Viaan: ಅಪ್ಪನ ಅರೆಸ್ಟ್, ಅಮ್ಮನ ಕಣ್ಣೀರ ನಡುವೆ ಮೊದಲ ಪೋಸ್ಟ್ ಮಾಡಿದ ಶಿಲ್ಪಾ ಶೆಟ್ಟಿ ಮಗ

Viaan: ಅಪ್ಪನ ಅರೆಸ್ಟ್, ಅಮ್ಮನ ಕಣ್ಣೀರ ನಡುವೆ ಮೊದಲ ಪೋಸ್ಟ್ ಮಾಡಿದ ಶಿಲ್ಪಾ ಶೆಟ್ಟಿ ಮಗ
Shilpa Shetty family

Shilpa Shetty’s son Viaan: ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ರಾಜ್ ಕುಂದ್ರಾ ಭಾಗಿಯಾಗಿರುವ ಬಗ್ಗೆ ಹಲವು ಸಾಕ್ಷ್ಯಗಳು ಪೊಲೀಸರ ಬಳಿ ಇದ್ದು, ಇದಾಗ್ಯೂ ಕುಂದ್ರಾ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪೊಲೀಸರು ನ್ಯಾಯಾಲಕ್ಕೆ ತಿಳಿಸಿದ್ದರು.

TV9kannada Web Team

| Edited By: Zahir PY

Aug 03, 2021 | 8:18 PM

ರಾಜ್ ಕುಂದ್ರಾರ ಅಶ್ಲೀಲ ಚಿತ್ರಗಳ ಪ್ರಕರಣ ಪುರಾಣಕ್ಕೆ ಸದ್ಯಕ್ಕಂತು ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದೆಡೆ ಪೊಲೀಸ್ ವಶದಲ್ಲಿರುವ ಕುಂದ್ರಾ ಜಾಮೀನು ಪಡೆಯಲು ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ಶಿಲ್ಪಾ ಶೆಟ್ಟಿ ಕಣ್ಣೀರಿನೊಂದಿಗೆ ಗಂಡನ ಬಿಡುಗಡೆಗಾಗಿ ಓಡಾಡುತ್ತಿದ್ದಾರೆ. ಇವೆಲ್ಲದರ ನಡುವೆ ಬಡವಾಗಿದ್ದು ಶಿಲ್ಪಾ ಶೆಟ್ಟಿ ಮಗ ವಿಹಾನ್. ಹೌದು, ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಿದ್ದ ವಿಹಾನ್, ತಂದೆಯ ಬಂಧನ ಬಳಿಕ ಯಾವುದೇ ಪೋಸ್ಟ್ ಹಾಕಿರಲಿಲ್ಲ.

ಜುಲೈ 19 ರಿಂದ ಇನ್​ಸ್ಟಾಗ್ರಾಮ್​ನಿಂದ ದೂರವಾಗಿದ್ದ ವಿಹಾನ್ ಕುಂದ್ರಾ ಮತ್ತೆ ಹೊಸ ಪೋಸ್ಟ್​ನೊಂದಿಗೆ ಮರಳಿದ್ದಾರೆ. ಅದು ಕೂಡ ತಾಯಿ ಶಿಲ್ಪಾ ಶೆಟ್ಟಿ ಜೊತೆಗಿರುವ ಫೋಟೋದೊಂದಿಗೆ ಎಂಬುದು ವಿಶೇಷ. ತಾಯಿಯನ್ನು ತಬ್ಬಿಕೊಂಡಿರುವ 3 ಚಿತ್ರವನ್ನು ವಿಹಾನ್ ಶೇರ್ ಮಾಡಿದ್ದು, ಈ ಫೋಟೋಗೆ ಶಿಲ್ಪಾ ಶೆಟ್ಟಿಯವರ ಹಂಗಾಮ 2 ಚಿತ್ರದ ಸಹನಟ ಮೀಜಾನ್ ಹೃದಯದ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ, ನಟ ಟೈಗರ್ ಶ್ರಾಫ್ ಲೈಕ್ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ.

