ಆಸ್ಟ್ರೇಲಿಯಾಗೆ ಬಂದ ಪರಿಸ್ಥಿತಿಯೇ ಇಂಗ್ಲೆಂಡ್​ಗೂ ಬರಲಿದೆ: ಟೀಮ್ ಇಂಡಿಯಾ ವೇಗಿಯ ಎಚ್ಚರಿಕೆ

India vs England Test:

ಆಸ್ಟ್ರೇಲಿಯಾಗೆ ಬಂದ ಪರಿಸ್ಥಿತಿಯೇ ಇಂಗ್ಲೆಂಡ್​ಗೂ ಬರಲಿದೆ: ಟೀಮ್ ಇಂಡಿಯಾ ವೇಗಿಯ ಎಚ್ಚರಿಕೆ
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 02, 2021 | 4:44 PM

ಭಾರತ-ಇಂಗ್ಲೆಂಡ್ ( India vs England ) ನಡುವಣ ಟೆಸ್ಟ್ ಸರಣಿಯು ಆಗಸ್ಟ್ 4 ರಿಂದ ಶುರುವಾಗಲಿದೆ. ಈಗಾಗಲೇ ಬುಧವಾರ ಆರಂಭವಾಗಲಿರುವ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಕಲ ಸಿದ್ಧತೆಯಲ್ಲಿದ್ದು, ಮೊದಲ ಪಂದ್ಯದಲ್ಲೇ ಗೆಲುವು ದಾಖಲಿ ಮುನ್ನಡೆ ಸಾಧಿಸುವ ಇರಾದೆಯಲ್ಲಿದೆ ಕೊಹ್ಲಿ ಪಡೆ. ಇತ್ತ ಈ ಸರಣಿಯಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ ಯುವ ವೇಗಿ ಮೊಹಮ್ಮದ್ ಸಿರಾಜ್ ( Mohammed Siraj ). ಕಳೆದ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್​ ಸರಣಿಯಲ್ಲಿ ಸಿರಾಜ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. ಇದಾಗ್ಯೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಇಂಗ್ಲೆಂಡ್ ವಿರುದ್ದ ಕಣಕ್ಕಿಳಿಯುವ ಮೂಲಕ ಸಿರಾಜ್ ಟೀಮ್ ಇಂಡಿಯಾಗೆ ( Team India ) ಸರಣಿ ಗೆದ್ದುಕೊಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೆದ್ದೇ ಗೆಲ್ಲುವೆವು ಎಂಬ ವಿಶ್ವಾಸದಲ್ಲಿರುವ ಸಿರಾಜ್, ಆಸೀಸ್​ ನೆಲದಲ್ಲಿ ಆಸ್ಟ್ರೇಲಿಯಾ ಅನುಭವಿಸಿದ ಮುಖಭಂಗದ ಪರಿಸ್ಥಿತಿಯೇ ಇಂಗ್ಲೆಂಡ್​ ತಂಡವಕ್ಕೂ ಬರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ತವರಿನಲ್ಲೇ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲಿದೆ ಎಂದು ತಿಳಿಸಿದ್ದಾರೆ. ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದ ಭಾರತ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತ್ತು. ಈ ಸರಣಿಯಲ್ಲಿ 3 ಪಂದ್ಯಗಳಿಂದ 13 ವಿಕೆಟ್ ಉರುಳಿಸುವ ಮೂಲಕ ಸಿರಾಜ್ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅದೇ ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್​ ತಂಡಕ್ಕೂ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಅಷ್ಟೇ ಅಲ್ಲದೆ ಆಸ್ಟ್ರೇಲಿಯಾದಲ್ಲಿ ನಾವು ಅಜಿಂಕ್ಯ ರಹಾನೆ ಅವರ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದ್ದೆವು. ಆ ಪಂದ್ಯದಲ್ಲಿ ನನ್ನ ಪ್ರದರ್ಶನ ನೆನಪಿಸಿಕೊಂಡರೆ ರೋಮಾಂಚನವಾಗುತ್ತೆ. ಇಂಗ್ಲೆಂಡ್ ವಿರುದ್ದ ಕೂಡ ಅಂತಹದ್ದೇ ಪ್ರದರ್ಶನ ನೀಡುವ ಈ ಬಾರಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಪ್ರಶಸ್ತಿಯನ್ನು ಎತ್ತಿ ಹಿಡಿಯಲಿದ್ದೇವೆ ಎಂದು ಸಿರಾಜ್ ತಿಳಿಸಿದರು.

ಇನ್ನು ಇಂಗ್ಲೆಂಡ್​ ವಿರುದ್ದದ ಟೆಸ್ಟ್​ನಲ್ಲಿ ನನ್ನ ಟಾರ್ಗೆಟ್ ನಾಯಕ ಜೋ ರೂಟ್ ಎಂಬುದನ್ನು ಮೊಹಮ್ಮದ್ ಸಿರಾಜ್ ಬಹಿರಂಗಪಡಿಸಿದ್ದು, ಈ ಹಿಂದೆ ಇಂಗ್ಲೆಂಡ್​ ತಂಡ ಭಾರತದಲ್ಲಿ ಸರಣಿ ಆಡಿದಾಗ ಅವರ ವಿಕೆಟ್ ನಾನೇ ಪಡೆದಿದ್ದೆ. ಹೀಗಾಗಿ ಇಂಗ್ಲೆಂಡ್ ನೆಲದಲ್ಲೂ ರೂಟ್ ವಿಕೆಟ್ ಉರುಳಿಸೋದು ನನ್ನ ಗುರಿ ಎಂದು ಸಿರಾಜ್ ತಿಳಿಸಿದರು.

ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಪ್ರಾರಂಭವಾಗಲಿದೆ. 2ನೇ ಟೆಸ್ಟ್ ಪಂದ್ಯವು ಆಗಸ್ಟ್ 12 ರಿಂದ 16ರವರೆಗೆ ನಡೆಯಲಿದೆ. ಹಾಗೆಯೇ ಮೂರನೇ ಪಂದ್ಯವು 25 ರಿಂದ ಪ್ರಾರಂಭವಾಗಲಿದ್ದು, 4ನೇ ಟೆಸ್ಟ್​ ಸೆಪ್ಟೆಂಬರ್ 2 ಕ್ಕೆ ಶುರುವಾಗಿ ಸೆ.6 ರವರೆಗೆ ನಡೆಯಲಿದೆ. ಇನ್ನು ಅಂತಿಮ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 10 ರಿಂದ ಸೆ.14ರವರೆಗೆ ಜರುಗಲಿದೆ.

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್

ಹೆಚ್ಚುವರಿ ಆಟಗಾರರು: ಪ್ರಸಿದ್ಧ್ ಕೃಷ್ಣ, ಅರ್ಝಾನ್ ನಾಗ್ವಾಸ್ವಾಲಾ

ಇದನ್ನೂ ಓದಿ: Virat Kohli: ಇಂಗ್ಲೆಂಡ್ ವಿರುದ್ದ ಸಿಡಿಸಿದ್ರೆ ಈ 5 ದಾಖಲೆಗಳು ಕೊಹ್ಲಿ ಪಾಲಾಗುವುದು ಪಕ್ಕಾ

ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ

ಇದನ್ನೂ ಓದಿ: PV Sindhu: ಒಲಿಂಪಿಕ್ಸ್​ನಲ್ಲಿ ಈ ಸಾಧನೆ ಮಾಡಿದ್ದು ಇವರಿಬ್ಬರೇ..!