ಸಚಿನ್ ತೆಂಡೂಲ್ಕರ್ ಹೊಸ ಫ್ರೆಂಡ್ ಸ್ಪೈಕ್ ಜೊತೆ ಆಟವಾಡುತ್ತಿರುವ ವಿಡಿಯೋ ನೋಡಿ

ಸ್ನೇಹಿತರೇ.. ಸ್ಪೈಕ್​ರನ್ನು ನಾನು ಹೇಗೆ ಭೇಟಿಯಾದೆ ಎಂದು ನಿಮ್ಮ ತಿಳಿದಿದೆಯೇ? ಎಂದು ಸಚಿನ್ ತಮ್ಮ ವಿಡಿಯೋ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಹೊಸ ಫ್ರೆಂಡ್ ಸ್ಪೈಕ್ ಜೊತೆ ಆಟವಾಡುತ್ತಿರುವ ವಿಡಿಯೋ ನೋಡಿ
ಸಚಿನ್ ತೆಂಡೂಲ್ಕರ್ ಹೊಸ ಫ್ರೆಂಡ್ ಸ್ಪೈಕ್ ಜೊತೆ ಆಟವಾಡುತ್ತಿರುವ ವಿಡಿಯೋ ನೋಡಿ
Follow us
TV9 Web
| Updated By: shruti hegde

Updated on: Aug 01, 2021 | 10:36 AM

ಕ್ರಿಕೇಟಿಗ ಸಚಿನ್ ಅವರು ಹೊಸ ಫ್ರೆಂಡ್ರನ್ನು ಪರಿಚಯಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಚಿನ್ ಅವರು (Sachin Tendulkar)  ಸ್ಪೈಕ್​ರನ್ನು ಪರಿಚಯಿಸಿದ್ದಾರೆ. ಸ್ಪೈಕ್ ಎಂಬ ಹೆಸರಿನ ಪುಟ್ಟ ನಾಯಿ ಮರಿಯೊಂದಿಗೆ ಕಳೆದ ಕ್ಷಣಗಳನ್ನು ಸಚಿನ್ ಪೋಸ್ಟ್ ಮಾಡಿದ್ದಾರೆ. ಸಚಿನ್ ಅಭಿಮಾನಿಗಳು ವಿಡಿಯೋ(Video Viral) ಇಷ್ಟಪಟ್ಟಿದ್ದು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.

ಸ್ನೇಹಿತರೇ.. ಸ್ಪೈಕ್​ರನ್ನು ನಾನು ಹೇಗೆ ಭೇಟಿಯಾದೆ ಎಂದು ನಿಮ್ಮ ತಿಳಿದಿದೆಯೇ? ಎಂದು ಸಚಿನ್ ತಮ್ಮ ವಿಡಿಯೋ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಫಾರ್ಮ್​​ಹೌಸ್​ನ ಕೆಲವು ಮಕ್ಕಳು ಮಾರುಕಟ್ಟೆಗೆ ಹೋದಾಗ ಈ ಪುಟ್ಟ ನಾಯಿ ಮರಿಯನ್ನು ನೋಡಿದ್ದಾರೆ. ತಾಯಿ ಇಲ್ಲದೆ ಅನಾಥವಾಗಿದ್ದ ನಾಯಿ ಮರಿ ನೋಡಿದ ಮಕ್ಕಳು ಫಾರ್ಮ್​​ಹೌಸ್​ಗೆ ಕರೆತಂದಿದ್ದಾರೆ ಎಂದು ಸಚಿನ್ ಹೇಳಿದ್ದಾರೆ.

ನಾಯಿ ಮರಿಯನ್ನು ನೋಡಿದ ತಕ್ಷಣ ನನಗೆ ಇಷ್ಟವಾಯಿತು. ನಮ್ಮ ತೋಟದ ಮನೆಯಲ್ಲಿಯೇ ಸಾಕೋಣ ಎಂದು ನಾನು ಹೇಳಿದೆ. ಈ ನಾಯಿಮರಿ ಯಾವುದೇ ಬೇರೆ ಜಾತಿಯ ತಳಿಯಲ್ಲ. ಪಕ್ಕಾ ಭಾರತೀಯ ದೇಸಿ ತಳಿ ಎಂದು ಹೇಳಿದ್ದಾರೆ.

ಸ್ಪೈಕ್ ತುಂಬಾ ಮುದ್ದಾಗಿದೆ ಮತ್ತು ಸುಂದರವಾಗಿ ಬೆಳೆಯುತ್ತಿದೆ. ಸ್ಪೈಕ್​ಗೆ ಬೇಕಾದದ್ದು ಆಶ್ರಯ, ಪ್ರೀತಿ ಮತ್ತು ಕಾಳಜಿ ಅಷ್ಟೆ ಎಂದು ಅವರು ಹೇಳಿದ್ದಾರೆ.

ಸ್ಪೈಕ್ ನಮ್ಮ ಹೃಯವನ್ನು ಗೆದ್ದಿದೆ. ನಮ್ಮ ಈ ಜೀವನದಲ್ಲಿ ಖುಷಿ ತಂದಿದೆ ಎಂದು ಸಚಿನ್ ಹೇಳಿದ್ದಾರೆ. ವಿಡಿಯೋ ಕ್ಲಿಪ್​ನಲ್ಲಿ ಗಮನಿಸುವಂತೆ ಸ್ಪೈಕ್ ಎಲ್ಲೆಡೆ ಓಡಾಡುತ್ತಿರುವುದನ್ನು ನೋಡಬಹುದು. ಜನರೊಂದಿಗೆ ಹೆಚ್ಚು ಸಮಯ ಕಳೆಯತ್ತಿರುವುದನ್ನು ಗಮನಿಸಬಹುದು.

ಸಚಿನ್ ಹಂಚಿಕೊಂಡ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

2011ರಲ್ಲಿ ವಿಶ್ವಕಪ್​ ಗೆದ್ದಿದ್ದು ಟೀಮ್ ಇಂಡಿಯಾ ಮಾತ್ರ ಅಲ್ಲ, ಇಡೀ ಭಾರತವೇ ಅದನ್ನು ಗೆದ್ದಿತು: ಸಚಿನ್​ ತೆಂಡೂಲ್ಕರ್

‘ಸಚಿನ್​ ಶೇಕ್ ಹ್ಯಾಂಡ್ ಕೊಟ್ಟಾಗ ಇನ್ಮುಂದೆ ಸ್ನಾನವೇ ಮಾಡೋದು ಬೇಡ ಅಂತಾ ಅಂದುಕೊಂಡಿದ್ದೆ’

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್