ಅಶ್ಲೀಲ ಚಿತ್ರ ನಿರ್ಮಾಣದ ಆರೋಪದ ಮೇಲೆ ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಬಂಧಿಸಲಾಗಿತ್ತು. ಅದರಂತೆ ಜುಲೈ 27 ರ ತನಕ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದ್ದು, ಅದರಂತೆ ಇನ್ನೂ 10 ದಿನಗಳವರೆಗೆ ಕುಂದ್ರಾಗೆ ಜಾಮೀನು ಸಿಗುವುದು ಅನುಮಾನ.

ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ರಾಜ್ ಕುಂದ್ರಾ ಭಾಗಿಯಾಗಿರುವ ಬಗ್ಗೆ ಹಲವು ಸಾಕ್ಷ್ಯಗಳು ಪೊಲೀಸರ ಬಳಿ ಇದ್ದು, ಇದಾಗ್ಯೂ ಕುಂದ್ರಾ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪೊಲೀಸರು ನ್ಯಾಯಾಲಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನವನ್ನು 2 ವಾರಗಳ ಕಾಲ ಮುಂದೂಡಲಾಗಿದೆ.

ಇತ್ತ ಶಿಲ್ಪಾ ಶೆಟ್ಟಿ, ಗಂಡನ ಬಂಧನದಿಂದ ಮಾನಸಿಕವಾಗಿ ನೊಂದಿದ್ದು, ಯಾರೂ ಕೂಡ ತಮ್ಮ ಕುಟುಂಬವನ್ನು ಟಾರ್ಗೆಟ್ ಮಾಡದಂತೆ ಮನವಿ ಮಾಡಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಕಳೆದ ಕೆಲವು ದಿನಗಳು ಎಲ್ಲ ರೀತಿಯಿಂದಲೂ ಕಷ್ಟಕರವಾಗಿತ್ತು. ಮಾಧ್ಯಮಗಳು ಮತ್ತು ನನ್ನ ಹಿತೈಷಿಗಳು (ಇನ್ನಿಲ್ಲ) ನನ್ನ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು. ಅನೇಕ ಜನರು ನನ್ನನ್ನು ಟ್ರೋಲ್ ಮಾಡಿದ್ದಾರೆ ಅನೇಕರು ನನ್ನನ್ನು ಮಾತ್ರವಲ್ಲ ನನ್ನ ಕುಟುಂಬವನ್ನೂ ಪ್ರಶ್ನಿಸಿದ್ದಾರೆ ಎಂದು ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ನೋವು ತೋಡಿಕೊಂಡಿದ್ದರು.

ಅಲ್ಲದೆ, ‘ಒಂದು ಕುಟುಂಬವಾಗಿ, ನಾವು ಲಭ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಆಶ್ರಯಿಸುತ್ತಿದ್ದೇವೆ. ಆದರೆ, ಅಲ್ಲಿಯವರೆಗೆ ನೀವು ನನ್ನ ತಾಯಿ ಹಾಗೂ ಮಕ್ಕಳನ್ನು ಟಾರ್ಗೆಟ್ ಮಾಡಬೇಡಿ. ದಯವಿಟ್ಟು ಗೌರವಿಸಿ ಮತ್ತು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಅರೆಬೆಂದ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸದಂತೆ ನಿಮ್ಮನ್ನು ವಿನಂತಿಸುತ್ತೇನೆ ಎಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: PV Sindhu: ಪದಕ ಗೆದ್ದರೂ ಅಭಿನಂದಿಸಿಲ್ಲ, ಬಾಡ್ಮಿಂಟನ್ ತಾರೆಯರ ಒಳ ಮನಿಸು..!

ಇದನ್ನೂ ಓದಿ: BCCI: ಯುವ ಕ್ರಿಕೆಟಿಗರತ್ತ ಬಿಸಿಸಿಐ ಚಿತ್ತ: ಶೀಘ್ರದಲ್ಲೇ ಅಂಡರ್-25 ಟೂರ್ನಮೆಂಟ್

ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ

(Shilpa Shetty’s son Viaan Shares first post after Raj Kundra’s arrest)

Follow us on

Related Stories

Most Read Stories

Click on your DTH Provider to Add TV9 Kannada