20 ಕೋಟಿ ರೂ ಪರಿಹಾರ ಮತ್ತು ಪ್ರತೀ ತಿಂಗಳು ಮನೆಗಾಗಿ 5 ಲಕ್ಷ ರೂಗೆ ಮನವಿ ಸಲ್ಲಿಸಿದ ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್

20 ಕೋಟಿ ರೂ ಪರಿಹಾರ ಮತ್ತು ಪ್ರತೀ ತಿಂಗಳು ಮನೆಗಾಗಿ 5 ಲಕ್ಷ ರೂಗೆ ಮನವಿ ಸಲ್ಲಿಸಿದ ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್
ಯೋ ಯೋ ಹನಿ ಸಿಂಗ್

Yo Yo Honey Singh | Shalini Talwar: ಬಾಲಿವುಡ್ ಗಾಯಕ ಹನಿ ಸಿಂಗ್ ವಿರುದ್ಧ ಅವರ ಪತ್ನಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 20ಕೋಟಿ ರೂ. ಹಣವನ್ನೂ ಮತ್ತು ಪ್ರತೀ ತಿಂಗಳು 5 ಲಕ್ಷ ರೂಗಳನ್ನು ಮನೆಯ ಬಾಡಿಗೆಗಾಗಿ ಪರಿಹಾರ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

TV9kannada Web Team

| Edited By: shivaprasad.hs

Aug 04, 2021 | 4:04 PM

ಬಾಲಿವುಡ್ ಗಾಯಕ ಯೋ ಯೋ ಹನಿ ಸಿಂಗ್ ಅವರ ಪತ್ನಿ ಶಾಲಿನಿ ತಲ್ವಾರ್ 20 ಕೋಟಿ ರೂ. ಪರಿಹಾರವನ್ನು ಮತ್ತು ಪ್ರತಿ ತಿಂಗಳು ಮನೆಗೆ 5ಲಕ್ಷ ರೂ. ಹಣವನ್ನು ಪರಿಹಾರ ರೂಪದಲ್ಲಿ ಕೇಳಿದ್ದಾರೆ. ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುವ ಶಾಲಿನಿ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಪರಿಹಾರ ರೂಪದಲ್ಲಿ 20ಕೋಟಿಯನ್ನೂ ಹಾಗೂ ದೆಹಲಿಯಲ್ಲಿರುವ ಪೂರ್ಣ ಸುಸಜ್ಜಿತ ಮನೆಗೆ ಬಾಡಿಗೆ ಕಟ್ಟುವುದಕ್ಕಾಗಿ ಪ್ರತೀ ತಿಂಗಳೂ 5ಲಕ್ಷ ರೂ.ಗಳನ್ನು ಹನಿ ಸಿಂಗ್ ನೀಡಬಬೇಕೆಂದು ಮನವಿ ಸಲ್ಲಿಸಿದ್ದಾರೆ. ಜೊತೆಗೆ, ಮದುವೆಯ ಸಂದರ್ಭದಲ್ಲಿ ನೀಡಿದ್ದ ವರದಕ್ಷಿಣೆಯನ್ನು ಮರಳಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಹಿನ್ನೆಲೆ ಏನು?

ಬಾಲಿವುಡ್​ನ ಖ್ಯಾತ ರ‍್ಯಾಪ್ ಸಿಂಗರ್​ ಯೋ ಯೋ ಹನಿ ಸಿಂಗ್​ (Yo Yo Honey Singh) ಸಂಸಾರದ ಗಲಾಟೆ ಈಗ ಬೀದಿಗೆ ಬಂದಿದೆ. ಹನಿ ಸಿಂಗ್​ ಪತ್ನಿ ಶಾಲಿನ ತಲ್ವಾರ್​ (Shalini Talwar) ಅವರು ಹನಿ ಸಿಂಗ್​ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಒಂದು ಕಾಲದಲ್ಲಿ ಬಹುಬೇಡಿಕೆಯ ಗಾಯಕನಾಗಿದ್ದ ಹನಿ ಸಿಂಗ್​ಗೆ ವಿವಾದಗಳು ಹೊಸದೇನಲ್ಲ. ಆದರೆ ಈ ಬಾರಿ ಅವರ ಪತ್ನಿ ಕೋರ್ಟ್​ ಮೆಟ್ಟಿಲು ಏರಿರುವುದರಿಂದ ಅದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಷ್ಟು ದಿನಗಳ ಕಾಲ ಗೌಪ್ಯವಾಗಿದ್ದ ತಮ್ಮ ಸಂಸಾರದ ಕಹಿ ಸತ್ಯಗಳನ್ನೆಲ್ಲ ಶಾಲಿನಿ ತಲ್ವಾರ್​ ಬಹಿರಂಗಪಡಿಸಿದ್ದಾರೆ. ಹನಿ ಸಿಂಗ್​ ಅವರ ಕರಾಳ ಮುಖವನ್ನು ಅವರು ಬಯಲು ಮಾಡಿದ್ದಾರೆ.

