Tokyo Olympics 2020: ‘ಚಕ್ ದೇ ಇಂಡಿಯಾ’ ರೀಲ್ ಕೋಚ್ ಮತ್ತು ರೀಯಲ್ ಕೋಚ್ ನಡುವಿನ ಟ್ವೀಟ್ ಸಂಭಾಷಣೆ ಮನಸ್ಸಿಗೆ ಮುದ ನೀಡುತ್ತದೆ!

ಭಾರತದ ಡ್ರ್ಯಾಗ್ ಪ್ಲಿಕ್ಕರ್ ಗುರ್ಜಿತ್ ಕೌರ್ ಅವರು ಪಂದ್ಯದ ಎರಡನೇ ಕ್ವಾರ್ಟರ್ನಲ್ಲಿ ಪೆನಾಲ್ಟಿ ಕಾರ್ನರೊಂದನ್ನು ಗೋಲಾಗಿ ಪರಿವರ್ತಿಸುವ ಮೂಲಕ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು.

Tokyo Olympics 2020: ‘ಚಕ್ ದೇ ಇಂಡಿಯಾ’ ರೀಲ್ ಕೋಚ್ ಮತ್ತು ರೀಯಲ್ ಕೋಚ್ ನಡುವಿನ ಟ್ವೀಟ್ ಸಂಭಾಷಣೆ ಮನಸ್ಸಿಗೆ ಮುದ ನೀಡುತ್ತದೆ!
ಇತಿಹಾಸ ಸೃಷ್ಟಿಸಿದ ಭಾರತದ ಮಹಿಳಾ ಹಾಕಿ ತಂಡ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 02, 2021 | 4:35 PM

ಸೋಮವಾರದಂದು ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ಐತಿಹಾಸಿಕ ಗೆಲವು ಸಾಧಿಸಿ ಟೊಕಿಯೋ ಒಲಂಪಿಕ್ಸ್ ಮಹಿಳೆಯರ ಹಾಕಿ ವಿಭಾಗದಲ್ಲಿ ಸೆಮಿಫೈನಲ್ ಹಂತ ತಲುಪಿರುವ ಭಾರತದ ಮಹಿಳಾ ಹಾಕಿ ತಂಡದ ಕೋಚ್ ಜೋರ್ಡ್ ಮಾರ್ಜಿನ್ ಅವರ ಟ್ವೀಟ್ಗೆ ಬಾಲವುಡ್ ನಟ ಶಾರೂಖ್ ಖಾನ್ ಹೃದಯಸ್ಪರ್ಶಿ ಉತ್ತರ ನೀಡಿದ್ದಾರೆ. ರಾಣಿ ರಾಂಪಾಲ್ ನೇತೃತ್ವದ ಭಾರತದ ತಂಡ ಇಂದು ಆಸ್ಟ್ರೇಲಿಯನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿಸಿ ಒಲಂಪಿಕ್ಸ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತು. ಭಾರತದ ಡ್ರ್ಯಾಗ್ ಪ್ಲಿಕ್ಕರ್ ಗುರ್ಜಿತ್ ಕೌರ್ ಅವರು ಪಂದ್ಯದ ಎರಡನೇ ಕ್ವಾರ್ಟರ್ನಲ್ಲಿ ಪೆನಾಲ್ಟಿ ಕಾರ್ನರೊಂದನ್ನು ಗೋಲಾಗಿ ಪರಿವರ್ತಿಸುವ ಮೂಲಕ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ವಿಶ್ವದ ಎರಡನೇ ಕ್ರಮಾಂಕದ ತಂಡವಾಗಿರುವ ಆಸ್ಟ್ರೇಲಿಯ ಈ ಪಂದ್ಯದಲ್ಲಿ ಏಳು ಪೆನಾಲ್ಟಿ ಕಾರ್ನರ್ ಗಳಿಸಿದರೂ ಒಂದನ್ನೂ ಗೋಲಾಗಿ ಪರಿವರ್ತಿಸಲಿಲ್ಲ. ಭಾರತ ಅಂತಿಮವಾಗಿ 1-0 ಗೋಲು ಜಯ ಸಾಧಿಸಿ ಇತಿಹಾಸ ನಿರ್ಮಿಸಿತು.

