NASA: ದಯವಿಟ್ಟು ಗಮನಿಸಿ, ‘ನಿಮಗೆ ಮಂಗಳ ಗ್ರಹದ ಅಂಗಳದಿಂದ ಇಮೈಲ್ ಬಂದಿದೆ’

MARS: 'ನಿಮಗೆ ಮಂಗಳ ಗ್ರಹದಿಂದ ಇಮೈಲ್ ಬಂದಿದೆ ಎಂಬ ಒಕ್ಕಣೆಯಲ್ಲಿ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾವು ಕೆಂಪು ಗ್ರಹದ ಚಿತ್ರಗಳನ್ನು ಹಂಚಿಕೊಂಡಿದೆ.

NASA: ದಯವಿಟ್ಟು ಗಮನಿಸಿ, 'ನಿಮಗೆ ಮಂಗಳ ಗ್ರಹದ ಅಂಗಳದಿಂದ ಇಮೈಲ್ ಬಂದಿದೆ'
ನಾಸಾ ಬಿಡುಗಡೆ ಮಾಡಿರುವ ಚಿತ್ರ (ಕೃಪೆ: ನಾಸಾ)
Follow us
TV9 Web
| Updated By: shivaprasad.hs

Updated on:Aug 01, 2021 | 3:01 PM

ಸೌರಮಂಡಲದಲ್ಲಿ ಬಹುಶಃ ಭೂಮಿಯನ್ನು ಹೊರತುಪಡಿಸಿದರೆ, ವಿಜ್ಞಾನಿಗಳು ಮತ್ತೊಂದು ಗ್ರಹದ ಕುರಿತು ಅಧ್ಯಯನಕ್ಕಾಗಿ ಯಾವಾಗಲೂ ತವಕಿಸುತ್ತಾರೆ ಎಂದರೆ ಅದು ಮಂಗಳ ಗ್ರಹ. ಅಲ್ಲಿ ಜೀವಿಗಳು ವಾಸ ಮಾಡಬಹುದೇ, ಅಲ್ಲಿ ನೀರಿನ ಸೆಲೆ ಇದೆಯೇ ಎಂಬ ವಿಚಾರದಿಂದ ತೊಡಗಿ ಹಲವು ಮಾದರಿಯಲ್ಲಿ ಮಂಗಳನ ಅಂಗಳದಲ್ಲಿ ಅಧ್ಯಯನಗಳು ನಡೆಯುತ್ತಿವೆ. ಈ ಕುರಿತು ನಾಸಾ, ಇಸ್ರೋ ಸೇರಿದಂತೆ ವಿಶ್ವದ ಹಲವು ಬಾಹ್ಯಾಕಾಶ ಅಧ್ಯಯನ ಕೇಂದ್ರಗಳು ಅಧ್ಯಯನ ನಡೆಸುತ್ತಿದ್ದು, ಅಲ್ಲಿ ದೊರೆತ ವಿಸ್ಮಯಕಾರಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತವೆ. ಇದರಿಂದಾಗಿ ಭುವಿಯ ಜನರಿಗೆ ಮಂಗಳನ ಕುರಿತು ಮತ್ತಷ್ಟು ಕುತೂಹಲವೂ, ಆಸಕ್ತಿಯೂಮೂಡಬಹುದು ಎಂಬುದು ಅವರ ಅಂಬೋಣ.ಅದೇ ಮಾದರಿಯಲ್ಲಿ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳನ ಅಂಗಳದ ಚಿತ್ರವೊಂದನ್ನು ಹಂಚಿಕೊಂಡು, ‘ನಿಮಗೆ ಮಂಗಳನ ಅಂಗಳದಿಂದ ಮೈಲ್ ಒಂದು ಬಂದಿದೆ’ ಎಂದು ಒಕ್ಕಣೆ ನೀಡಿ ಎಲ್ಲರ ಗಮನ ಸೆಳೆದಿದೆ.

