Tokyo Olympics Schedule: ಟೊಕಿಯೋ ಒಲಂಪಿಕ್ಸ್ 11ನೇ ದಿನದ ಪೂರ್ಣ ವೇಳಾಪಟ್ಟಿ
Tokyo Olympics Day 11 India Full Schedule: ಇನ್ನು ಸೋಮವಾರ ನಡೆಯಲಿರುವ ಮಹಿಳಾ ಡಿಸ್ಕಸ್ ಥ್ರೋನಲ್ಲಿ ಭಾರತೀಯ ಕ್ರೀಡಾಪಟು ಕಮ್ಪ್ರೀತ್ ಕೌರ್ ಕೂಡ ಕಣಕ್ಕಿಳಿಯುತ್ತಿರುವುದು ವಿಶೇಷ. ಈ ಹಿಂದೆ 64 ಮೀಟರ್ ಎಸೆತದ ಮೂಲಕ ಕಮಲ್ಪ್ರೀತ್ ಕೌರ್ ಎಲ್ಲರೂ ಬೆರಗುಗೊಳಿಸುವಂತೆ ಮಾಡಿದರು. ಇಂದು ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 11ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 10 ದಿನಗಳಲ್ಲಿ 28 ಚಿನ್ನ, 16 ಬೆಳ್ಳಿ ಮತ್ತು 14 ಕಂಚು ಗೆದ್ದಿರುವ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆಯೇ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದಿರುವ ಭಾರತ ಈ ಪಟ್ಟಿಯಲ್ಲಿ 61ನೇ ಸ್ಥಾನ ಅಲಂಕರಿಸಿದೆ. ಇದಾಗ್ಯೂ 11ನೇ ದಿನ ಮತ್ತಷ್ಟು ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳಲ್ಲಿ ಗೆದ್ದು ಪದಕ ಪಟ್ಟಿಯಲ್ಲಿರುವ 2ನೇ ಸ್ಥಾನ ಅಲಂಕರಿಸಿರುವ ಅಮೆರಿಕಾ (ಒಟ್ಟು 60 ಪದಕ) ಹಾಗೂ ಮೂರನೇ ಸ್ಥಾನದಲ್ಲಿರುವ ಜಪಾನ್ ( ಒಟ್ಟು 31 ಪದಕ) ಮತ್ತಷ್ಟು ಮೇಲೆರುವ ವಿಶ್ವಾಸದಲ್ಲಿದೆ.
ಇನ್ನು ಸೋಮವಾರ ನಡೆಯಲಿರುವ ಮಹಿಳಾ ಡಿಸ್ಕಸ್ ಥ್ರೋನಲ್ಲಿ ಭಾರತೀಯ ಕ್ರೀಡಾಪಟು ಕಮ್ಪ್ರೀತ್ ಕೌರ್ ಕೂಡ ಕಣಕ್ಕಿಳಿಯುತ್ತಿರುವುದು ವಿಶೇಷ. ಈ ಹಿಂದೆ 64 ಮೀಟರ್ ಎಸೆತದ ಮೂಲಕ ಕಮಲ್ಪ್ರೀತ್ ಕೌರ್ ಎಲ್ಲರೂ ಬೆರಗುಗೊಳಿಸುವಂತೆ ಮಾಡಿದರು. ಇಂದು ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ. ಏತನ್ಮಧ್ಯೆ ಶೂಟರ್ಗಳಾದ ಐಶ್ವರಿ ಪ್ರತಾಪ್ ಸಿಂಹ ತೋಮರ್ ಮತ್ತು ಸಂಜೀವ್ ರಜಪೂತ್ 11ನೇ ದಿನವೂ ಸ್ಪರ್ಧೆಗೆ ಇಳಿಯಲಿದ್ದಾರೆ.
ಟೊಕಿಯೋ ಒಲಂಪಿಕ್ಸ್ 11ನೇ ದಿನದ ವೇಳಾಪಟ್ಟಿ: 7:24 AM: ಅಥ್ಲೆಟಿಕ್ಸ್ ವುಮೆನ್ 200ಮೀ. ರಾಂಡ್ 1 – ದ್ಯುತಿ ಚಂದ್
08:00 AM: ಶೂಟಿಂಗ್ನಲ್ಲಿ ಪುರುಷರ 50 ಮೀಟರ್ ರೈಪಲ್ – ಸಂಜೀವ್ ರಜಪೂತ್ ಮತ್ತು ಐಶ್ವರಿ ಪ್ರತಾಪ್ ಸಿಂಗ್
08:30 AM: ಮಹಿಳಾ ಹಾಕಿ ಕ್ವಾಟರ್ಫೈನಲ್ – ಭಾರತ vs ಆಸ್ಟ್ರೇಲಿಯಾ
1:20 PM: ಶೂಟಿಂಗ್ 50 ಮೀ ರೈಫಲ್ 3 ಸ್ಥಾನಗಳು
01:30 PM: ಇಕ್ವೆಸ್ಟ್ರಿಯನ್ ಇವೆಂಟಿಂಗ್ ವೈಯಕ್ತಿಕ ಜಂಪಿಂಗ್ ಫೈನಲ್ – ಫವಾದ್ ಮಿರ್ಜಾ
03:55 PM: ಅಥ್ಲೆಟಿಕ್ಸ್ ಮಹಿಳಾ 200 ಮೀ ಸೆಮಿಫೈನಲ್ 1 -ದ್ಯುತಿ ಚಂದ್
04:30: ಮಹಿಳಾ ಡಿಸ್ಕಸ್ ಥ್ರೋ ಫೈನಲ್ – ಕಮಲ್ಪ್ರೀತ್ ಕೌರ್
05:15 PM: ಕುದುರೆ ಸವಾರಿ ವೈಯಕ್ತಿಕ ಜಂಪಿಂಗ್ ಫೈನಲ್ – ಫವಾದ್ ಮಿರ್ಜಾ
ಇದನ್ನೂ ಓದಿ:
ಟೊಕಿಯೋ ಒಲಂಪಿಕ್ಸ್ 2020: ರಾಷ್ಟ್ರೀಯ ಟೇಬಲ್ ಟೆನಿಸ್ ಕೋಚ್ನಿಂದ ಸಲಹೆ ಪಡೆಯಲು ನಿರಾಕರಿಸಿದ ಮನಿಕಾ ಬಾತ್ರಾ
Published On - 3:21 pm, Mon, 2 August 21