AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗ್ನವಾಗಿ ಲೈವ್​ ಬಂದ ನಟಿ ಗೆಹನಾ; ಜನರಿಗೆ ಸವಾಲು ಹಾಕಿದ ಅಶ್ಲೀಲ ಸಿನಿಮಾ ಆರೋಪಿ

ತಾನು ನಟಿಸಿರುವುದು ಬೋಲ್ಡ್​ ಸಿನಿಮಾಗಳೇ ಹೊರತು ಅಶ್ಲೀಲ ಸಿನಿಮಾಗಳಲ್ಲ ಎಂಬುದು ಗೆಹನಾ ವಾದ. ಅದನ್ನೇ ಸಾಬೀತುಪಡಿಸುವ ಸಲುವಾಗಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದು ಜನರಿಗೆ ಸವಾಲು ಹಾಕಿದ್ದಾರೆ.

ನಗ್ನವಾಗಿ ಲೈವ್​ ಬಂದ ನಟಿ ಗೆಹನಾ; ಜನರಿಗೆ ಸವಾಲು ಹಾಕಿದ ಅಶ್ಲೀಲ ಸಿನಿಮಾ ಆರೋಪಿ
ನಗ್ನವಾಗಿ ಲೈವ್​ ಬಂದ ನಟಿ ಗೆಹನಾ; ಜನರಿಗೆ ಸವಾಲು ಹಾಕಿದ ಅಶ್ಲೀಲ ಸಿನಿಮಾ ಆರೋಪಿ
TV9 Web
| Updated By: ಮದನ್​ ಕುಮಾರ್​|

Updated on: Aug 04, 2021 | 8:58 AM

Share

ಉದ್ಯಮಿ ರಾಜ್​ ಕುಂದ್ರಾ ಅಶ್ಲೀಲ (Raj Kundra) ಸಿನಿಮಾ ದಂಧೆ ಕೇಸ್​ನಲ್ಲಿ ಅರೆಸ್ಟ್​ ಆದ ಬಳಿಕ ಅನೇಕ ನಟಿಯರ ಹೆಸರು ಮುನ್ನೆಲೆಗೆ ಬಂದಿದೆ. ಶಿಲ್ಪಾ ಶೆಟ್ಟಿ (Shilpa Shetty) ಪತಿ ಜೊತೆ ಸಂಪರ್ಕ ಹೊಂದಿದ್ದ ಅನೇಕ ನಟಿಯರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಆ ಪೈಕಿ ಗೆಹನಾ ವಸಿಷ್ಠ್ (Gehana Vasisth)​ ಮೇಲೆ ಗಂಭೀರ ಆರೋಪಗಳಿವೆ. ಗೆಹನಾ ಕೂಡ ನೀಲಿ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ. ಆದರೆ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಬೇರೆ ವಾದ ಮಂಡಿಸುತ್ತಿದ್ದಾರೆ. ಇದರ ನಡುವೆ ಅವರು ಸೋಶಿಯಲ್​ ಮೀಡಿಯಾದಲ್ಲಿ ನಗ್ನವಾಗಿ ಲೈವ್​ ಬಂದು ಸವಾಲು ಹಾಕಿದ್ದಾರೆ!

‘ಬಟ್ಟೆಗಳನ್ನು ಧರಿಸದೇ ನಾನು ಲೈವ್​ ಬಂದಿದ್ದೇನೆ. ಆದರೂ ಕೂಡ ಇದನ್ನು ಪೋರ್ನ್​ ಎಂದು ಯಾರೂ ಹೇಳುತ್ತಿಲ್ಲ. ಆದರೆ ನಾನು ಬಟ್ಟೆ ಧರಿಸಿ ನಟಿಸಿದಾಗ ಅದನ್ನು ಕೆಲವರು ಅಶ್ಲೀಲ ಸಿನಿಮಾ ಎನ್ನುತ್ತಾರೆ. ಇದು ಬೂಟಾಟಿಕೆಯ ಉತ್ತುಂಗ’ ಎಂಬ ಕ್ಯಾಪ್ಷನ್​ನೊಂದಿಗೆ ಅವರು ಲೈವ್​ ಬಂದಿದ್ದಾರೆ. ಮೂರು ನಿಮಿಷಗಳ ಕಾಲ ಜನರ ಜೊತೆ ಅವರು ಮಾತುಕತೆ ನಡೆಸಿದ್ದಾರೆ.

