Sign In

By signing in or creating an account, you agree with Associated Broadcasting Company's Terms & Conditions and Privacy Policy.

Radhika Pandit: ತುಂಟ ಮಗನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್; ಅಭಿಮಾನಿಗಳಿಗೆ ಹೆಚ್ಚಾಯ್ತು ಕುತೂಹಲ

Yatharv Yash: ಯಶ್​ಗೆ ತಮಾಷೆ ಮಾಡಿ ಜೋರಾಗಿ ನಗುತ್ತಿರುವ ಮಗ ಯಥರ್ವನ ಫೋಟೋ ಶೇರ್ ಮಾಡಿಕೊಂಡಿರುವ ರಾಧಿಕಾ ಪಂಡಿತ್ ಮುಂದಿನ ಪೋಸ್ಟ್​ನಲ್ಲಿ ಪೂರ್ತಿ ವಿಡಿಯೋ ಅಪ್​ಲೋಡ್ ಮಾಡುವುದಾಗಿ ಹೇಳಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

Radhika Pandit: ತುಂಟ ಮಗನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್; ಅಭಿಮಾನಿಗಳಿಗೆ ಹೆಚ್ಚಾಯ್ತು ಕುತೂಹಲ
ರಾಧಿಕಾ ಪಂಡಿತ್- ಯಶ್​ ಮಗ ಯಥರ್ವ
Follow us
TV9 Web
| Updated By: Digi Tech Desk

Updated on:Aug 03, 2021 | 6:58 PM

ಇತ್ತೀಚೆಗಷ್ಟೇ ಹೊಸ ಮನೆಗೆ ಹೋಗಿರುವ ಸ್ಯಾಂಡಲ್​ವುಡ್​ ಸ್ಟಾರ್ ದಂಪತಿ ರಾಧಿಕಾ ಪಂಡಿತ್ (Radhika Pandit)- ಯಶ್​ (Rocking Star Yash) ತಮ್ಮ ಮಕ್ಕಳ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಹೊಸ ಮನೆಯ ಗೃಹಪ್ರವೇಶದ ಫೋಟೋಗಳನ್ನು ಹಂಚಿಕೊಂಡಿದ್ದ ರಾಧಿಕಾ ಆಗಾಗ ತಮ್ಮ ವೈಯಕ್ತಿಕ ಜೀವನದ ಸುಂದರ ಕ್ಷಣಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮಗಳು ಆಯ್ರಾಳ (Ayra)  ಜೊತೆಗೆ ಹೊಸ ಮನೆಯ ಬಾಲ್ಕನಿಯಲ್ಲಿ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದ ರಾಧಿಕಾ ಪಂಡಿತ್ ಅಪರೂಪಕ್ಕೆ ಮಗ ಯಥರ್ವನ (Yathav) ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಜೋರಾಗಿ ನಗುತ್ತಿರುವ ಮುದ್ದು ಮಗನ ಫೋಟೋ ಹಂಚಿಕೊಳ್ಳುವುದರ ಜೊತೆಗೆ ತಮ್ಮ ಅಭಿಮಾನಿಗಳ ಕುತೂಹಲವನ್ನೂ ಕೆರಳಿಸಿದ್ದಾರೆ!

ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ತಮ್ಮ ಮಕ್ಕಳಿಬ್ಬರೂ ಅಜ್ಜನ ಜೊತೆ ಆಟವಾಡುತ್ತಾ, ಅವರ ಹಾಡನ್ನು ಎಂಜಾಯ್ ಮಾಡುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದರು. ಆಗಾಗ ಮಗಳು ಆಯ್ರಾಳ ಫೋಟೋ, ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿರುವ ರಾಧಿಕಾ ಪಂಡಿತ್ ಮಗನ ಫೋಟೋಗಳನ್ನು ಹಾಕುವುದು ಕಡಿಮೆ. ಆದರೆ, ಅಪ್ಪ ಯಶ್​ನನ್ನು ತಮಾಷೆ ಮಾಡಿರುವ (Teasing) ಮಗ ಜೋರಾಗಿ ನಗುತ್ತಿರುವ ಫೋಟೋವೊಂದನ್ನು ರಾಧಿಕಾ ಶೇರ್ ಮಾಡಿದ್ದಾರೆ. ಅಲ್ಲದೆ, ಅಪ್ಪ ಮತ್ತು ಮಗನ ಆ ಫನ್ನಿ ವಿಡಿಯೋವನ್ನು ಮುಂದಿನ ಪೋಸ್ಟ್​ನಲ್ಲಿ ಹಂಚಿಕೊಳ್ಳುವುದಾಗಿಯೂ ಹೇಳಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

ಈ ಹಿಂದೆ ಮಗ ಯಥರ್ವನ ಉಗುರನ್ನು ಕಟ್ ಮಾಡುತ್ತಿರುವ ರಾಧಿಕಾ ಪಂಡಿತ್ ವಿಡಿಯೋ ಭಾರೀ ವೈರಲ್ ಆಗಿತ್ತು. ಮಕ್ಕಳಿಬ್ಬರ ಜೊತೆ ಎಂಜಾಯ್ ಮಾಡುತ್ತಿರುವ ರಾಧಿಕಾ ಪಂಡಿತ್ ಈಗೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ರಾಕಿಂಗ್ ಸ್ಟಾರ್ ಯಶ್​ ತಮ್ಮ ಮಗನ ಜೊತೆ ಕಳೆದ ಕ್ಷಣಗಳ ವಿಡಿಯೋ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇದನ್ನೂ ಓದಿ: Radhika Pandit: ಹೊಸ ಮನೆಯ ಟೆರೇಸ್​ನಿಂದ ಅಭಿಮಾನಿಗಳಿಗೆ ಹೆಲೋ​ ಹೇಳಿದ ರಾಧಿಕಾ ಪಂಡಿತ್​-ಆಯ್ರಾ ಯಶ್

Radhika Pandit: ಹೊಸ ಮನೆಯ ಬಾಲ್ಕನಿ ವ್ಯೂ ಹಂಚಿಕೊಂಡ ನಟಿ ರಾಧಿಕಾ ಪಂಡಿತ್​

(Radhika Pandit Shared Son Yatharv Smiling Photo after Teasing his Father KGF Star Yash on Instagram)

Published On - 6:55 pm, Tue, 3 August 21

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