AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಹೋಸ್ಟ್ ಆದ ಸೌರವ್ ಗಂಗೂಲಿ; ಹೊಸ ಕ್ಷೇತ್ರಕ್ಕೆ ಕಾಲಿಟ್ಟ ದಾದ

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಬೆಂಗಾಲಿ ಬಿಗ್ ಬಾಸ್ ಹೋಸ್ಟ್ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್ ದಿಗ್ಗಜರೊಬ್ಬರು ರಿಯಾಲಿಟಿ ಶೋ ಹೋಸ್ಟ್ ಮಾಡುತ್ತಿರುವುದು ಇದೇ ಮೊದಲು. ಅವರ ಮೈದಾನದ ಅಗ್ರೆಸಿವ್ ಗುಣ, ವಿವಿಧ ಮನಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯಕ್ಕೆ ಸಹಕಾರಿ ಆಗಬಹುದು. 10 ವರ್ಷಗಳ ಬಳಿಕ ಬೆಂಗಾಲಿ ಬಿಗ್ ಬಾಸ್ ಮರಳುತ್ತಿದ್ದು, ಈ ಮೂಲಕ ಗಂಗೂಲಿ ಭಾರತದ ಜನಪ್ರಿಯ ಶೋನ ಭಾಗವಾಗಲಿದ್ದಾರೆ.

ಬಿಗ್ ಬಾಸ್ ಹೋಸ್ಟ್ ಆದ ಸೌರವ್ ಗಂಗೂಲಿ; ಹೊಸ ಕ್ಷೇತ್ರಕ್ಕೆ ಕಾಲಿಟ್ಟ ದಾದ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on:Mar 11, 2026 | 7:05 AM

Share

ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ ಸೌರವ್ ಗಂಗೂಲಿ ಅವರು ಈಗ ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅವರು ಬಣ್ಣದ ಲೋಕದಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಬಿಗ್ ಬಾಸ್​ನ (Bigg Boss) ಬೆಂಗಾಲಿ ವರ್ಷನ್​​ಗೆ ಹೋಸ್ಟ್ ಆಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಭಾರತದ ಜನಪ್ರಿಯ ಶೋನ ಭಾಗವಾಗಲು ರೆಡಿ ಆಗಿದ್ದಾರೆ. ಶೀಘ್ರವೇ ಸ್ಟಾರ್ ಜಲ್ಶಾದಲ್ಲಿ ಈ ಶೋ ಪ್ರಸಾರ ಕಾಣಲಿದೆ.

‘ಬಿಗ್ ಬಾಸ್​​’ಗೆ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಕಿಚ್ಚ ಸುದೀಪ್, ಸಲ್ಮಾನ್ ಖಾನ್, ಕಮಲ್ ಹಾಸನ್, ನಾಗಾರ್ಜುನ, ವಿಜಯ್ ಸೇತುಪತಿಯಂತಹ ಸ್ಟಾರ್ ನಟರು ಇದರ ಹೋಸ್ಟ್ ಆಗಿ ಮಿಂಚಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಸಿನಿಮಾ ರಂಗಕ್ಕೆ ಸಂಬಂಧಿಸಿದವರೇ ಇದನ್ನು ಹೋಸ್ಟ್ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಕ್ರಿಕೆಟ್ ಕ್ಷೇತ್ರದ ಹಿನ್ನೆಲೆ ಹೊಂದಿರುವವರು ಬಿಗ್ ಬಾಸ್ ಶೋನ ನಡೆಸಿಕೊಡುತ್ತಿರುವುದು ವಿಶೇಷ.

‘ಬಿಗ್ ಬಾಸ್​’ಗೆ ವಿವಿಧ ರೀತಿಯ ಮನಸ್ಥಿತಿ ಇರುವ ವ್ಯಕ್ತಿಗಳು ಬರುತ್ತಾರೆ. ಅವರೆಲ್ಲರನ್ನೂ ಹ್ಯಾಂಡಲ್ ಮಾಡೋದು ಅಷ್ಟು ಸುಲಭ ಅಲ್ಲ. ಅದಕ್ಕೆ ಸಾಕಷ್ಟು ಖಡಕ್ ಆಗಿ ನಡೆದುಕೊಳ್ಳಬೇಕು. ಸೌರವ್ ಗಂಗೂಲಿ ಅವರು ಮೇಲ್ನೋಟಕ್ಕೆ ಸೈಲೆಂಟ್ ಇದ್ದಂತೆ ಕಂಡರೂ ಅವರು ಮೈದಾನದಲ್ಲಿ ತೋರಿಸಿದ ಅಗ್ರೆಷನ್ ಇನ್ನೂ ಜನರ ಕಣ್ಮುಂದೆ ಇದೆ. ಹೀಗಾಗಿ, ಅವರು ಬಿಗ್ ಬಾಸ್​ ನಡೆಸಿಕೊಡಲು ಉತ್ತಮ ಆಯ್ಕೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ; ಪರಿಸ್ಥಿತಿ ಚಿಂತಾಜನಕ

ಕನ್ನಡ, ಹಿಂದಿ, ತೆಲುಗು ಮೊದಲಾದ ಭಾಷೆಗಳಲ್ಲಿ ಪ್ರತಿ ವರ್ಷವೂ ಬಿಗ್ ಬಾಸ್ ನಡೆಯಲಿದೆ. ಕನ್ನಡದಲ್ಲಿ ಮೊದಲ ಸೀಸನ್ ಆರಂಭ ಆಗಿದ್ದು 2013ರಲ್ಲಿ. ಇಲ್ಲಿ ಈಗಾಗಲೇ 12 ಸೀಸನ್​​ಗಳು ಪೂರ್ಣಗೊಂಡಿವೆ. ಮಜವಾದ ಸಂಗತಿ ಎಂದರೆ, ಬೆಂಗಾಲಿಯಲ್ಲೂ ಮೊದಲ ಸೀಸನ್ ನಡೆದಿದ್ದು 2013ರಲ್ಲಿ. ಇದಕ್ಕೆ ಮಿಥುನ್ ಚಕ್ರವರ್ತಿ ಹೋಸ್ಟ್ ಆಗಿದ್ದರು. ಎರಡನೇ ಸೀಸನ್ ಪ್ರಸಾರ ಕಂಡಿದ್ದು, 2016ರಲ್ಲಿ. ಇದಕ್ಕೆ ಜೀತ್ ನಿರೂಪಕರಾಗಿದ್ದರು. ಆದರೆ, ಎರಡೂ ಸೀಸನ್​​ಗಳು ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಹೀಗಾಗಿ, ಅಲ್ಲಿ ಬಿಗ್ ಬಾಸ್ ನಡೆಯಲೇ ಇಲ್ಲ. ಈಗ 10 ವರ್ಷಗಳ ಬಳಿಕ ಶೋ ಬೆಂಗಾಲಿ ಭಾಷೆಗೆ ಮರಳುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:04 am, Wed, 11 March 26

Follow Us