2011ರಲ್ಲಿ ಹನಿ ಸಿಂಗ್​ ಮತ್ತು ಶಾಲಿನಿ ತಲ್ವಾರ್​ ಮದುವೆ ನೆರವೇರಿತ್ತು. ಹತ್ತು ವರ್ಷಗಳ ಕಾಲ ಹನಿ ಸಿಂಗ್​ ಜೊತೆ ದಾಂಪತ್ಯ ಜೀವನ ನಡೆಸಿರುವ ಶಾಲಿನಿ, ದಾಂಪತ್ಯದಲ್ಲಿ ಅನೇಕ ಹಿಂಸೆ ಅನುಭವಿಸಿದ್ದಾರೆ ಎಂದು ಕೋರ್ಟ್​ಗೆ ಸಲ್ಲಿಸಿದ ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ಒಂದು ಕಾಲದಲ್ಲಿ ಭಾರತದ ಬಹುಬೇಡಿಕೆಯ ಗಾಯಕರಾಗಿದ್ದ ಹನಿ ಸಿಂಗ್​ ಇತ್ತೀಚೆಗೆ ವಿವಾದಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರ ಪತ್ನಿ ಶಾಲಿನಿ ಕೋರ್ಟ್​ ಮೆಟ್ಟಿಲು ಏರಿರುವುದರಿಂದ ಅದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಷ್ಟು ದಿನಗಳ ಕಾಲ ಗೌಪ್ಯವಾಗಿದ್ದ ತಮ್ಮ ಸಂಸಾರದ ಕಹಿ ಸತ್ಯಗಳನ್ನೆಲ್ಲ ಶಾಲಿನಿ ತಲ್ವಾರ್​ ಬಹಿರಂಗಪಡಿಸಿದ್ದಾರೆ. ಶಾಲಿನಿ ಅವರು ತಮ್ಮ ಪತಿ ಹನಿ ಸಿಂಗ್ ವಿರುದ್ಧ ಆರೋಪ ಮಾಡಿದ ವಿಷಯಗಳಿವು.

1. ಅನೇಕ ಬಾರಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಮೌಖಿಕವಾಗಿ ನನ್ನ ಮೇಲೆ ಹನಿ ಸಿಂಗ್​ ಹಲ್ಲೆ ಮಾಡಿದ್ದಾರೆ.

2. ಎಲ್ಲ ಸಂಭಾವನೆಯನ್ನು ನಗದು ರೂಪದಲ್ಲೇ ಹನಿ ಸಿಂಗ್​ ಪಡೆಯುತ್ತಾರೆ. ಹಣದ ವ್ಯವಹಾರವನ್ನು ನನ್ನಿಂದ ಮುಚ್ಚಿಟ್ಟಿದ್ದಾರೆ.

3. ಅನೇಕ ಮಹಿಳೆಯರ ಜೊತೆ ಹನಿ ಸಿಂಗ್​ ಸಹಜ ಎಂಬಂತೆ ಲೈಂಗಿಕ ಕ್ರಿಯೆ ನಡೆಸುತ್ತಾರೆ.

4. ನನ್ನ ಜೊತೆ ಮದುವೆ ಆಗಿದೆ ಎಂಬ ಸತ್ಯವನ್ನು ಜನರಿಂದ ಹಲವು ವರ್ಷಗಳವರೆಗೆ ಹನಿ ಸಿಂಗ್​ ಮುಚ್ಚಿಟ್ಟಿದ್ದರು.

5. ನಮ್ಮ ಮದುವೆಯ ಫೋಟೋಗಳು ಇಂಟರ್​ನೆಟ್​ನಲ್ಲಿ ಲೀಕ್​ ಆಗಿದ್ದಕ್ಕೆ ನಾನೇ ಕಾರಣ ಎಂದು ಅವರು ಅನುಮಾನಪಟ್ಟಿದ್ದರು ಹಾಗೂ ಕೋಪಗೊಂಡು ನನ್ನನ್ನು ಮನಬಂದಂತೆ ಥಳಿಸಿದ್ದರು.

ಈ ಆರೋಪಗಳ ಜೊತೆಗೆ ಇನ್ನೂ ಹಲವು ಆರೋಪಗಳನ್ನು ಶಾಲಿನಿ ಮಾಡಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಹನಿ ಸಿಂಗ್​ಗೆ ನ್ಯಾಯಾಲಯ ನೋಟಿಸ್​ ಜಾರಿ ಮಾಡಿದೆ. ಶಾಲಿನಿ ಪರವಾಗಿ ಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಪತ್ನಿಯ ಜೊತೆ ಜಂಟಿ ಒಡೆತನದಲ್ಲಿ ಇರುವ ಯಾವುದೇ ಆಸ್ತಿಯನ್ನೂ ಮಾರಾಟ ಮಾಡದಂತೆ ಹನಿ ಸಿಂಗ್​ಗೆ ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ:

ಏಕಕಾಲಕ್ಕೆ ಅನೇಕ ಸ್ತ್ರೀಯರ ಜೊತೆ ಲೈಂಗಿಕ ಕ್ರಿಯೆ, ಪತ್ನಿಗೆ ಥಳಿತ; ಹನಿ ಸಿಂಗ್​ ಕರ್ಮಕಾಂಡದ ಪೂರ್ತಿ ಲಿಸ್ಟ್​ ಇಲ್ಲಿದೆ

Yo Yo Honey Singh: ಹನಿ ಸಿಂಗ್ ವಿರುದ್ದ ಪತ್ನಿಯಿಂದ ಗಂಭೀರ ಆರೋಪ: ದೂರು ದಾಖಲು

(Shalini Thalwar seeks compensation 20Cr and 5 Lakhs per month from Honey Singh says report)

Follow us on

Related Stories

Most Read Stories

Click on your DTH Provider to Add TV9 Kannada