Tokyo Olympics 2020: ಅತ್ಯುತ್ತಮ ಸ್ಪರ್ಶದಲ್ಲಿರುವ ವಿನೇಶ್ ಫೋಗಟ್ರಿಂದ ಕುಸ್ತಿಯಲ್ಲಿ ಪದಕ ಖಚಿತ ಅಂತ ಎಲ್ಲರೂ ಹೇಳುತ್ತಿದ್ದಾರೆ!
ರಿಯೋ ಒಲಂಪಿಕ್ 2016 ನಲ್ಲಿ ಪದಕ ಗೆಲ್ಲಲು ವಿಫಲರಾದ ವಿನೇಶ್ ಅಲ್ಲಿ ಎದುರಾದ ನಿರಾಶೆಯನ್ನು 2018 ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸರಿಪಡಿಸಿಕೊಂಡರು.
ಭಾರತಕ್ಕೆ ಪದಕ ಗೆದ್ದುಕೊಡುವರೆಂದು ನಿರೀಕ್ಷಿಸಲಾಗಿರುವ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಟೊಕಿಯೋಗೆ ಹೊರಡುವ ಮೊದಲು ಅತ್ಯುತ್ತಮ ಫಾರ್ಮ್ನಲ್ಲಿದ್ದಿದ್ದು ನಿಜ. ಬೇರೆ ಯಾವುದೇ ನೆಚ್ಚಿನ ಕ್ರೀಡಾಪಟುವಿನಿಂದ ಪದಕ ಗೆಲ್ಲವುದು ಸಾಧ್ಯವಾಗದೆ ಹೋದರೂ ವಿನೇಶ್ ಅವರಿಂದ ತಪ್ಪಲಾರದು ಅಂತ ಭಾರತದ ಕ್ರೀಡಾವಲಯಗಳಲ್ಲಿ ಚರ್ಚೆಯಾಗುತ್ತಿದೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆದ್ದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರ ಸೋದರಿ ಸಂಬಂಧಿ ಆಗಿರುವ ವಿನೇಶ್ ಅವರ ಛಾಯೆಯಿಂದ ಹೊರಬಂದು ತಮ್ಮ ಛಾಪು ಮೂಡಿಸಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನದ ಪದಕ ಗೆದ್ದು ಭಾರರದ ಏಕೈಕ ಮಹಿಳಾ ಕುಸ್ತಿಪಟು ಎಂಬ ಹಿರಿಮೆಯ ಹರಿಯಾಣದ 26-ವರ್ಷ ವಯಸ್ಸಿನ ವಿನೇಶ್ ಆವರನ್ನು ಅರ್ಜುನ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯಿಂದ ಸನ್ಮಾನಿಸಲಾಗಿದೆ.
ರಿಯೋ ಒಲಂಪಿಕ್ 2016 ನಲ್ಲಿ ಪದಕ ಗೆಲ್ಲಲು ವಿಫಲರಾದ ವಿನೇಶ್ ಅಲ್ಲಿ ಎದುರಾದ ನಿರಾಶೆಯನ್ನು 2018 ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸರಿಪಡಿಸಿಕೊಂಡರು.
53-ಕೆಜಿ ವಿಭಾಗದಲ್ಲಿ ಭಾಗವಹಿಸಲಾರಂಭಿಸಿದ ನಂತರ ಆಕೆ 2019 ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದು ಅದೇ ವರ್ಷ ಒಲಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದರು.
ನಿಮಗೂ ಗೊತ್ತಿರಬಹುದು, 2021ರಲ್ಲಿ ವಿನೇಶ್ ಮೂರು ಸುವರ್ಣ ಪದಕಗಳನ್ನು ಗೆದ್ದರು. ಮಾರ್ಚ್ನಲ್ಲಿ ಮಟ್ಟೋ ಪೆಲ್ಲಿಕೋನ್ನಲ್ಲಿ ವಿನೇಶ್ ಚಿನ್ನ ಗೆದ್ದ ಒಂದು ತಿಂಗಳ ನಂತರ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಬಂಗಾರದ ಪದಕ ಗೆದ್ದರು. ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದ ಅವರು ಕಳೆದ ತಿಂಗಳು ವಾರ್ಸಾನಲ್ಲಿ ನಡೆದ ಪೋಲೆಂಡ್ ಓಪನ್ನಲ್ಲೂ ಚಿನ್ನದ ಪದಕ ಗೆದ್ದರು.
2016ರಲ್ಲಿ ಅರ್ಜುನ ಮತ್ತು 2020ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ವಿನೇಶ್ ಟೋಕಿಯೋ ಒಲಂಪಿಕ್ಸ್ನಲ್ಲಿ ಚಾಂಪಿಯನ್ ಪ್ರದರ್ಶನ ನೀಡಿ ಭಾರತಕ್ಕೆ ಪದಕ ಗೆದ್ದೇ ಗೆಲ್ಲುತ್ತಾರೆಂದು ಅವರ ಕೋಚ್ ಸಹ ಹೇಳಿದ್ದಾರೆ. 2016 ರ ರಿಯೋ ಒಲಂಪಿಕ್ಸ್ನಲ್ಲಾದ ನಿರಾಶೆಯನ್ನು ಹಿಮ್ಮೆಟ್ಟಿಸಬೇಕಾದರೆ ವಿನೇಶ್ ಪದಕ ಗೆಲ್ಲಲೇಬೇಕು ಎಂದು ಭಾರತದ ಕ್ರೀಡಾಭಿಮಾನಿ ಅಪೇಕ್ಷಿಸುತ್ತಿದ್ದಾನೆ.