ಟೊಕಿಯೋ ಒಲಂಪಿಕ್ಸ್ 2020: ರಾಷ್ಟ್ರೀಯ ಟೇಬಲ್ ಟೆನಿಸ್​ ಕೋಚ್​ನಿಂದ ಸಲಹೆ ಪಡೆಯಲು ನಿರಾಕರಿಸಿದ ಮನಿಕಾ ಬಾತ್ರಾ

ಪರಾಂಜಪೆ ಟೊಕಿಯೋನಲ್ಲಿ ಒಂದು ಹೋಟೆಲ್​ನಲ್ಲಿ ತಂಗಿದ್ದು ಮನಿಕಾ ಅವರ ತರಬೇತಿ ಸೆಷನ್​ಗೆ ಹಾಜರಾಗಲು ಮಾತ್ರ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಒಲಂಪಿಕ್ಸ್​ನಲ್ಲಿ ತಮ್ಮ ಪಂದ್ಯಗಳು ನಡೆಯುವಾಗ ಪರಾಂಜಪೆ ತಮ್ಮ ಜೊತೆಯಿರಲು ಸಾಧ್ಯವಾಗುವ ಹಾಗೆ ಅವರ ಮಾನ್ಯತೆಯನ್ನು ಅಪಗ್ರೇಡ್ ಮಾಡಲು ಮಾಡಲು ಅನುಮತಿ ಕೋರಿದ್ದರು.

ಟೊಕಿಯೋ ಒಲಂಪಿಕ್ಸ್ 2020: ರಾಷ್ಟ್ರೀಯ ಟೇಬಲ್ ಟೆನಿಸ್​ ಕೋಚ್​ನಿಂದ ಸಲಹೆ ಪಡೆಯಲು ನಿರಾಕರಿಸಿದ ಮನಿಕಾ ಬಾತ್ರಾ
ಮನಿಕಾ ಬಾತ್ರಾ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jul 24, 2021 | 7:55 PM

ಭಾರತದ ಅಗ್ರಮಾನ್ಯ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಮತ್ತು ಅವರ ವೈಯಕ್ತಿಕ ಕೋಚ್ ಸನ್ಮಯ್ ಪರಾಂಜಪೆ ಟೊಕಿಯೋಗೆ ತೆರಳುವ ಮುನ್ನ ಸೃಷ್ಟಿಸಿದ್ದ ವಿವಾದ ಅಲ್ಲಿಗೆ ತಲುಪಿದ ನಂತರವೂ ಮುಂದುವರಿದಿದೆ. ಶನಿವಾರದಂದು ತಮ್ಮ ಮೊದಲ ಸುತ್ತಿನ ಪಂದ್ಯವಾಡಿದ ಮನಿಕಾ ಆಟ ಜಾರಿಯಲ್ಲಿದ್ದಾಗ ರಾಷ್ಟ್ರೀಯ ಟೇಬಲ್ ಟೆನಿಸ್ ಕೋಚ್ ಸೌಮ್ಯದೀಪ್ ರಾಯ್ ಅವರಿಂದ ಸಲಹೆ ಪಡೆಯಲು ನಿರಾಕರಿಸಿದರು. ವಿಶ್ವದ 62ನೇ ಕ್ರಮಾಂಕದ ಆಟಗಾರ್ತಿ ಮನಿಕಾ ಬ್ರಿಟನ್ನಿನ ಟಿನ್-ಟಿನ್ ಹೊ ಅವರನ್ನು 4-0 ಗೇಮ್​ಗಳ ಅಂತದಿಂದ ಸುಲಭವಾಗಿ ಸೋಲಿಸಿದರಾದರೂ ಅವರು ತೋರಿದ ವರ್ತನೆ ಭಾರತೀಯರಿಗೆ ಮುಜುಗರ ಹುಟ್ಟಿಸುವಂತಿತ್ತು. ಪರಾಂಜಪೆಗೆ ಒಲಂಪಿಕ್ಸ್ ಗ್ರಾಮದೊಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ ಮತ್ತು ಮನಿಕಾ ಆಡುವಾಗ ಖಾಲಿಯಿದ್ದ ಕೋಚ್ ಕುರ್ಚಿ ಒಳ್ಳೆಯ ಸಂದೇಶವನ್ನೇನೂ ರವಾನಿಸಿಲಿಲ್ಲ. ಅಸಲಿಗೆ, ಪರಾಂಜಪೆಯನ್ನು ಮನಿಕಾರೊಂದಿಗೆ ಟೊಕಿಯೋಗೆ ಕಳಿಸಿದ್ದೇ ಒಂದು ವಿವಾದದ ನಂತರ.

