AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಮೀನು ಅರ್ಜಿ ವಿಚಾರಣೆಯ ದಿನವೇ ಭೀಮಾ ಕೊರೆಗಾಂವ್ ಗಲಭೆ ಆರೋಪಿ ಫಾದರ್ ಸ್ಟಾನ್ ಸ್ವಾಮಿ ನಿಧನ

‘ತುಂಬಾ ಭಾರವಾದ ಹೃದಯದಿಂದ ನಾನು ಈ ವಿಷಯವನ್ನು ತಿಳಿಸುತ್ತಿದ್ದೇನೆ. ಫಾದರ್ ಸ್ಟಾನ್ ಸ್ವಾಮಿ ನಿಧನರಾಗಿದ್ದಾರೆ’ ಎಂದು ಸ್ಟಾನ್ ಸ್ವಾಮಿ ಅವರನ್ನು ದಾಖಲಿಸಿದ್ದ ಹೋಲಿ ಫ್ಯಾಮಿಲಿ ಆಸ್ಪತ್ರೆಯ ವೈದ್ಯ ಡಾ.ಡಿಸೋಜಾ ಹೇಳಿದರು.

ಜಾಮೀನು ಅರ್ಜಿ ವಿಚಾರಣೆಯ ದಿನವೇ ಭೀಮಾ ಕೊರೆಗಾಂವ್ ಗಲಭೆ ಆರೋಪಿ ಫಾದರ್ ಸ್ಟಾನ್ ಸ್ವಾಮಿ ನಿಧನ
ಫಾದರ್ ಸ್ಟಾನ್ ಸ್ವಾಮಿ
Ghanashyam D M | ಡಿ.ಎಂ.ಘನಶ್ಯಾಮ
|

Updated on:Jul 05, 2021 | 4:08 PM

Share

ಮುಂಬೈ: ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಿರಿಯ ಬುಡಕಟ್ಟು ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ (84) ಸೋಮವಾರ ಮಧ್ಯಾಹ್ನ 1.30ಕ್ಕೆ ನಿಧನರಾದರು. ಸ್ವಾಮಿ ಅವರ ವಕೀಲರು ಬಾಂಬೆ ಹೈಕೋರ್ಟ್​ಗೆ ಈ ಮಾಹಿತಿ ನೀಡಿದರು. ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡಬೇಕೆಂಬ ಅರ್ಜಿಯ ವಿಚಾರಣೆ ನಡೆಯುತ್ತಿದ್ದಾಗಲೇ ಸ್ವಾಮಿ ನಿಧನದ ಸುದ್ದಿಯೂ ಹೈಕೋರ್ಟ್​ಗೆ ತಲುಪಿತು.

ನ್ಯಾಯಮೂರ್ತಿಗಳಾದ ಎಸ್​.ಎಸ್​.ಶಿಂದೆ ಮತ್ತು ಎನ್​.ಜೆ.ಜಮಾದರ್​ ಅವರಿದ್ದ ನ್ಯಾಯಪೀಠವು ಸ್ಟಾನ್ ಸ್ವಾಮಿ ಜಾಮೀನು ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಆರಂಭಿಸಿದರು. ಈ ವೇಳೆ ವಕೀಲ ಮಿಘಿರ್ ದೇಸಾಯಿ ಮಾತನಾಡಿ, ‘ಪಾದ್ರಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರು ನ್ಯಾಯಾಲಯಕ್ಕೆ ವಿಷಯವೊಂದನ್ನು ತಿಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದರು.

ನ್ಯಾಯಾಲಯವು ವೈದ್ಯರಿಗೆ ಹೇಳಿಕೆ ನೀಡಲು ಅನುಮತಿ ನೀಡಿತು. ‘ತುಂಬಾ ಭಾರವಾದ ಹೃದಯದಿಂದ ನಾನು ಈ ವಿಷಯವನ್ನು ತಿಳಿಸುತ್ತಿದ್ದೇನೆ. ಫಾದರ್ ಸ್ಟಾನ್ ಸ್ವಾಮಿ ನಿಧನರಾಗಿದ್ದಾರೆ’ ಎಂದು ಸ್ಟಾನ್ ಸ್ವಾಮಿ ಅವರನ್ನು ದಾಖಲಿಸಿದ್ದ ಹೋಲಿ ಫ್ಯಾಮಿಲಿ ಆಸ್ಪತ್ರೆಯ ವೈದ್ಯ ಡಾ.ಡಿಸೋಜಾ ಹೇಳಿದರು. ಶನಿವಾರ ಸಂಜೆ 4.30ಕ್ಕೆ ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ಬದುಕಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದರು.

ಅತ್ಯಂತ ವಿನಮ್ರತೆಯಿಂದ ಈ ಮಾತು ಹೇಳುತ್ತಿದ್ದೇವೆ. ಸ್ಟಾನ್ ಸ್ವಾಮಿ ನಿಧನರಾದ ವಿಷಯ ತಿಳಿದು ಆಘಾತವಾಯಿತು. ನಮ್ಮೆದುರು ಅರ್ಜಿ ಬಂದ ಮೊದಲ ದಿನವೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಆದೇಶ ನೀಡಿದ್ದೆವು ಎಂದು ನೆನಪಿಸಿಕೊಂಡಿತು.

