Tokyo Olympics: ಕೊನೆಯ 15 ಸೆಕೆಂಡ್​ಗಳಲ್ಲಿ 2 ಅಂಕ ಬಿಟ್ಟುಕೊಟ್ಟು ಸೋತ ಭಾರತದ ವನಿತಾ ಕುಸ್ತಿಪಟು ಸೋನಮ್ ಮಲಿಕ್

ಟೊಕಿಯೊ ಒಲಂಪಿಕ್ಸ್​ನಲ್ಲಿ ವನಿತೆಯರ 62ಕೆಜಿ ಫ್ರೀ ಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಸೋನಮ್ ಮಲಿಕ್ ಸೋಲುಂಡಿದ್ದಾರೆ. ಸಮಾನವಾಗಿ 2-2 ಅಂಕ ಗಳಿಸಿದ್ದರೂ ಕುಸ್ತಿ ಸ್ಪರ್ಧೆಯ ನಿಯಮಾನುಸಾರ ಅವರಿಗೆ ಸೋಲಾಗಿದೆ.

Tokyo Olympics: ಕೊನೆಯ 15 ಸೆಕೆಂಡ್​ಗಳಲ್ಲಿ 2 ಅಂಕ ಬಿಟ್ಟುಕೊಟ್ಟು ಸೋತ ಭಾರತದ ವನಿತಾ ಕುಸ್ತಿಪಟು ಸೋನಮ್ ಮಲಿಕ್
ಭಾರತದ ಸೋನಮ್ ಮಲಿಕ್ ಸೆಣಸುತ್ತಿರುವುದು (ಚಿತ್ರ: Reuters)
Follow us
TV9 Web
| Updated By: shivaprasad.hs

Updated on:Aug 03, 2021 | 10:14 AM

 ಟೊಕಿಯೊ ಒಲಂಪಿಕ್ಸ್: 62 ಕೆಜಿ ವಿಭಾಗದ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿಯ 16ನೇ ಘಟ್ಟದ ಪಂದ್ಯದಲ್ಲಿ ಭಾರತದ ಸೋನಮ್ ಮಲಿಕ್ ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಖು ವಿರುದ್ಧ ವೀರೋಚಿತ ಸೋಲು ಕಂಡಿದ್ದಾರೆ. ಕೊನೆಯ ಹದಿನೈದು ಸೆಕೆಂಡ್​ಗಳವರೆಗೂ 2-0 ಇಂದ ಮುನ್ನಡೆ ಕಾಯ್ದುಕೊಂಡಿದ್ದ ಸೋನಮ್, ಆಗ ಖುರೆಲ್ಖು ಅವರಿಗೆ ಎರಡು ಅಂಕ ಬಿಟ್ಟುಕೊಟ್ಟರು. ಪಂದ್ಯ ಮುಗಿಯುವಾಗ ಈರ್ವರೂ 2-2ರಿಂದ ಸಮಬಲ ಹೊಂದಿದ್ದರು. ಇಂತಹ ಸಂದರ್ಭದಲ್ಲಿ ಕುಸ್ತಿಯಲ್ಲಿ ಪಾಲಿಸಲಾಗುವ, ಯಾರು ಒಂದೇ ಮೂವ್​ನಲ್ಲಿ ಹೆಚ್ಚು ಅಂಕ ಪಡೆದಿರುತ್ತಾರೆ- ಅವರೇ ಜಯಶಾಲಿ ಎಂಬ ನಿಯಮದ ಆಧಾರದಲ್ಲಿ ಎರಡು ಅಂಕಗಳನ್ನು ಒಟ್ಟಿಗೇ ಪಡೆದಿದ್ದ ಖುರೆಲ್ಖು ವಿಜಯಶಾಲಿಯಾದರು.

