PV Sindhu: ಪದಕ ಗೆದ್ದರೂ ಅಭಿನಂದಿಸಿಲ್ಲ, ಬಾಡ್ಮಿಂಟನ್ ತಾರೆಯರ ಒಳ ಮನಿಸು..!

ಈ ಹಿಂದೆ ಸಿಂಧು ಮೂರು ತಿಂಗಳ ತರಬೇತಿಗಾಗಿ ಲಂಡನ್‌ಗೆ ತೆರಳಿದ್ದರು. ಈ ವೇಳೆ ಕೋಚ್ ಗೋಪಿಚಂದ್ ಹಾಗೂ ಆಕೆಯ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.

PV Sindhu: ಪದಕ ಗೆದ್ದರೂ ಅಭಿನಂದಿಸಿಲ್ಲ, ಬಾಡ್ಮಿಂಟನ್ ತಾರೆಯರ ಒಳ ಮನಿಸು..!
pv sindhu and saina nehwal
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 02, 2021 | 7:06 PM

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಗಳಾದ ಪಿವಿ ಸಿಂಧು (PV Sindhu) ಹಾಗೂ ಸೈನಾ ನೆಹ್ವಾಲ್ (Saina Nehwal) ನಡುವೆ ಶೀತಲ ಸಮರ ಏರ್ಪಟ್ಟಿದೆಯಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಂಡಿರುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸಿಂಧು ಗೆದ್ದ ಬಳಿಕ. ಹೌದು, ಭಾನುವಾರ ನಡೆದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಬಿಂಗ್ಜಿಯಾವೊ ಅವರನ್ನು ಮಣಿಸುವ ಮೂಲಕ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಒಲಿಂಪಿಕ್ಸ್​ನಲ್ಲಿ ಸತತವಾಗಿ 2 ಪದಕ ಗೆದ್ದ ಭಾರತದ ಮಹಿಳಾ ತಾರೆಯಾಗಿ ಸಿಂಧು ಇತಿಹಾಸ ನಿರ್ಮಿಸಿದ್ದರು.

ಈ ಗೆಲುವಿನ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿಂಧುಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಇದೇ ವೇಳೆ ನಿಮ್ಮ ಹಳೆಯ ಕೋಚ್ ಗೋಪಿಚಂದ್ ಹಾಗೂ ಸಹ ಆಟಗಾರ್ತಿ ಸೈನಾ ನೆಹ್ವಾಲ್ ಅಭಿನಂದಿಸಿದ್ದಾರಾ ಎಂದು ಪ್ರಶ್ನಿಸಲಾಗಿತ್ತು. ಈ ವೇಳೆ ಗೋಪಿ ಸರ್ ಅಭಿನಂದಿಸಿದ್ದರು. ಇದಾಗ್ಯೂ ನಾನು ಇನ್ನೂ ಸೋಷಿಯಲ್ ಮೀಡಿಯಾ ನೋಡಿಲ್ಲ ಎಂದು ಮಾತ್ರ ಉತ್ತರ ನೀಡಿದ್ದರು. ಇದಾಗ್ಯೂ ಸೈನಾ ಅವರ ಬಗ್ಗೆ ಕೇಳಿದಾಗ, ಇಲ್ಲ ಅವರು ಯಾವುದೇ ಅಭಿನಂದನೆ ಸಲ್ಲಿಸಿಲ್ಲ. ನಾನು ಅವರು ಹೆಚ್ಚು ಮಾತನಾಡುವುದಿಲ್ಲ ಎಂದು ಉತ್ತರಿಸಿದ್ದರು. ಇತ್ತ ಸೈನಾ ನೆಹ್ವಾಲ್ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲೂ ಸಿಂಧು ಅವರ ಸಾಧನೆಗೆ ಯಾವುದೇ ವಿಶಸ್ ಕೂಡ ಕಂಡು ಬರದಿರುವುದು ಅಚ್ಚರಿಗೆ ಕಾರಣವಾಗಿತ್ತು. ಇದರೊಂದಿಗೆ ಭಾರತದ ಇಬ್ಬರು ಬ್ಯಾಡ್ಮಿಂಟನ್ ತಾರೆಯ ನಡುವೆ ಶೀತಲ ಸಮರ ನಡೆಯುತ್ತಿರುವುದು ಬಹಿರಂಗವಾಗಿದೆ.

