Kishore Kumar Birth Anniversary: ಕಿಶೋರ್ ಕುಮಾರ್ ಅವರನ್ನು ಅಜರಾಮರವಾಗಿಸಿದ ಅವರ ಅದ್ಭುತ ಗಾಯನ

Kishore Kumar: ಮಾಧುರ್ಯದ ಹಾಡುಗಳ ದೊರೆಯೆಂದೇ ಕರೆಯಲ್ಪಡುವ ಕಿಶೋರ್ ಕುಮಾರ್, ತಮ್ಮ ವೃತ್ತಿ ಜೀವನದುದ್ದಕ್ಕೂ ಹಿಟ್ ಗೀತೆಗಳನ್ನು ನೀಡುತ್ತಲೇ ಬಂದವರು. ಅವರು ಕೇವಲ ಅದ್ಭುತ ಗಾಯಕ ಮಾತ್ರ ಅಲ್ಲ; ಅತ್ಯುತ್ತಮ ನಟ ಕೂಡಾ ಹೌದು.

Kishore Kumar Birth Anniversary: ಕಿಶೋರ್ ಕುಮಾರ್ ಅವರನ್ನು ಅಜರಾಮರವಾಗಿಸಿದ ಅವರ ಅದ್ಭುತ ಗಾಯನ
ಕಿಶೋರ್ ಕುಮಾರ್
Follow us
TV9 Web
| Updated By: shivaprasad.hs

Updated on:Aug 04, 2021 | 1:38 PM

1929ರ ಆಗಸ್ಟ್ 4ರಂದು ಜನಿಸಿದ ಕಿಶೋರ್ ಕುಮಾರ್ ಭಾರತೀಯ ಸಿನಿಮಾ ಸಂಗೀತದ ಮುಖವಾಣಿಯೆಂದೇ ವಿಮರ್ಶಕರು ಅವರನ್ನು ಗುರುತಿಸುತ್ತಾರೆ. ಜನರ ಜೀವನದಲ್ಲಿ ತಾವು ಹಾಡಿದ ಹಾಡಿನೊಂದಿಗೆ ಬೆರೆತು ಹೋಗಿರುವ ಅವರ ಧ್ವನಿ ಅಜರಾಮರ. ಮೆಲೋಡಿಯಸ್ ಹಾಡುಗಳ ರಾಜನೆಂದೇ ಅವರನ್ನು ಗುರುತಿಸುವ ಗೀತ ಪ್ರೇಮಿಗಳು, ಅವರ ಸತತ ಹಿಟ್ ಹಾಡುಗಳಿಗಾಗಿ ಅಪಾರವಾಗಿ ಮೆಚ್ಚುತ್ತಾರೆ. ತಮ್ಮ ವೃತ್ತಿ ಜೀವನದಲ್ಲಿ ಕಿಶೋರ್ ಕುಮಾರ್ ಸುಮಾರು 120 ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಕಿಶೋರ್ ಕುಮಾರ್ ಕೇವಲ ಅದ್ಭುತ ಹಾಡುಗಾರರಾಗಿರಲಿಲ್ಲ. ಅತ್ಯುತ್ತಮ ನಟರೂ ಹೌದು. ನಟರಾಗಿ 88 ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕುತೂಹಲಕರ ಸಂಗತಿಯೆಂದರೆ‌ ನಿರ್ದೇಶನದ ಕ್ಯಾಪ್ ಅನ್ನೂ ತೊಟ್ಟಿದ್ದ ಕಿಶೋರ್ ಕುಮಾರ್ ಅವರು 12 ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಅವರಿಗೆ ಅಪಾರ ಅಭಿಮಾನಿ‌ ಬಳಗ, ಹೆಸರು ಪ್ರಾಪ್ತವಾದದ್ದು ತಮ್ಮ ಮಧುರ ಕಂಠ ಹಾಗೂ ಗಾಯನದಿಂದಾಗಿ.

ತಮ್ಮ ಗಾಯನದಿಂದ ಚಿತ್ರ ರಸಿಕರ ಮೆಚ್ಚುಗೆಗೆ ಪಾತ್ರವಾಗಿರುವ ಕಿಶೋರ್ ಕುಮಾರ್ ಅವರ ಆಯ್ದ ಐದು ಅದ್ಭುತ ಗೀತೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಏಕ್ ಅಜ್ನಬೀ ಹಸೀನಾ ಸೇ:

1974ರಲ್ಲಿ ಬಿಡುಗಡೆಯಾದ ಅಜ್ನಬೀ ಚಿತ್ರದ ಹಾಡಿದು. ರಾಜೇಶ್ ಖನ್ನಾ ಹಾಗೂ ಜೀನತ್ ಅಮೀನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಏಕ್ ಲಡ್ಕಿ ಭೀಗಿ ಭಾಗಿ ಸೀ:

1958ರಲ್ಲಿ ತೆರೆಗೆ ಬಂದ ‘ಚಲ್ತೀ ಕಾ ನಾಮ್ ಗಾಡಿ’ ಚಿತ್ರದ ಕಪ್ಪು ಬಿಳುಪಿನ ಹಾಡು.