‘ಸ್ನೇಹಿತರೇ ನಾನು ನಿಮ್ಮ ಮುಂದೆ ಲೈವ್ ಬಂದಿದ್ದೇನೆ. ನಿಮ್ಮ ಕಣ್ಣಿಗೆ ನಾನು ಅಶ್ಲೀಲವಾಗಿ ಕಾಣಿಸುತ್ತಿದ್ದೇನಾ? ಇದನ್ನು ಪೋರ್ನ್​ ಎನ್ನಲಾಗುತ್ತಾ? ನಾನು ಏನೂ ಧರಿಸಿಲ್ಲ. ಆದರೂ ಇದನ್ನು ಪೋರ್ನ್​ ಎಂದು ಯಾರೂ ಹೇಳುತ್ತಿಲ್ಲ. ಆದರೆ ನಾನು ಬೇರೆ ವಿಡಿಯೋಗಳಲ್ಲಿ ಒಳ್ಳೆಯ ಬಟ್ಟೆ ಧರಿಸಿದ್ದರೂ ಕೂಡ ಅವುಗಳನ್ನು ಅಶ್ಲೀಲ ಸಿನಿಮಾ ಎಂದು ಹೇಳಲಾಗಿದೆ. ಅದು ತಪ್ಪಲ್ಲವೇ? ಎಲ್ಲರೂ ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ಬೂಟಾಟಿಕೆಗೂ ಒಂದು ಮಿತಿ ಇರಬೇಕು’ ಎಂದು ಗೆಹನಾ ಲೈವ್​ನಲ್ಲಿ ಹೇಳಿದ್ದಾರೆ.

ಅಶ್ಲೀಲ ಸಿನಿಮಾ ದಂಧೆಯಲ್ಲಿ ಗೆಹನಾ ನಟಿಸುತ್ತಿದ್ದರು ಎಂಬ ಆರೋಪದ ಮೇಲೆ ಪೊಲೀಸರು ಅವರನ್ನು ಅರೆಸ್ಟ್​ ಮಾಡಿದ್ದರು. ಈಗ ಜಾಮೀನಿನ ಮೇಲೆ ಅವರು ಹೊರಬಂದಿದ್ದಾರೆ. ತಾನು ನಟಿಸಿರುವುದು ಬೋಲ್ಡ್​ ಸಿನಿಮಾಗಳೇ ಹೊರತು ಅಶ್ಲೀಲ ಸಿನಿಮಾಗಳಲ್ಲ ಎಂಬುದು ಗೆಹನಾ ವಾದ. ಅದನ್ನೇ ಸಾಬೀತುಪಡಿಸುವ ಸಲುವಾಗಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದು ಜನರಿಗೆ ಮತ್ತು ತಮ್ಮನ್ನು ಅರೆಸ್ಟ್​ ಮಾಡಿದ್ದ ಪೊಲೀಸರಿಗೆ ಸವಾಲು ಹಾಕಿದ್ದಾರೆ. ಅರೆಸ್ಟ್​ ಆಗುವುದನ್ನು ತಪ್ಪಿಸಲು ಪೊಲೀಸರು 15 ಲಕ್ಷ ಲಂಚ ಕೇಳಿದ್ದರು, ರಾಜ್​ ಕುಂದ್ರಾ ಹೆಸರನ್ನು ಉಲ್ಲೇಖಿಸುವಂತೆ ಒತ್ತಡ ಹೇರಿದ್ದರು ಎಂದು ಕೂಡ ಈ ಹಿಂದೆ ಗೆಹನಾ ಆರೋಪಿಸಿದ್ದರು.

ಇದನ್ನೂ ಓದಿ:

ಪೊಲೀಸರು ನನ್ನಿಂದ ಬಲವಂತವಾಗಿ ರಾಜ್​ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ

ಅಶ್ಲೀಲ ಸಿನಿಮಾ ದಂಧೆಗೆ ಹುಡುಗಿಯರನ್ನು ಹೇಗೆ ತಳ್ಳುತ್ತಿದ್ದರು? ಯುವತಿಯರನ್ನು ಬೆಚ್ಚಿ ಬೀಳಿಸುವ ವಿವರ ಇಲ್ಲಿದೆ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!