿಸೋ ದ್ರಶ್ಯಗಳು ವೈರಲ್ ಆಗಿವೆ.

ನಿವೃತ್ತ ಚಾಲಕನನ್ನು ಕೂರಿಸಿಕೊಂಡು ಕಾರು ಚಾಲನೆ; ಹೃದಯಸ್ಪರ್ಶಿ ಕೊಡುಗೆ ನೀಡಿದ ಕೊಪ್ಪಳ ತಹಶೀಲ್ದಾರ್
ನಿವೃತ್ತ ಚಾಲಕನನ್ನು ಕೂರಿಸಿಕೊಂಡು ಕಾರು ಚಲಾಯಿಸಿದ ತಹಶೀಲ್ದಾರ್
Follow us
ಆಯೇಷಾ ಬಾನು
|

Updated on:Jun 01, 2021 | 11:06 AM

ಕೊಪ್ಪಳ: ನಿನ್ನೆ, ಮೇ 31 ಸರ್ಕಾರದ ನಾನಾ ಇಲಾಖೆಗಳಲ್ಲಿ ಅನೇಕ ಅಧಿಕಾರಿಗಳು, ಸಿಬ್ಬಂದಿಗೆ ತಮ್ಮ ಸೇವಾವಧಿಯ ಕೊನೆಯ ದಿನ. ಅದು ಇಲಾಖೆ ಮತ್ತು ಸಿಬ್ಬಂದಿಗೆ ಅತ್ಯಂತ ಮಹತ್ವದ ದಿನ. ಅನೇಕ ನೆನಪುಗಳ ಮೆರವಣಿಗೆಯಾಗುವ ದಿನ ಅದು. ಯಾವುದೇ ಸಿಬ್ಬಂದಿಗೆ ಆ ದಿನ ಅತ್ಯಂತ ಮಹತ್ವದ, ಹೃದಯಸ್ಪರ್ಶಿ ದಿನವಾಗಲಿ ಎಂದು ಬಯಸುವುದು ಸಹಜ. ಅದಕ್ಕೆ ತಕ್ಕಂತೆ ನಿನ್ನೆ ಇಲ್ಲೊಂದು ಹೃದಯಸ್ಪರ್ಶಿ ಘಟನೆ ನಡೆದಿದೆ.

ತಮ್ಮ ವಾಹನದ ಚಾಲಕ ನಿವೃತ್ತಿಯಾದ ಹಿನ್ನೆಲೆಯಲ್ಲಿ ಕೊಪ್ಪಳದ ತಹಶೀಲ್ದಾರ್ ವಿಶೇಷ ಗೌರವದೊಂದಿಗೆ ಆತನಿಗೆ ಬೀಳ್ಕೊಡಿಗೆ ಕೊಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಹಶೀಲ್ದಾರ್ ಸಿದ್ದೇಶ್ ನಿವೃತ್ತಿಯಾದ ಚಾಲಕನನ್ನು ವಾಹನದಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸುವ ಮೂಲಕ ಹೃದಯಸ್ಪರ್ಶಿ ಕೊಡುಗೆ ನೀಡಿದ್ದಾರೆ.

ಇಲಾಖೆಯ ವಾಹನದಲ್ಲಿ ನಿವೃತ್ತ ಚಾಲಕ ರಾಜೇಸಾಬ್ ಅವರನ್ನು ಕೂರಿಸಿಕೊಂಡು ಸ್ವತಃ ತಹಶೀಲ್ದಾರ್ ಸಿದ್ದೇಶ್ ಅವರು ಚಾಲಕನ ಮನೆಯವರೆಗೂ ತೆರಳಿ, ಡ್ರಾಪ್ ಮಾಡಿದ್ದಾರೆ. ತಾನೇ ವಾಹನ ಡ್ರೈವ್ ಮಾಡಿ ನಿವೃತ್ತ ಚಾಲಕನಿಗೆ ಅಪರೂಪದ ಕೊಡುಗೆ ನೀಡಿದ್ದಾರೆ. ಸದ್ಯ ತಹಶೀಲ್ದಾರ್ ಸಿದ್ದೇಶ್ ವಾಹನ ಚಲಾಯಿಸೋ ದೃಶ್ಯಗಳು ವೈರಲ್ ಆಗಿವೆ.

ಇನ್ನು ತಹಶೀಲ್ದಾರ್​ರ ಈ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ನಿವೃತ್ತ ಚಾಲಕ ರಾಜೇಸಾಬ್ ತನ್ನ ಅಧಿಕಾರಿಯ ಹೃದಯಸ್ಪರ್ಶಿ ಕೊಡುಗೆಗೆ ಧನ್ಯವಾದ ತಿಳಿಸಿದ್ದು, ಭಾವುಕರಾಗಿದ್ದಾರೆ.

koppal tahsildar

ನಿವೃತ್ತ ಚಾಲಕನನ್ನು ಕೂರಿಸಿಕೊಂಡು ಕಾರು ಚಲಾಯಿಸಿದ ತಹಶೀಲ್ದಾರ್

ಇದನ್ನೂ ಓದಿ: ಸೋನು ಸೂದ್​ ದುಡ್ಡಿಗಾಗಿ ಹಪಾಹಪಿಸುವ ವ್ಯಕ್ತಿ ಆಗಿದ್ದರು; ಇನ್ನೊಂದು ಮುಖ ತೆರೆದಿಟ್ಟ ನಿರ್ಮಾಪಕ

Published On - 10:08 am, Tue, 1 June 21