ತೇರೆ ಬಿನಾ ಜಿಂದಗೀ ಸೆ:

ಗಾಯನದ ದಂತೆಕತೆಗಳಾದ ಲತಾ ಮಂಗೇಶ್ಕರ್ ಹಾಗೂ ಕಿಶೋರ್ ಕುಮಾರ್ ಹಾಡಿರುವ ಈ ಗೀತೆ ‘ಆಂಧಿ’ ಚಿತ್ರದ್ದು. 1975ರಲ್ಲಿ ಬಿಡುಗಡೆಯಾದ ಈ ಚಿತ್ರ ಆಗಿನ ಕಾಲದ ಅತ್ಯಂತ ಹಿಟ್ ಗೀತೆಯಾಗಿತ್ತು. ಅನಿವಾರ್ಯ ಕಾರಣದಿಂದ ಬೇರ್ಪಟ್ಟ ಈರ್ವರ ನಡುವಿನ‌ ಸ್ಥಿತಿಯನ್ನು ವಿವರಿಸುವ ಈ ಗೀತೆಯನ್ನು ಕೇಳಿ ಅನಂದಿಸಿ.

ಚಿಂಗಾರಿ ಕೋಯಿ ಭಡ್ಕೆ:

1972ರ ‘ಅಮರ್ ಪ್ರೇಮ್’ ಚಿತ್ರದ ಈ ಗೀತೆ ಕೇಳುಗರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ರಾಜೇಶ್ ಖನ್ನಾ, ಶರ್ಮಿಲಾ ಟಾಗೋರ್ ಅಭಿನಯಿಸಿರುವ ಈ ಗೀತೆಯನ್ನು ದೋಣಿಯ ಮೇಲೆ ರಾತ್ರಿಯಂದು ಚಿತ್ರೀಕರಿಸಲಾಗಿದೆ. ಹಾಡಿನಷ್ಟೇ ಸುಂದರವಾಗಿ ಪಾತ್ರಧಾರಿಗಳೂ ಭಾವ ಪೂರ್ಣ ಅಭಿನಯ ಮಾಡಿದ್ದಾರೆ.

ಮೇರೆ ಸಪ್ನೊ ಕಿ ರಾಣಿ:

1969ರಲ್ಲಿ ಬಿಡುಗಡೆಯಾದ ಆರಾಧನಾ ಚಿತ್ರದ ಈ ಹಾಡನ್ನು ಬಹುಶಃ ಕೇಳದವರು ವಿರಳ. ಕಾರಣ, ಈಗಿನ ಚಿತ್ರಗಳಲ್ಲೂ ಈ ಹಾಡಿನ‌ ತುಣುಕೊಂದು ಬಂದು ಹೋಗುವುದುಂಟು. ಈ ಚಿತ್ರದಲ್ಲೂ ರಾಜೇಶ್ ಖನ್ನಾ ಹಾಗೂ ಶರ್ಮಿಳಾ ಟಾಗೋರ್ ಕಾಣಿಸಿಕೊಂಡಿದ್ದಾರೆ.

ಕಿಶೋರ್ ಕುಮಾರ್ ತಮ್ಮ ವೃತ್ತಿ ಜೀವನದಲ್ಲಿ ರಾಜೇಶ್ ಖನ್ನಾ ಅವರ ಚಿತ್ರಗಳಿಗೆ ಸುಮಾರು 245 ಗೀತೆಗಳನ್ನು ಹಾಡಿದ್ದಾರೆ‌. ಜೀತೇಂದ್ರ ಅವರ ಚಿತ್ರದ 202 ಗೀತೆಗಳನ್ನೂ, ದೇವ್ ಆನಂದ್ ಅವರ 119 ಗೀತೆಗಳನ್ನೂ ಹಾಗೂ ಅಮಿತಭ್ ಅವರ ಚಿತ್ರದ 131 ಗೀತೆಗಳಿಗೆ ಕಿಶೋರ್ ಕುಮಾರ್ ಧ್ವನಿಯಾಗಿದ್ದಾರೆ. ಕಿಶೋರ್ ಕುಮಾರ್ ಅವರೊಂದಿಗೆ ಅತಿ ಹೆಚ್ಚು ಬಾರಿ ಜೊತೆಯಾಗಿ ಹಾಡಿದವರು ಆಶಾ ಭೋಸ್ಲೆ. ಅವರು 687 ಹಾಡುಗಳನ್ನೂ, ಲತಾ ಮಂಗೇಶ್ಕರ್ ಅವರು 343 ಹಾಡುಗಳನ್ನೂ ಜೊತೆಯಾಗಿ ಹಾಡಿದ್ದಾರೆ. ವಿಶೇಷವೆಂದರೆ ಮತ್ತೊಬ್ಬ ಗಾಯನ‌ ಮಾಂತ್ರಿಕ ಮಹಮ್ಮದ್ ರಫಿಯವರೊಂದಿಗೆ ಕಿಶೋರ್ ಕುಮಾರ್ 72 ಗೀತೆಗಳನ್ನು ಹಾಡಿದ್ದಾರೆ.

ಇದನ್ನೂ ಓದಿ:

ಮರಳಿನಲ್ಲಿ ಚಿತ್ರ ಬರೆದು ಕಂಚಿನ ಪದಕ ವಿಜೇತೆ ಪಿವಿ ಸಿಂಧುಗೆ ಶುಭ ಹಾರೈಸಿದ ಕಲಾವಿದ ಸುದರ್ಶನ್ ಪಟ್ನಾಯಕ್

(Legendary singer Kishor kumar‘s hit songs and his achievements in the memory of his birthday in Kannada)

Published On - 1:34 pm, Wed, 4 August 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