ಭೀಮಾ ಕೊರೆಗಾಂವ್-ಏಳ್ಗರ್ ಪರಿಷತ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (National Investigation Agency – NIA) ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕಾಯ್ದೆಯ ಅನ್ವಯ ಬಂಧಿಸಿದ್ದ ಕೊನೆಯ ವ್ಯಕ್ತಿ ಸ್ಟಾನ್ ಸ್ವಾಮಿ. ಅಕ್ಟೋಬರ್ 8, 2020ರಂದು ಸ್ಟಾನ್ ಸ್ವಾಮಿ ಅವರನ್ನು ಬಂಧಿಸಲಾಗಿತ್ತು.

ಕಳೆದ ಶನಿವಾರ ಸಂಜೆ 4.30ಕ್ಕೆ ಸ್ಟಾನ್ ಸ್ವಾಮಿ ಅವರಿಗೆ ಹೃದಯಘಾತವಾಗಿತ್ತು. ನಾವು ಎಲ್ಲ ಪ್ರಯತ್ನಗಳನ್ನು ಮಾಡಿದರೂ ಅವರ ದೇಹಸ್ಥಿತಿ ಸುಧಾರಿಸಲಿಲ್ಲ’ ಎಂದು ಸ್ವಾಮಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳಿದರು. ವೈದ್ಯರು ಅಥವಾ ಆಸ್ಪತ್ರೆ ವಿರುದ್ಧ ನಮಗೆ ಯಾವುದೇ ಅಸಮಾಧಾನವಿಲ್ಲ ಎಂದು ವಕೀಲರು ಹೇಳಿದರು. ಫಾದರ್ ಸ್ವಾಮಿ ಅವರ ಪಾರ್ಥಿವ ಶರೀರವನ್ನು ಸೇಂಟ್ ಕ್ಸೇವಿಯರ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಫಾದರ್ ಫ್ರಾನ್ಸಿಸ್​ ಅವರಿಗೆ ನೀಡಬೇಕೆಂದು ನ್ಯಾಯಾಲಯ ಸೂಚಿಸಿತು.

ಅವರು ಓರ್ವ ಪಾದ್ರಿಯಾಗಿದ್ದರು. ಅವರಿಗೆ ಯಾವುದೇ ಕುಟುಂಬವಿಲ್ಲ. ಅವರ ನಂಬಿಕೆಯ ಪಂಥವಾದ ಜೆಸುಯಿಸ್ಟ್​ಗಳು ಮಾತ್ರವೇ ಅವರ ಕುಟುಂಬ ಎಂದು ವಕೀಲ ದೇಸಾಯಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಶರೀರ ಹಸ್ತಾಂತರಿಸುವ ಮೊದಲು ಮರಣೋತ್ತರ ಪರೀಕ್ಷೆ ನಡೆಸುವಂತೆ ಮತ್ತು ಅಟಾಪ್ಸಿ ವರದಿಯನ್ನು ತನ್ನ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿತು.

ಆದಿವಾಸಿಗಳ ಸ್ವಾವಲಂಬನೆಗೆ ಶ್ರಮಿಸುತ್ತಿದ್ದ ಬಗೈಚಾ ಸಂಸ್ಥೆಯನ್ನು ಫಾದರ್ ಸ್ಟಾನ್ ಸ್ಥಾಪಿಸಿದ್ದರು. ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಮಾವೋವಾದಿಗಳು ಎಂಬ ಆರೋಪ ಹೊರಿಸಿ ಬಂಧಿಸುವುದನ್ನು ಈ ಸಂಸ್ಥೆ ವಿರೋಧಿಸಿತ್ತು. ಬಗೈಚಾ ಸಂಸ್ಥೆಯು ಮಾವೋವಾದಿಗಳ ಅಂಗಸಂಸ್ಥೆ ಎನಿಸಿದ ವಿಸ್ತಾಪನ್ ವಿರೋಧಿ ಜನ್ ವಿಕಾಸ್ ಆಂದೋಲನ್ ಜೊತೆಗೆ ನಂಟು ಹೊಂದಿತ್ತು ಎಂದು ಎನ್​ಐಎ ಆರೋಪಿಸಿತ್ತು.

(Father Stan Swamy Accuced in Elgar Parishad Case Passes Away Ahead Of His Bail Hearing In Bombay High Court dmg)

ಇದನ್ನೂ ಓದಿ: ಭೀಮಾ-ಕೋರೆಗಾಂವ್ ಕದನಕ್ಕೆ 203 ವರ್ಷ; ಭಾರತದ ದಲಿತ ಕಥನದಲ್ಲಿ ಈ ಯುದ್ಧಕ್ಕೆ ಏಕಿಷ್ಟು ಪ್ರಾಮುಖ್ಯ?

ಇದನ್ನೂ ಓದಿ: ಭೀಮಾ ಕೋರೆಗಾಂವ್​ ಪ್ರಕರಣ: ಬಂಧಿತ ಆರೋಪಿ ರೋನಾ ವಿಲ್ಸನ್​ ಲ್ಯಾಪ್​ಟಾಪ್​ ಹ್ಯಾಕ್​​ ಮಾಡಿಲ್ಲ ಎಂದ ಎನ್​ಐಎ

Published On - 3:33 pm, Mon, 5 July 21

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!