India vs England 1st Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್​ನ ನೇರ ಪ್ರಸಾರ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದೆ

India vs England 1st Test Live Streaming: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ವೇಳಾ ಪಟ್ಟಿ, ಪಂದ್ಯ ನಡೆಯುವ ದಿನಾಂಕ- ಸ್ಥಳ, ನೇರ ಪ್ರಸಾರ, ಸಮಯ ಹಾಗೂ ಸಂಭಾವ್ಯ ತಂಡಗಳ ಪೂರ್ಣ ಮಾಹಿತಿ ಇಲ್ಲಿದೆ.

India vs England 1st Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್​ನ ನೇರ ಪ್ರಸಾರ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದೆ
ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: shivaprasad.hs

Updated on:Aug 03, 2021 | 1:37 PM

ಭಾರತ ಮತ್ತು ಇಂಗ್ಲೆಂಡ್ ಮೊದಲ ಟೆಸ್ಟ್: ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ನಾಳೆಯಿಂದ ಅಂದರೆ ಆಗಸ್ಟ್ 4ರಿಂದ ನಾಟಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವನ್ನು ಭಾರತ ಎದುರಿಸಲಿದೆ. ಈ ಪಂದ್ಯದ ನೇರ ಪ್ರಸಾರ, ಸಮಯ, ತಂಡ ಹಾಗೂ ಇಡೀ ಸರಣಿಯ ವೇಳಾಪಟ್ಟಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ನೇರ ಪ್ರಸಾರ:

ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಖರೀದಿಸಿದ್ದು, ಸೋನಿ ಲಿವ್ ಮುಖಾಂತರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ನೇರ ಪ್ರಸಾರವನ್ನು ಪ್ರಸಾರ ಮಾಡುತ್ತದೆ. ಇದು ಜಿಯೊ ಟಿವಿಯಲ್ಲೂ ಲಭ್ಯವಾಗಲಿದೆ. ಇಂಗ್ಲೆಂಡ್​ನ ವೀಕ್ಷಕರು ಸ್ಕೈ ಸ್ಪೋರ್ಟ್ಸ್​ನಲ್ಲಿ ಪಂದ್ಯವನ್ನುವೀಕ್ಷಿಸಬಹುದಾಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಪ್ರಾರಂಭವಾಗುವ ಸಮಯ: 

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಆಗಸ್ಟ್ 4ರಿಂದ ಆಗಸ್ಟ್ 8ರವರೆಗೆ ನಾಟಿಂಗ್​ಹ್ಯಾಮ್​ನ ಟ್ರೆಂಟ್​ಬ್ರಿಡ್ಜ್​ನಲ್ಲಿ ಪಂದ್ಯವು ನಡೆಯಲಿದೆ.

ಮೊದಲ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ:

ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯಾ ರಹಾನೆ(ಉಪನಾಯಕ), ರಿಷಬ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದುಲ್ ಠಾಕೂರ್/ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಜಸ್ಪ್ರೀತ್ ಬುಮ್ರಾ

ಮೊದಲ ಟೆಸ್ಟ್​ಗೆ ಇಂಗ್ಲೆಂಡ್​ನ ಸಂಭಾವ್ಯ ತಂಡ:

ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜಾಕ್ ಕ್ರಾಲಿ, ಜೋ ರೂಟ್(ನಾಯಕ), ಡೇನಿಯಲ್ ಲಾರೆನ್ಸ್/ ಜಾಕ್ ಲೀಚ್, ಜಾನಿ ಬೇರ್​ಸ್ಟೋ(ಕೀಪರ್), ಆಲಿ ಪೋಪ್/ಜಾಕ್ ಲೀಚ್, ಆಲಿ ರಾಬಿನ್​ಸನ್, ಸ್ಟುವರ್ಟ್ ಬ್ರಾಡ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ

ಪಂದ್ಯಗಳು ನಡೆಯುವ ದಿನಾಂಕಗಳು: ಭಾರತ-ಇಂಗ್ಲೆಂಡ್ ನಡುವೆ ಮೊದಲ ಪಂದ್ಯ ಆಗಸ್ಟ್ 4 ರಿಂದ ಪ್ರಾರಂಭವಾಗಲಿದೆ. 2ನೇ ಪಂದ್ಯವು ಲಾರ್ಡ್ಸ್​ನಲ್ಲಿ ಆಗಸ್ಟ್ 12 ರಿಂದ 16ರವರೆಗೆ ನಡೆಯಲಿದ್ದು ಮೂರನೇ ಟೆಸ್ಟ್ ಪಂದ್ಯವು ಲೀಡ್ಸ್​ನಲ್ಲಿ 25 ರಿಂದ ಪ್ರಾರಂಭವಾಗಲಿದೆ. ಸರಣಿಯ 4ನೇ ಟೆಸ್ಟ್ ಲಂಡನ್​ನ ಓವಲ್ ಮೈದಾನದಲ್ಲಿ​ ಸೆಪ್ಟೆಂಬರ್ 2 ಕ್ಕೆ ಮೊದಲ್ಗೊಂಡು ಸೆ.6 ರವರೆಗೆ ನಡೆಯಲಿದೆ. ಅಂತಿಮ ಟೆಸ್ಟ್ ಪಂದ್ಯವು ಮ್ಯಾಂಚೆಸ್ಟರ್​ನಲ್ಲಿ ಸೆಪ್ಟೆಂಬರ್ 10 ರಿಂದ ಸೆ.14ರವರೆಗೆ ಜರುಗಲಿದೆ.

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಲಭ್ಯವಿರುವ ಸಂಪೂರ್ಣ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್

ಹೆಚ್ಚುವರಿ ಆಟಗಾರರು: ಪ್ರಸಿದ್ಧ್ ಕೃಷ್ಣ, ಅರ್ಝಾನ್ ನಾಗ್ವಾಸ್ವಾಲಾ

ಇದನ್ನೂ ಓದಿ:

England vs India: ಇಂಗ್ಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಆಘಾತ: ಕನ್ನಡಿಗ ಔಟ್

Tokyo Olympics: ಭಾರತ ಪುರುಷರ ಹಾಕಿ ತಂಡದ ಫೈನಲ್ ಕನಸು ಭಗ್ನ; ಇನ್ನು ಕಂಚಿಗಾಗಿ ಹೋರಾಟ

(India vs England 1st Test when and where to watch Live Streaming Full Schedule, Full squads, Date, Time, Venues in Kannada)

Published On - 1:36 pm, Tue, 3 August 21