ಪರಾಂಜಪೆ ಟೊಕಿಯೋನಲ್ಲಿ ಒಂದು ಹೋಟೆಲ್​ನಲ್ಲಿ ತಂಗಿದ್ದು ಮನಿಕಾ ಅವರ ತರಬೇತಿ ಸೆಷನ್​ಗೆ ಹಾಜರಾಗಲು ಮಾತ್ರ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಒಲಂಪಿಕ್ಸ್​ನಲ್ಲಿ ತಮ್ಮ ಪಂದ್ಯಗಳು ನಡೆಯುವಾಗ ಪರಾಂಜಪೆ ತಮ್ಮ ಜೊತೆಯಿರಲು ಸಾಧ್ಯವಾಗುವ ಹಾಗೆ ಅವರ ಮಾನ್ಯತೆಯನ್ನು ಅಪಗ್ರೇಡ್ ಮಾಡಲು ಮಾಡಲು ಅನುಮತಿ ಕೋರಿದ್ದರು. ಆದರೆ, ಟೀಮ್ ಲೀಡರ್ ಮತ್ತು ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ ಸಲಹೆಗಾರರೂ ಆಗಿರುವ ಎಮ್​ ಪಿ ಸಿಂಗ್ ಮನಿಕಾ ಅವರ ಮನವಿಯನ್ನು ಅಯೋಜಕರು ತಿರಸ್ಕರಿಸಿದರೆಂದು ಹೇಳಿದರು.

‘ಅವರ ವೈಯಕ್ತಿಕ ಕೋಚ್​ಗೆ ಫೀಲ್ಡ್​ನಲ್ಲಿರಲು ಅನುಮತಿ ನಿರಾಕರಿಸಿದ ನಂತರ ರಾಷ್ಟ್ರೀಯ ಕೋಚ್​ನಿಂದ ಸಲಹೆ ಪಡೆಯಲು ಅವರು ನಿರಾಕರಿಸಿದರು. ನಾನು ಮಧ್ಯಪ್ರವೇಶಿಸಿ ವಿಷಯವನ್ನು ಬಗೆಹರಿಸುವ ಪ್ರಯತ್ನ ಮಾಡಿದೆನಾದರೂ ಆಕೆ ನನ್ನ ಮಾತು ಸಹ ಕೇಳಲಿಲ್ಲ,’ ಎಂದು ಸಿಂಗ್ ಪಿಟಿಐಗೆ ತಿಳಿಸಿದರು. ಆದರೆ, ಮನಿಕಾ ಅವರು ಮಿಕ್ಸೆಡ್ ಡಬಲ್ಸ್​ನಲ್ಲಿ ಈವೆಂಟ್​ನಲ್ಲಿ ಶರತ್ ಕಮಾಲ್ ಅವರ ಜೋಡಿಯಾಗಿ ಆಡುವಾಗ ರಾಯ್ ಕೋರ್ಟ್​ ಪಕ್ಕ ಕೂತಿದ್ದರು.

ರಾಯ್ ಅವರು, 2006 ರ ಕಾಮನ್​ವೆಲ್ತ್ ಕ್ರೀಡೆಯಲ್ಲಿ ಸ್ವರ್ಣ ಪದಕ ಗೆದ್ದ ಭಾರತೀಯ ಪುರುಷ ತಂಡದ ಸದಸ್ಯರಾಗಿದ್ದರು. ಭಾರತದ ಟೇಬಲ್ ಟೆನಿಸ್ ಗ್ರೇಟ್​ ಎನಿಸಿಕೊಂಡಿರುವ ಶರತ್​ ಅವರೊಂದಿಗೆ ರಾಯ್ ಬಹಳ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಮನಿಕಾ ಅವರಿಗೆ ಪಿಟಿಐ ವರದಿಗಾರರು ಕರೆ ಮಾಡಿದರಾದರೂ ಅವರು ಉತ್ತರಿಸಲಿಲ್ಲ.

ಕೊವಿಡ್-19 ಪಿಡುಗು ಸೃಷ್ಟಿಸಿರುವ ಹಾಹಾಕಾರದ ನಡುವೆ ಈ ಬಾರಿಯ ಒಲಂಪಿಕ್ಸ್ ಕ್ರೀಡೆಗಳು ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಸಪೋರ್ಟ್​ಗೆ ಅನುಮತಿ ನೀಡಿಲ್ಲ. ಪುಣೆಯಲ್ಲಿ ವಾಸ ಮಾಡುವ ಪರಾಂಜಪೆಗೆ ಟೊಕಿಯೋ ಹೋಗಲು ಅನುಮತಿ ಸಿಕ್ಕಿದೆ ಆದರೆ ಜಿ ಸಾಥಿಯನ್​ ಅವರ ಕೋಚ್​ ಮತ್ತು ಮಾಜಿ ಒಲಂಪಿಯನ್ ಎಸ್ ರಾಮನ್ ಅವರಿಗೆ ಅನುಮತಿ ನಿರಾಕರಿಸಲಾಗಿದೆ.

ಇದನ್ನೂ ಓದಿ: Tokyo Olympics: ಒಲಂಪಿಕ್ಸ್​ನಲ್ಲಿ ಪದಕ ಗೆದ್ದ ಸ್ಪರ್ಧಿಗಳ ಕೋಚ್​ಗೂ ಸಿಗಲಿದೆ ಬಹುಮಾನ; ಐಒಎಯಿಂದ ಮಹತ್ವದ ಘೋಷಣೆ

Published On - 7:17 pm, Sat, 24 July 21