Yashika Aanand: ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್​

Yashika Aannand Car Accident: ‘ಜು.24ರ ರಾತ್ರಿ ಊಟಕ್ಕಾಗಿ ನಾವು ನಾಲ್ಕು ಜನ ರೆಸಾರ್ಟ್​ಗೆ ಹೋಗಿದ್ದೆವು. ರಾತ್ರಿ 1 ಗಂಟೆಗೆ ಅಲ್ಲಿಂದ ವಾಪಸ್​ ಹೊರಟೆವು. ನಾನೇ ಡ್ರೈವ್​ ಮಾಡುತ್ತಿದ್ದೆ’ ಎಂದಿರುವ ನಟಿ ಯಶಿಕಾ ಆನಂದ್​ ಅವರು ಅಪಘಾತವಾದ ದಿನ ಏನಾಯಿತು ಎಂಬುದನ್ನು ವಿವರಿಸಿದ್ದಾರೆ.

Yashika Aanand: ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್​
ಯಶಿಕಾ ಆನಂದ್​ ಕಾರು ಅಪಘಾತ
Follow us
TV9 Web
| Updated By: ಮದನ್​ ಕುಮಾರ್​

Updated on: Aug 04, 2021 | 12:13 PM

ಖ್ಯಾತ ನಟಿ ಯಶಿಕಾ ಆನಂದ್​ (Yashika Aannand) ಅವರು ಚಲಿಸುತ್ತಿದ್ದ ಕಾರು ಜು.24ರ ರಾತ್ರಿ ಅಪಘಾತಕ್ಕೆ ಈಡಾಗಿತ್ತು. ಅಪಘಾತದ (Car Accident) ತೀವ್ರತೆಗೆ ಅವರ ಸ್ನೇಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೂಡಲೇ ಯಶಿಕಾರನ್ನು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಅವರ ಜೀವ ಉಳಿಯಿತು. ಆದರೆ ಅವರು ಇನ್ನೂ ಕೆಲವು ತಿಂಗಳ ಕಾಲ ಹಾಸಿಗೆ ಬಿಟ್ಟು ಮೇಲೇಳದ ಸ್ಥಿತಿಯಲ್ಲಿ ಇದ್ದಾರೆ. ಮಲಗಿದ್ದಲ್ಲೇ ಮಲ-ಮೂತ್ರ ಮಾಡಿಕೊಳ್ಳುವ ನರಕ ಸದೃಶ್ಯ ಪರಿಸ್ಥಿತಿ ಅವರದ್ದಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಕೆಲವು ಗಾಸಿಪ್​ಗಳಿಂದ ಅವರಿಗೆ ನೋವಾಗಿದೆ. ಅಪಘಾತ ನಡೆದಾಗ ನಿಜಕ್ಕೂ ಆಗಿದ್ದು ಏನು ಎಂಬುದನ್ನು ಯಶಿಕಾ (Yashika Aanand) ಈಗ ವಿವರಿಸಿದ್ದಾರೆ. 

ಮದ್ಯಪಾನ ಮಾಡಿ ಕಾರು ಡ್ರೈವ್​ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಅದು ಯಶಿಕಾಗೆ ತೀವ್ರ ನೋವು ಉಂಟು ಮಾಡಿದೆ. ಅದಕ್ಕಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಎಲ್ಲವನ್ನೂ ವಿವರಿಸಿದ್ದಾರೆ.

‘ಜು.24ರ ರಾತ್ರಿ ಊಟಕ್ಕಾಗಿ ನಾವು ನಾಲ್ಕು ಜನ ರೆಸಾರ್ಟ್​ಗೆ ತೆರಳಿದ್ದೆವು. ರಾತ್ರಿ 1 ಗಂಟೆಗೆ ಅಲ್ಲಿಂದ ವಾಪಸ್​ ಹೊರಟೆವು. ನಾನೇ ಡ್ರೈವ್​ ಮಾಡುತ್ತಿದ್ದೆ. ಖಂಡಿತವಾಗಿಯೂ ವೇಗವಾಗಿ ಓಡಿಸುತ್ತಿರಲಿಲ್ಲ. ತುಂಬ ಕತ್ತಲು ಆವರಿಸಿತ್ತು. ದುರಾದೃಷ್ಟವಶಾತ್​ ನಾನು ಡಿವೈಡರ್​ಗೆ ಡಿಕ್ಕಿ ಹೊಡೆಸಿದೆ. ನಮ್ಮ ಕಾರು ಮೂರ ಬಾರಿ ಪಲ್ಟಿ ಆಯಿತು. ನನ್ನ ಪಕ್ಕದಲ್ಲಿ ಪಾವನಿ ಕುಳಿತಿದ್ದಳು. ಆಕೆ ಸೀಟ್​ ಬೆಲ್ಟ್​ ಧರಿಸಿರಲಿಲ್ಲ. ಕಿಟಕಿ ಗಾಜು ತೆರೆದುಕೊಂಡಿದ್ದಳು. ಆಕ್ಸಿಡೆಂಟ್​ ಆದಾಗ ಕಿಟಕಿಯಿಂದ ಆಕೆ ಹೊರಬಿದ್ದಳು. ಅವಳ ತಲೆಗೆ ಪೆಟ್ಟಾಯಿತು’ ಎಂದು ಯಶಿಕಾ ಹೇಳಿದ್ದಾರೆ.

‘ನಾವೆಲ್ಲರೂ ಕಾರಿನ ಒಳಗೆ ಇದ್ದೆವು. ವಿಂಡೋ ಜಾಮ್​ ಆಯಿತು. ಸನ್​ರೂಫ್​ ಒಡೆದುಕೊಂಡು ನಾವು ಹೊರಬರಬೇಕಾಯಿತು. ಒಂದೇ ನಿಮಿಷದೊಳಗೆ ಹೆಚ್ಚು ಜನರು ಅಲ್ಲಿ ಗುಂಪು ಸೇರಿದರು. ನಾನು ನಿಂತುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಇಡೀ ದೇಹ ಕುಸಿದು ಬಿದ್ದಂತೆ ಅನಿಸುತ್ತಿತ್ತು. ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಪ್ರಜ್ಞೆ ಬಂದ ಬಳಿಕವೇ ಪಾವನಿ ಸತ್ತು ಹೋಗಿದ್ದಾಳೆ ಎಂಬುದು ನನಗೆ ತಿಳಿಯಿತು’ ಎಂದು ಯಶಿಕಾ ಹೇಳಿದ್ದಾರೆ.

ಸ್ನೇಹಿತೆಯನ್ನು ಕಳೆದುಕೊಂಡಿದ್ದಕ್ಕೆ ತೀವ್ರ ನೋವು ಅನುಭವಿಸುತ್ತಿರುವ ಯಶಿಕಾ ಆನಂದ್​ ಅವರು ಇತ್ತೀಚೆಗೆ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕ ನೋವು ತೋಡಿಕೊಂಡಿದ್ದರು. ಆ ಪೋಸ್ಟ್​ ವೈರಲ್​ ಆಗುತ್ತಿದೆ.

ಇದನ್ನೂ ಓದಿ:

Yashika Aannand: ಭೀಕರ ಅಪಘಾತ, ಗೆಳೆತಿಯ ಸಾವು: ನೋವು ತೋಡಿಕೊಂಡ ನಟಿ ಯಶಿಕಾ

ಸಂಚಾರಿ ವಿಜಯ್​ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