ಟೀಮ್ ಬಸ್ನಲ್ಲಿ ಮಹಿಳಾ ತಂಡ ಮತ್ತು ಸಪೋರ್ಟ್ ಸ್ಟಾಫ್​ನ ಸದಸ್ಯರು ಭಾರತದ ಗೆಲುವನ್ನು ಸಂಭ್ರಮಿಸುತ್ತಿರುವ ಪೋಟೋವನ್ನು ಕೋಚ್ ಜೋರ್ಡ್ ಮಾರ್ಜಿನ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಪೋಸ್ಟ್ನಲ್ಲಿ ಅವರು, ‘ಸಾರಿ ಫ್ಯಾಮಿಲಿ ನಾನು ಮತ್ತೇ ತಡವಾಗಿ ಬರುತ್ತಿರುವೆ,’ ಎಂದು ಬರೆದಿದ್ದಾರೆ. ಭಾರತೀಯ ಮಹಿಳಾ ಹಾಕಿ ಮೇಲೆ ಚಿತ್ರಿತವಾಗಿದ್ದ 2007 ರ ಬ್ಲಾಕ್​ಬ್ಲಸ್ಟರ್ ‘ಚಕ್ ದೇ ಇಂಡಿಯಾ’ ಚಿತ್ರದಲ್ಲಿ, ಕೋಚ್ ಕಬೀರ್ ಖಾನ್ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣರಾಗಿದ್ದ ಶಾರುಖ್ ಖಾನ್ ಅವರು ಮಾರ್ಜಿನ್ ಅವರಿಗೆ ಭಾರತದತ ಕೋಟ್ಯಾಂತರ ಅಭಿಮಾನಿಗಳಿಗೆ ಬಂಗಾರದ ಪದಕ ಗೆದ್ದು ತರುವಂತೆ ಮನವಿ ಮಾಡಿದ್ದಾರೆ.

‘ಹಾಂ ಹಾಂ ನೋ ಪ್ರಾಬ್ಲಮ್. ಬರುವಾಗ ಒಂದು ಬಿಲಿಯನ್ ಕುಟುಂಬದ ಸದಸ್ಯರಿಗೆ ಚಿನ್ನವನ್ನು ಗೆದ್ದು ತನ್ನಿ.. ಈ ಬಾರಿಯ ಧನ್ತೇರಸ್ ಸಹ ನವೆಂಬರ್ ಎರಡರಂದು ಬರಲಿದೆ. ಯಿಂದ: ಮಾಜಿ ಕೋಚ್ ಕಬೀರ್ ಖಾನ್,’ ಎಂದು ಶಾರುಖ್ ಬರೆದಿದ್ದಾರೆ.

ಜೋರ್ಡ್ ಮಾರ್ಜಿನ್ ಬಾಲಿವುಡ್ ನಟನ ಟ್ವೀಟ್ಗೆ ಅದ್ಭುತವಾಗಿ ಉತ್ತರಿಸಿದ್ದಾರೆ.

‘ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಥ್ಯಾಂಕ್ಯೂ. ಚಿನ್ನ ಗೆಲ್ಲಲು ನಾವು ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ,’ ಯಿಂದ: ದ ರೀಯಲ್ ಕೋಚ್,’ ಎಂದು ಜೋರ್ಡ್ ಮಾರ್ಜಿನ್ ಟ್ವೀಟ್ ಮಾಡಿದ್ದಾರೆ.

ಸೆಮಿಫೈನಲ್ನಲ್ಲಿ ಭಾರತ ಅರ್ಜೆಂಟೀನಾವನ್ನು ಎದುರಿಸಲಿದೆ. ಒಲಂಪಿಕ್ಸ್ ಇತಿಹಾಸದಲ್ಲೇ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ ಪಂದ್ಯವೊಂದನ್ನು ಆಡುತ್ತಿದೆ. ಈ ಪಂದ್ಯವನ್ನು ಸೋತರೂ, ಕಂಚಿನ ಪದಕ್ಕಾಗಿ ಭಾರತ ಸೆಣಸಲಿದೆ.

ಇದನ್ನೂ ಓದಿ: Tokyo Olympics 2020: ಒಲಿಂಪಿಕ್ಸ್​ನಲ್ಲಿ ದಾಖಲೆ ಬರೆದ ಭಾರತದ ಮಹಿಳಾ ಹಾಕಿ ತಂಡ; ಸೆಮಿಫೈನಲ್​ಗೆ ಲಗ್ಗೆ 

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