AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Abhijit Mukherjee ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರಲಿದ್ದಾರೆ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ

West Bengal:ಕಳೆದ ತಿಂಗಳು ಕೊಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಭೇಟಿಯಾದ ನಂತರ ಅಭಿಜಿತ್ ಮುಖರ್ಜಿ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಈ ವರದಿಗಳು ಬಂದಿವೆ.

Abhijit Mukherjee ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರಲಿದ್ದಾರೆ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ
ಅಭಿಜಿತ್ ಮುಖರ್ಜಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jul 05, 2021 | 2:59 PM

Share

ಕೊಲ್ಕತ್ತಾ: ದಿವಂಗತ ರಾಷ್ಟ್ರಪತಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ತೃಣಮೂಲ ಕಾಂಗ್ರೆಸ್ ಗೆ (ಟಿಎಂಸಿ) ಸೇರುವುದು ಬಹುತೇಕ ಖಚಿತವಾಗಿದೆ. ಟಿಎಂಸಿ ನಾಯಕತ್ವ ಮತ್ತು ಪಶ್ಚಿಮ ಬಂಗಾಳದ ಮಾಜಿ ಕಾಂಗ್ರೆಸ್ ಜಂಗೀಪುರ ಸಂಸದ ಅಭಿಜಿತ್ ನಡುವೆ ಹಲವು ವಾರಗಳಿಂದ ಮಾತುಕತೆ ನಡೆಯುತ್ತಿದೆ. ಅಭಿಜಿತ್ ಮುಖರ್ಜಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಔಟ್ ಲುಕ್ ವರದಿ ಮಾಡಿದೆ. ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವನ್ನು ಬೆಂಬಲಿಸಿ ಮುಖರ್ಜಿ ನಿಯಮಿತವಾಗಿ ಟ್ವೀಟ್ ಮಾಡುತ್ತಿದ್ದರು.

ಜೂನ್ 25 ರಂದು ಮುಖರ್ಜಿ ಅವರು ನಕಲಿ ವ್ಯಾಕ್ಸಿನೇಷನ್ ಕ್ಯಾಂಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾನರ್ಜಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು ” ಐಎಎಸ್ ಅಧಿಕಾರಿ ದೇಬಂಜನ್ ದೇಬ್ ಹೆಸರಿನಲ್ಲಿ ನಕಲಿ ವ್ಯಾಕ್ಸಿನೇಷನ್ ಕ್ಯಾಂಪ್‌ ಪ್ರಕರಣದಲ್ಲಿ ದೀದಿಯನ್ನು ದೂಷಿಸುವವರು ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮೊದಲಾದ ಹಗರಣಗಳಿಗಾಗಿ ಮೋದಿ ಜಿ ಅವರನ್ನು ದೂಷಿಸಬೇಕು. ಆದ್ದರಿಂದ ಪಶ್ಚಿಮ ಬಂಗಾಳ ಸರ್ಕಾರವನ್ನು ವೈಯಕ್ತಿಕ ಕೃತ್ಯಕ್ಕೆ ದೂಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದರು.

ಕಳೆದ ತಿಂಗಳು ಕೊಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಭೇಟಿಯಾದ ನಂತರ ಮುಖರ್ಜಿ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಈ ವರದಿಗಳು ಬಂದಿವೆ.

ಈ ಬೆಳವಣಿಗೆಯು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿಗೆ ಮತ್ತಷ್ಟು ತೊಂದರೆ ಉಂಟುಮಾಡಬಹುದು. ಇದು ಪಕ್ಷದ ಹಿರಿಯ ನಾಯಕತ್ವ, ಘಟಕ ಮತ್ತು ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ನಡುವೆ ವ್ಯಾಪಕವಾದ ಬಿರುಕನ್ನು ಕಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಪಶ್ಚಿಮ ಬಂಗಾಳ ರಾಜ್ಯಪಾಲರ ವಿರುದ್ಧ ಮಮತಾ ಬ್ಯಾನರ್ಜಿ ಭ್ರಷ್ಟಾಚಾರ ಆರೋಪ: ನಾನು ಅಂಥವನಲ್ಲ ಎಂದ ಜಗದೀಪ್ ಧನಕರ್  

(Pranab Mukherjee’s Son former Congress Jangipur MP Abhijit Mukherjee set to join the Trinamool Congress)

Published On - 1:43 pm, Mon, 5 July 21

ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್