ಈಗಾಗಲೇ ಮಾತಿನ ಭಾಗದ ಚಿತ್ರೀಕರಣವನ್ನು ತಂಡ ಮುಗಿಸಿಕೊಂಡಿದೆ. ಬಾಕಿ ಉಳಿದುಕೊಂಡಿರುವ ಹಾಡಿನ ಚಿತ್ರೀಕರಣಕ್ಕೆ ಸದ್ಯದಲ್ಲೇ ಮೈಸೂರಿಗೆ ತೆರಳಲಿದೆ ‘ಬೈರಾಗಿ’ ತಂಡ. ಕಾಲಿವುಡ್ನ ಜನಪ್ರಿಯ ಛಾಯಾಗ್ರಾಹಕ ಕಮ್ ನಿರ್ದೇಶಕ ವಿಜಯ್ ಮಿಲ್ಟನ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿರುವುದು ವಿಶೇಷ. ನೂರಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ಹಲವು ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಪೈಕಿ ಹುಲಿವೇಷದ ಲುಕ್ ಕೂಡ ಪ್ರಮುಖವಾದದ್ದು.
ಜು.12ರಂದು ಶಿವರಾಜ್ಕುಮಾರ್ ಜನ್ಮದಿನವಿತ್ತು. ಆದರೆ ಕೊರೊನಾ ಕಾಟದ ಹಿನ್ನೆಲೆಯಲ್ಲಿ ಅವರು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ಆದರೂ ಬರ್ತ್ಡೇ ಸಂಭ್ರಮವನ್ನು ಹೆಚ್ಚಿಸಲು ‘ಬೈರಾಗಿ’ ತಂಡದಿಂದ ಫಸ್ಟ್ಲುಕ್ ಬಿಡುಗಡೆ ಆಗಿತ್ತು. ಟೈಟಲ್ ಹಾಗೂ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಹುಲಿ ವೇಷ, ಹೇರ್ ಸ್ಟೈಲ್ ಹಾಗೂ ಅವರ ಡಿಫರೆಂಟ್ ಕಾಸ್ಟ್ಯೂಮ್ಗೆ ಫ್ಯಾನ್ಸ್ ಫಿದಾ ಆಗಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಶಿವಣ್ಣನ ಹುಲಿ ವೇಷದ ಗೆಟಪ್ ಎಲ್ಲೆಡೆ ವೈರಲ್ ಆಗಿದ್ದು, ಆಟೋ ಹಾಗೂ ಕಾರುಗಳ ಮೇಲೆ ಈ ಪೋಸ್ಟರ್ ರಾರಾಜಿಸುತ್ತಿವೆ. ಟೀಸರ್ನಲ್ಲಿ ಅನೂಪ್ ಸೀಳಿನ್ ಸಂಗೀತಕ್ಕೂ ಮೆಚ್ಚುಗೆ ಕೇಳಿಬಂದಿದೆ.
ಈ ಸಿನಿಮಾದಲ್ಲಿ ಡಾಲಿ ಧನಂಜಯ ಅವರು ಶಿವರಾಜ್ಕುಮಾರ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ‘ಟಗರು’ ಸಿನಿಮಾದ ಯಶಸ್ಸಿನ ಬಳಿಕ ಇವರಿಬ್ಬರು ಮತ್ತೆ ಒಂದಾಗಿ ನಟಿಸುತ್ತಿರುವುದರಿಂದ ಅಭಿಮಾನಿಗಳ ಮನದಲ್ಲಿ ನಿರೀಕ್ಷೆಯ ಮಟ್ಟ ಹೆಚ್ಚಿದೆ. ಶಿವರಾಜ್ಕುಮಾರ್ ರೀತಿಯೇ ಧನಂಜಯ ಕೂಡ ಬೇರೆ ಬೇರೆ ಗೆಟಪ್ನಲ್ಲಿ ಮೋಡಿ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ನಟಿ ಅಂಜಲಿ ಈ ಚಿತ್ರಕ್ಕೆ ನಾಯಕಿ. ಕಳೆದ ವರ್ಷ ಸೂಪರ್ ಹಿಟ್ ಆದ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ ಕೂಡ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿಭಾಯಿಸಲ್ಲಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಸಾಕಷ್ಟು ನುರಿತ ಕಲಾವಿದರಿದ್ದಾರೆ.
ಇದನ್ನೂ ಓದಿ:
ಮೈಸೂರಿನಲ್ಲಿ ಶಿವರಾಜ್ಕುಮಾರ್-ಕೆಎಸ್ ಈಶ್ವರಪ್ಪ ದಿಢೀರ್ ಭೇಟಿ; ಇಲ್ಲಿದೆ ಕಾರಣ
ಶಿವರಾಜ್ಕುಮಾರ್-ಸುಧಾರಾಣಿ ‘ಆನಂದ್’ ಚಿತ್ರಕ್ಕೆ 35 ವರ್ಷ; ಅಪರೂಪದ ಫೋಟೋ ಹಂಚಿಕೊಂಡ ನಟಿ