Tokyo Olympics 2020: ಟೋಕಿಯೋ ಒಲಿಂಪಿಕ್ಸ್: ನಾಳೆ 4 ವಿಭಾಗಗಳಲ್ಲಿ ಭಾರತ ಸ್ಪರ್ಧೆ
Tokyo Olympics India's Schedule: ಟೋಕಿಯೋ ಒಲಿಂಪಿಕ್ಸ್‌ನ ಹಾಕಿ ಪಂದ್ಯಾವಳಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತ ಪುರುಷರ ಹಾಕಿ ತಂಡ ಮಂಗಳವಾರ ಸೆಮಿಫೈನಲ್ ಆಡಲಿದೆ
ಟೋಕಿಯೋ ಒಲಿಂಪಿಕ್ಸ್ (Tokyo Olympics 2020) ಕ್ರೀಡಾಕೂಟ ನಾಳೆ 12ನೇ ದಿನಕ್ಕೆ ಕಾಲಿಡಲಿದೆ. ಕಳೆದ 11 ದಿನದಲ್ಲಿ ಭಾರತದ ಪರ ವೇಟ್ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಹಾಗೂ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕಂಚು ಪದಕ ಗೆದ್ದಿದ್ದಾರೆ. ಈ 2 ಮೆಡಲ್ಗಳೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 62ನೇ ಸ್ಥಾನದಲ್ಲಿದೆ. ಈಗಾಗಲೇ ಬಹುತೇಕ ವಿಭಾಗದಲ್ಲಿ ಭಾರತೀಯ ಹೋರಾಟ ಅಂತ್ಯವಾಗಿದ್ದು, ಮಂಗಳವಾರ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು 4 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಹಾಗಿದ್ರೆ ಒಲಿಂಪಿಕ್ಸ್‌ನ 12ನೇ ದಿನದ ಭಾರತದ ವೇಳಾಪಟ್ಟಿ (Tokyo Olympics India’s Schedule) ನೋಡೋಣ.
ಶಾಟ್ ಪುಟ್(ಸಮಯ-ಬೆಳಿಗ್ಗೆ 3:45): ಪುರುಷರ ಶಾಟ್‌ಪುಟ್ ಎಸೆತದ ಅರ್ಹತಾ ಸುತ್ತು ಕೂಡ ಮಂಗಳವಾರ ನಡೆಯಲಿದ್ದು, ಈ ವಿಭಾಗದಲ್ಲಿ ತಜಿಂದರ್ ಪಾಲ್ ಸಿಂಗ್ ತೂರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಜಾವೆಲಿನ್ ಎಸೆತ ( ಬೆಳಿಗ್ಗೆ 5.50 ಕ್ಕೆ): ಅಥ್ಲೆಟಿಕ್ಸ್ ಮಹಿಳಾ ವಿಭಾಗದ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಗ್ರೂಪ್ ಎನಲ್ಲಿ ಭಾರತದ ಅನ್ನು ರಾಣಿ ಸ್ಪರ್ಧಿಸಲಿದ್ದಾರೆ.
ಪುರುಷರ ಹಾಕಿ ಸೆಮಿಫೈನಲ್ ಪಂದ್ಯ (ಬೆಳಿಗ್ಗೆ 7 ಗಂಟೆಗೆ): ಟೋಕಿಯೋ ಒಲಿಂಪಿಕ್ಸ್‌ನ ಹಾಕಿ ಪಂದ್ಯಾವಳಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತ ಪುರುಷರ ಹಾಕಿ ತಂಡ ಮಂಗಳವಾರ ಸೆಮಿಫೈನಲ್ ಆಡಲಿದೆ. ಓಯಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
ರೆಸ್ಲಿಂಗ್ ( ಸಮಯ- ಬೆಳಿಗ್ಗೆ 8:30) : 62 ಕೆಜಿ ವಿಭಾಗದ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿಯ 16ನೇ ಘಟ್ಟದ ಪಂದ್ಯಗಳು ನಡೆಯಲಿದೆ. ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಖು ವಿರುದ್ಧ ಭಾರತದ ಸೋನಮ್ ಮಲಿಕ್ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಸೋನಮ್ ಮಲಿಕ್ ಕ್ವಾರ್ಟರ್‌ಫೈನಲ್ ಪ್ರವೇಶಿಸಲಿದ್ದು, ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ಕೂಡ ಮಂಗಳವಾರವೇ ಇರಲಿದೆ.
ಇದನ್ನೂ ಓದಿ: Virat Kohli: ಇಂಗ್ಲೆಂಡ್ ವಿರುದ್ದ ಸಿಡಿಸಿದ್ರೆ ಈ 5 ದಾಖಲೆಗಳು ಕೊಹ್ಲಿ ಪಾಲಾಗುವುದು ಪಕ್ಕಾ
ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ
ಇದನ್ನೂ ಓದಿ: PV Sindhu: ಒಲಿಂಪಿಕ್ಸ್ನಲ್ಲಿ ಈ ಸಾಧನೆ ಮಾಡಿದ್ದು ಇವರಿಬ್ಬರೇ..!