ಇತ್ತೀಚೆಗೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ನಾಸಾ ತನ್ನ ‘ಮಾರ್ಸ್ ರೆಕನಾಸಿಸ್ಟೆನ್ಸ್ ಆರ್ಬಿಟರ್’ ಸೆರೆ ಹಿಡಿದಿರುವ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಅದಕ್ಕೆ ಸಣ್ಣ ಟಿಪ್ಪಣಿಯನ್ನೂ ಬರೆದಿದ್ದು, ‘ನಿಮಗೆಲ್ಲರಿಗೂ ಮಂಗಳದ ನೆಲದಿಂದ ಒಂದು ಮೈಲ್ ಬಂದಿದೆ. ಇವು ಮಂಗಳನ‌ ಅಂಗಳದ ವಿಭಿನ್ನ ಮೇಲ್ಮೈಯನ್ನು ಮತ್ತು ಅದರ ವೈಶಿಷ್ಟ್ಯಗಳನ್ನು ವಿವರಿಸಬಲ್ಲವು.’ ಎಂದು ಅದು ತಿಳಿಸಿದೆ.

ಒಟ್ಟು ಮೂರು ಚಿತ್ರಗಳನ್ನು ನಾಸಾ ಹಂಚಿಕೊಂಡಿದ್ದು ಪ್ರತಿಯೊಂದರ ವಿಶೇಷತೆಯನ್ನು ಅದು ವಿವರಿಸಿದೆ. ಮೊದಲ ಚಿತ್ರದಲ್ಲಿ ಮಂಗಳದ ಜಿಜಿ ಕ್ರೇಟರ್​ನಲ್ಲಿ ಕಲ್ಲಿನ ತೆರನಾದ ಆದರೆ ಹಲವು ಪದರಗಳ ಮೇಲ್ಮೈ ರಚನೆಯನ್ನು ಕಾಣಬಹುದು. ಎರಡನೇ ಚಿತ್ರದಲ್ಲಿ ಉತ್ತರ ಭಾಗದಲ್ಲಿ ಕಂಡುಬರುವ ವಿಶಿಷ್ಟ ರಚನೆಯನ್ನು ಸೆರೆಹಿಡಿಯಲಾಗಿದೆ. ಮೂರನೇ ಚಿತ್ರದಲ್ಲಿ ಮಂಗಳದ ದಕ್ಷಿಣ ಭಾಗದಲ್ಲಿ ಕಂಡುಬಂದ ಮಂಜುಗಡ್ಡೆಯ ಶೀಟ್ ಮಾದರಿಯ ಚಿತ್ರ. ನಾಸಾ ಹಂಚಿಕೊಂಡ ಪೋಸ್ಟ್ ಇಲ್ಲಿದೆ.

View this post on Instagram

A post shared by NASA (@nasa)

ಮಂಗಳ ಗ್ರಹದ ಈ ಚಿತ್ರಕ್ಕೆ ಬಾಹ್ಯಾಕಾಶ ಪ್ರಿಯರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಮಂಗಳನ‌ ನೆಲದ ಸೌಂದರ್ಯವನ್ನು ಎಲ್ಲರೂ ಗುಣಗಾನ ಮಾಡುತ್ತಿದ್ದು, ನಾಸಾದ ಪ್ರಯತ್ನಗಳನ್ನು ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ 185 ಕೋಟಿ ರೂ.ಬೆಲೆಯ ಬಂಗಲೆ ಖರೀದಿ ಮಾಡಿದ ಸೂರತ್​ನ ವಜ್ರದ ವ್ಯಾಪಾರಿ; ಇದು ಅವರಿಗಲ್ಲವಂತೆ !

ಇದನ್ನೂ ಓದಿ: ತಮ್ಮನ್ನು ಒಲಂಪಿಕ್ಸ್ ಸ್ಪರ್ಧೆಗಳಿಂದ ದೂರವಿಟ್ಟಿದ್ದಕ್ಕೆ ಪ್ರತ್ಯೇಕ ಒಲಂಪಿಕ್ಸನ್ನೇ ಹುಟ್ಟುಹಾಕಿದ ಸಾಹಸಿ ಮಹಿಳೆಯರ ಕುತೂಹಲಕರ ಕತೆ!

(NASA shares new images of Mars and gives incredible caption)

Published On - 2:58 pm, Sun, 1 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್