ಈ ಪಂದ್ಯದ ಮೂಲಕ ಟೊಕಿಯೊ ಒಲಂಪಿಕ್ಸ್​ನಲ್ಲಿ ಭಾರತದ ರೆಸ್ಲಿಂಗ್ ಪಯಣ ಆರಂಭವಾಗಿದೆ. ಆದರೆ, ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಹಿನ್ನೆಡೆಯಿಂದ ಕುಸ್ತಿ ಪಯಣ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಮಂಗೋಲಿಯಾದ ಖುರೆಲ್ಖು ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದು, ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ಕೂಡ ಇಂದೇ ನಡೆಯಲಿದೆ. ಸೋನಮ್ ಪಾಲಿಗೆ ಇರುವ ಕೊನೆಯ ಅವಕಾಶವೆಂದರೆ,ಖುರೆಲ್ಖು ಫೈನಲ್ ಪ್ರವೇಶಿಸಬೇಕು. ಆಗ ರೆಫಿಕೇಜ್​ನಲ್ಲಿ(repechage) ಸ್ಪರ್ಧಿಸಲು ಸೋನಮ್​ಗೆ ಅವಕಾಶ ದೊರೆಯಲಿದೆ.

Sonam

ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಕು ಮತ್ತು ಸೋನಮ್ ಮಲಿಕ್ ನಡುವಿನ ಸೆಣಸಾಟ

ರೆಪಿಕೇಜ್ ಎಂದರೇನು?

ರೆಪಿಕೇಜ್ ರೌಂಡ್ ಎನ್ನುವುದು ಕುಸ್ತಿಯಲ್ಲಿ ಬಳಸುವ ನಿಯಮವಾಗಿದ್ದು, ಒಂದು ರೀತಿಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಇದ್ದಂತೆ. ಅತೀ ಸಣ್ಣ ಅಂತರದಿಂದ ಸೋತ ಸ್ಪರ್ಧಿಗಳಿಗೆ ಈ ಅವಕಾಶವಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಖುರೆಲ್ಖು ಅವರು ಫೈನಲ್ ಪ್ರವೇಶಿಸಿದರೆ, ಸೋನಮ್​ಗೆ ಅವಕಾಶ ದೊರೆಯಲಿದೆ. ಆದರೆ ಖುರೆಲ್ಖು ಫೈನಲ್ ಪ್ರವೇಶಿಸುವ ಸಾಧ್ಯತೆ ಕ್ಷೀಣ ಎನ್ನುತ್ತಾರೆ ಕ್ರೀಡಾ ತಜ್ಞರು.

ಇದನ್ನೂ ಓದಿ:

Viral Video: ಸ್ಕೇಟಿಂಗ್ ರೇಸ್​ನಲ್ಲಿ ಬಿದ್ದು ಎದ್ದು ಮುನ್ನುಗ್ಗಿದ 4 ವರ್ಷದ ಬಾಲಕಿ! ಕೊನೇ ಕ್ಷಣದ ದೃಶ್ಯ ಮಜವಾಗಿದೆ ನೀವೂ ನೋಡಿ

Tokyo Olympics: ಭಾರತ ಪುರುಷರ ಹಾಕಿ ತಂಡದ ಫೈನಲ್ ಕನಸು ಭಗ್ನ; ಇನ್ನು ಕಂಚಿಗಾಗಿ ಹೋರಾಟ

Anant Nag: ಅನಂತ್​ ನಾಗ್​ ಬಗ್ಗೆ ನಿಮಗೆಷ್ಟು ಗೊತ್ತು? ಲೆಜೆಂಡರಿ ನಟನ ಬಗ್ಗೆ ರಿಷಬ್​ ಶೆಟ್ಟಿ ಟೀಮ್​ ಮಾಡಿದ ಡಾಕ್ಯುಮೆಂಟರಿ ಇಲ್ಲಿದೆ

(Indian women Free style wrestler Sonam Malik defeated by Bolortuya Khurelkhuu)

Published On - 10:13 am, Tue, 3 August 21

ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