BCCI: ಯುವ ಕ್ರಿಕೆಟಿಗರತ್ತ ಬಿಸಿಸಿಐ ಚಿತ್ತ: ಶೀಘ್ರದಲ್ಲೇ ಅಂಡರ್-25 ಟೂರ್ನಮೆಂಟ್

Team India: ಅಕ್ಟೋಬರ್ ತಿಂಗಳಲ್ಲಿ ಯುಎಇಯಲ್ಲಿ ಟಿ20 ವಿಶ್ವಕಪ್ ಕೂಡ ನಡೆಯಲಿದೆ. ಭಾರತದಲ್ಲಿ ನಡೆಯಬೇಕಿದ್ದ ಚುಟುಕು ವಿಶ್ವಕಪ್ ಕೊರೋನಾ ಕಾರಣದಿಂದ ಯುಎಇಗೆ ಸ್ಥಳಾಂತರಗೊಂಡಿದೆ.

BCCI: ಯುವ ಕ್ರಿಕೆಟಿಗರತ್ತ ಬಿಸಿಸಿಐ ಚಿತ್ತ: ಶೀಘ್ರದಲ್ಲೇ ಅಂಡರ್-25 ಟೂರ್ನಮೆಂಟ್
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 02, 2021 | 5:57 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದೇಶೀಯ ಕ್ರಿಕೆಟ್ ಸ್ಟ್ರೆಕ್ಚರ್​ ಬದಲಿಸಲು ಸಿದ್ಧತೆ ನಡೆಸಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ, ಇಂಡಿಯನ್ ಡೊಮೆಸ್ಟಿಕ್ ಸರ್ಕ್ಯೂಟ್​ನ ಅಂಡರ್ -23 ಚಾಂಪಿಯನ್‌ಶಿಪ್ ಬದಲಿಗೆ ಅಂಡರ್ -25 ಟೂರ್ನಮೆಂಟ್ ಆಯೋಜಿಸುವ ವಿಚಾರವನ್ನು ಚರ್ಚಿಸಲಾಗಿದೆ. ಇದರಿಂದ ಹೆಚ್ಚಿನ ಆಟಗಾರರಿಗೆ ಪ್ರಥಮ ದರ್ಜೆ ಕ್ರಿಕೆಟ್ ಆಡುವ ಅವಕಾಶ ಸಿಗಲಿದೆ ಎಂಬ ಅಭಿಪ್ರಾಯ ಮೂಡಿ ಬಂದಿದೆ.

ಏಕೆಂದರೆ ಅಂಡರ್ 25 ಟೂರ್ನಮೆಂಟ್ ಆಯೋಜಿಸಿದರೆ, ರಾಜ್ಯದ ರಣಜಿ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ಯುವ ಆಟಗಾರರಿಗೆ, ಈ ಪಂದ್ಯಾವಳಿ ಮೂಲಕ ಅವಕಾಶ ಪಡೆಯಬಹುದು. ಇದರಿಂದ ಅತ್ತ ರಣಜಿ ತಂಡ ಕೂಡ ಬಲಿಷ್ಠವಾಗಿರಲಿದೆ. ಹಾಗೆಯೇ ಅಂಡರ್​-25 ತಂಡಗಳ ಮೂಲಕ ಯುವ ಪ್ರತಿಭೆಗಳನ್ನು ಸಜ್ಜುಗೊಳಿಸಬಹುದು. ಹೀಗಾಗಿ ಅಂಡರ್-23 ಚಾಂಪಿಯನ್​ಶಿಪ್ ಬದಲಿಗೆ 25 ವರ್ಷದೊಳಗಿನ ಟೂರ್ನಿ ನಡೆಸಲು ಬಿಸಿಸಿಐ ಚಿಂತಿಸಿದೆ. ಆದಾಗ್ಯೂ, ಬಿಸಿಸಿಐ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಅದಕ್ಕೂ ಮುನ್ನ ರಾಜ್ಯ ಕ್ರಿಕೆಟ್​ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಇನ್ನು ಈ ಹಿಂದೆ ಅಂಡರ್ -16 ಟೂರ್ನಮೆಂಟ್ ಅನ್ನು ಆಯೋಜಿಸುವ ಬಗ್ಗೆ ಊಹಾಪೋಹಗಳು ಕೇಳಿ ಬಂದಿದ್ದವು. ಆದರೆ ಪ್ರಸ್ತುತ ಕೊರೋನಾ ಪರಿಸ್ಥಿತಿಯನ್ನು ಗಮನಿಸಿದರೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ಇನ್ನೂ ಲಭ್ಯವಿಲ್ಲ. ಈ ಕಾರಣದಿಂದಾಗಿ, ಈ ಟೂರ್ನುಯನ್ನು ಕೈ ಬಿಡುವ ಸಾಧ್ಯತೆಗಳಿವೆ.

ಐಪಿಎಲ್​ಗೂ ಸಿದ್ದತೆ: ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಎರಡನೇ ಹಂತದ ಐಪಿಎಲ್​ಗಾಗಿ ಬಿಸಿಸಿಐ ಸಿದ್ದತೆಗಳನ್ನು ಆರಂಭಿಸಲಿದೆ. ದ್ವಿತಿಯಾರ್ಧದಲ್ಲಿ ಕೆಲವು ವಿದೇಶಿ ಆಟಗಾರರು ಭಾಗಿಯಾಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವಿಚಾರವಾಗಿ ವಿದೇಶಿ ಕ್ರಿಕೆಟ್ ಮಂಡಳಿಗಳೊಂದಿಗೆ ಬಿಸಿಸಿಐ ಮಾತುಕತೆ ನಡೆಸುತ್ತಿದೆ.

ಟಿ20 ವಿಶ್ವಕಪ್ ತಯಾರಿ: ಅಕ್ಟೋಬರ್ ತಿಂಗಳಲ್ಲಿ ಯುಎಇಯಲ್ಲಿ ಟಿ20 ವಿಶ್ವಕಪ್ ಕೂಡ ನಡೆಯಲಿದೆ. ಭಾರತದಲ್ಲಿ ನಡೆಯಬೇಕಿದ್ದ ಚುಟುಕು ವಿಶ್ವಕಪ್ ಕೊರೋನಾ ಕಾರಣದಿಂದ ಯುಎಇಗೆ ಸ್ಥಳಾಂತರಗೊಂಡಿದೆ. ಈಗಾಗಲೇ ಗ್ರೂಪ್ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಶೀಘ್ರದಲ್ಲೇ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಲಿದೆ.

ಇದನ್ನೂ ಓದಿ: Virat Kohli: ಇಂಗ್ಲೆಂಡ್ ವಿರುದ್ದ ಸಿಡಿಸಿದ್ರೆ ಈ 5 ದಾಖಲೆಗಳು ಕೊಹ್ಲಿ ಪಾಲಾಗುವುದು ಪಕ್ಕಾ

ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ

ಇದನ್ನೂ ಓದಿ: PV Sindhu: ಒಲಿಂಪಿಕ್ಸ್​ನಲ್ಲಿ ಈ ಸಾಧನೆ ಮಾಡಿದ್ದು ಇವರಿಬ್ಬರೇ..!

(BCCI planning to change U-23 championship to U-25 tournament)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್