ಈ ಹಿಂದೆ ಸಿಂಧು ಮೂರು ತಿಂಗಳ ತರಬೇತಿಗಾಗಿ ಲಂಡನ್‌ಗೆ ತೆರಳಿದ್ದರು. ಈ ವೇಳೆ ಕೋಚ್ ಗೋಪಿಚಂದ್ ಹಾಗೂ ಆಕೆಯ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಆ ಬಳಿಕ ಸಿಂಧು ಗೋಪಿಚಂದ್ ಅಕಾಡೆಮಿಯ ಬದಲು ಪಾರ್ಕ್ ಟೇ-ಸಾಂಗ್ ಮಾರ್ಗದರ್ಶನದಲ್ಲಿ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ಪಡೆಯಲು ನಿರ್ಧರಿಸಿದರು. ಇದಾಗ್ಯೂ ಪಿವಿ ಸಿಂಧು, ಗೋಪಿಚಂದ್ ಮಾರ್ಗದರ್ಶನದಲ್ಲಿ ಒಲಿಂಪಿಕ್ಸ್ ಆಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಇಂಡೋನೇಷ್ಯಾ ಕೋಚ್ ಟೇ ಸಾಂಗ್ ಅವರ ಮಾರ್ಗದರ್ಶನದಲ್ಲಿ ಕಣಕ್ಕಿಳಿದಿದ್ದರು. ಅದರಂತೆ ಕಂಚಿನ ಪದಕ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದರು. ಇತ್ತ ಹಳೆಯ ವೈಮನಸ್ಸು ಮರೆತು ಮಾಜಿ ಕೋಚ್ ಗೋಪಿಚಂದ್ ಸಿಂಧುಗೆ ವಿಶಸ್ ತಿಳಿಸಿದ್ದರು.

ಆದರೆ ಅತ್ತ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸೈನಾ ನೆಹ್ವಾಲ್ ಅವರು ಸಿಂಧು ಅವರೊಂದಿಗೆ ಕೋರ್ಟ್​ ಹೊರಗೆಯೂ ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ನಡುವೆ ಮುನಿಸಿದ್ದು, ಹೀಗಾಗಿಯೇ ಕಂಚಿನ ಪದಕ ಗೆದ್ದರೂ ಸೈನಾ ಅಭಿನಂದಿಸಿಲ್ಲ. 2017 ರಿಂದ ಸೈನಾ ಮತ್ತು ಸಿಂಧು ನಡುವಿನ ವೈಮನಸ್ಸು ಮುಂದುವರೆದಿದ್ದು, ಇದೀಗ ಅದು ಜಗಜ್ಜಾಹೀರಾಗಿದೆ. ಇನ್ನು ಸೈನಾ ನೆಹ್ವಾಲ್ ಈ ಬಾರಿಯ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು. 2016 ರಲ್ಲಿ ನಡೆದ ರಿಯೋ ಒಲಿಂಪಿಕ್ಸ್​ನಲ್ಲಿ ಅರ್ಹತೆ ಪಡೆದರೂ ಸೈನಾ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದರು.

ಇದನ್ನೂ ಓದಿ: Virat Kohli: ಇಂಗ್ಲೆಂಡ್ ವಿರುದ್ದ ಸಿಡಿಸಿದ್ರೆ ಈ 5 ದಾಖಲೆಗಳು ಕೊಹ್ಲಿ ಪಾಲಾಗುವುದು ಪಕ್ಕಾ

ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ

ಇದನ್ನೂ ಓದಿ: PV Sindhu: ಒಲಿಂಪಿಕ್ಸ್​ನಲ್ಲಿ ಈ ಸಾಧನೆ ಮಾಡಿದ್ದು ಇವರಿಬ್ಬರೇ..!

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್