Kamalpreet Kaur: ಫೈನಲ್​ನಲ್ಲಿ ಎಡವಿದ ಭಾರತೀಯ ತಾರೆ: ಕಮರಿದ ಕಮಲ್​ಪ್ರೀತ್ ಕನಸು

Kamalpreet Kaur: ಫೈನಲ್​ನಲ್ಲಿ ಎಡವಿದ ಭಾರತೀಯ ತಾರೆ: ಕಮರಿದ ಕಮಲ್​ಪ್ರೀತ್ ಕನಸು
Kamalpreet Kaur

Tokyo Olympics 2020: ಅರ್ಹತಾ ಸುತ್ತಿನಲ್ಲಿ ಕಳೆದ ಬಾರಿಯ ಚಿನ್ನದ ಪದಕ ವಿಜೇತೆ ಕ್ರೊವೇಷ್ಯಾದ ಸಾಂಡ್ರಾ ಪೆರ್ಕೋವಿಕ್‌ (63.75 ಮೀ) ಹಾಗೂ ವಿಶ್ವ ಚಾಂಪಿಯನ್‌ ಕ್ಯೂಬಾದ ಯೈಮ್ ಪೆರೇಜ್ (63.18) ಅವರನ್ನು ಕಮಲ್​ಪ್ರೀತ್ ಕೌರ್ ಹಿಂದಿಕ್ಕಿ ವಿಶ್ವದ ಗಮನ ಸೆಳೆದಿದ್ದರು.

TV9kannada Web Team

| Edited By: Zahir PY

Aug 02, 2021 | 6:54 PM

ಟೋಕಿಯೋ ಒಲಿಂಪಿಕ್ಸ್​ನ ಮಹಿಳೆಯರ ಡಿಸ್ಕಸ್​ ಥ್ರೋನಲ್ಲಿ ಭಾರತದ ಮತ್ತೊಂದು ಪದಕದ ಕನಸು ಕಮರಿದೆ.  ಡಿಸ್ಕಸ್ ಥ್ರೋ ವಿಭಾಗದಲ್ಲಿ ಭಾರತಕ್ಕಾಗಿ ಪದಕ ಗೆದ್ದು ಕೊಡುವ ವಿಶ್ವಾಸದಲ್ಲಿದ್ದ ಕಮಲ್‌ಪ್ರೀತ್‌ ಕೌರ್‌ (Kamalpreet Kaur)  ಅಂತಿಮವಾಗಿ 6ನೇ ಸ್ಥಾನ ಪಡೆಯುವ ಮೂಲಕ ಪದಕದ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ.

ಶನಿವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿಅದ್ಭುತವಾಗಿ ಡಿಸ್ಕಸ್‌ ಎಸೆದಿದ್ದ ಕಮಲ್​ಪ್ರೀತ್‌ ಕೌರ್‌ ‘ಬಿ’ ಗ್ರೂಪ್​ನಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದರು.ತಮ್ಮ ಅಂತಿಮ ಪ್ರಯತ್ನದಲ್ಲಿ ಬರೋಬ್ಬರಿ 64 ಮೀಟರ್‌ ದೂರ ಡಿಸ್ಕಸ್‌ ಎಸೆಯುವ ಮೂಲಕ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದರು. ಆದರೆ ಫೈನಲ್​ನಲ್ಲಿ ಈ ಹಿಂದಿನ ಜಾದೂ ತೋರಿಸುವಲ್ಲಿ ಕಮಲ್​ಪ್ರೀತ್ ಯಶಸ್ವಿಯಾಗಿಲ್ಲ.

ಮೊದಲ ಸುತ್ತಿನಲ್ಲಿ 7ನೇ ಸ್ಥಾನ ಪಡೆದಿದ್ದರು ಕಮಲ್​ಪ್ರೀತ್, 2ನೇ ಸುತ್ತಿನಲ್ಲಿ 63.70 ಮೀಟರ್ ಎಸೆಯುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಈ ವಿಭಾಗದಲ್ಲಿ ಅಮೆರಿಕಾದ ವ್ಯಾಲೆರಿ ಆಲ್ಮನ್ (68.98 ಮೀಟರ್) ಅವರು ಮೊದಲನೇ ಸ್ಥಾನ ಅಲಂಕರಿಸುವ ಮೂಲಕ ಚಿನ್ನದ ಪದಕವನ್ನು ಪಡೆದಿದ್ದಾರೆ. ಈ ವಿಭಾಗದಲ್ಲಿ ಒಟ್ಟು 12 ಸ್ಪರ್ಧಿಗಳು ಫೈನಲ್ ಸುತ್ತು ಪ್ರವೇಶಿಸಿದ್ದರು. ಅದರಲ್ಲಿ ಮೊದಲ ಸುತ್ತಿನಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಅಂತಿಮ 8 ಫೈನಲಿಸ್ಟ್​ ಪಟ್ಟಿಗೆ ಕಮಲ್​ಪ್ರೀತ್ ಅವಕಾಶ ಪಡೆದುಕೊಂಡಿದ್ದರು.

ಅರ್ಹತಾ ಸುತ್ತಿನಲ್ಲಿ ಕಳೆದ ಬಾರಿಯ ಚಿನ್ನದ ಪದಕ ವಿಜೇತೆ ಕ್ರೊವೇಷ್ಯಾದ ಸಾಂಡ್ರಾ ಪೆರ್ಕೋವಿಕ್‌ (63.75 ಮೀ) ಹಾಗೂ ವಿಶ್ವ ಚಾಂಪಿಯನ್‌ ಕ್ಯೂಬಾದ ಯೈಮ್ ಪೆರೇಜ್ (63.18) ಅವರನ್ನು ಕಮಲ್​ಪ್ರೀತ್ ಕೌರ್ ಹಿಂದಿಕ್ಕಿ ವಿಶ್ವದ ಗಮನ ಸೆಳೆದಿದ್ದರು. ಆದರೆ ಫೈನಲ್​ ರೌಂಡ್​ನಲ್ಲಿ ಭಾರತದ ಡಿಸ್ಕಸ್ ಥ್ರೋಪಟುವಿನಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. 6 ಬಾರಿಯ ಅವಕಾಶದಲ್ಲಿ 63.70 ಮೀಟರ್ ದೂರ ಎಸೆಯಲಷ್ಟೇ ಶಕ್ತರಾಗಿದ್ದರು. ಇದರೊಂದಿಗೆ ಡಿಸ್ಕಸ್ ಥ್ರೋನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದು ಕೊಡಿವ ಕಮಲ್​ಪ್ರೀತ್ ಕೌರ್ ಅವರ ಕನಸು ಭಗ್ನಗೊಂಡಿದೆ. ಸದ್ಯ 1 ಬೆಳ್ಳಿ ಹಾಗೂ ಒಂದು ಕಂಚಿನ ಪದಕದೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 62ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Virat Kohli: ಇಂಗ್ಲೆಂಡ್ ವಿರುದ್ದ ಸಿಡಿಸಿದ್ರೆ ಈ 5 ದಾಖಲೆಗಳು ಕೊಹ್ಲಿ ಪಾಲಾಗುವುದು ಪಕ್ಕಾ

ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ

ಇದನ್ನೂ ಓದಿ: PV Sindhu: ಒಲಿಂಪಿಕ್ಸ್​ನಲ್ಲಿ ಈ ಸಾಧನೆ ಮಾಡಿದ್ದು ಇವರಿಬ್ಬರೇ..!

(Kamalpreet Kaur finishes 6th in discus throw final)

Follow us on

Most Read Stories

Click on your DTH Provider to Add TV9 Kannada