Tokyo Olympics: ವನಿತೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಲು ವಿಫಲವಾದ ಭಾರತ

Javelin Throw: ಭಾರತದ ವನಿತಾ ಜಾವೆಲಿನ್ ಸ್ಪರ್ಧಿ ಅನ್ನು ರಾಣಿ ಫೈನಲ್​ಗೇರಲು ವಿಫಲರಾಗಿದ್ದಾರೆ. ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿರುವ ಅವರು, ಎ ಗುಂಪಿನ ಹದಿನೈದು ಸ್ಪರ್ಧಿಗಳಲ್ಲಿ 14ನೇ ಸ್ಥಾನ ಪಡೆದಿದ್ದಾರೆ.

Tokyo Olympics: ವನಿತೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಲು ವಿಫಲವಾದ ಭಾರತ
ಅನ್ನು ರಾಣಿ ಎಸೆತದ ವೈಖರಿ (ಚಿತ್ರ: Reuters)
Follow us
TV9 Web
| Updated By: shivaprasad.hs

Updated on:Aug 03, 2021 | 12:36 PM

ಟೊಕಿಯೊ ಒಲಂಪಿಕ್ಸ್:  ಆಥ್ಲೆಟಿಕ್ಸ್​ನ ಮಹಿಳಾ ವಿಭಾಗದ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲೇ ಭಾರತಕ್ಕೆ ಸೋಲು ಎದುರಾಗಿದೆ. ಗ್ರೂಪ್ ಎನಲ್ಲಿ ಭಾರತದ ಅನ್ನು ರಾಣಿ ಸ್ಪರ್ಧಿಸಿದ್ದು ಅವರು 14ನೇ ಸ್ಥಾನ ಪಡೆದ ಕಾರಣ, ಮುಂದಿನ ಹಂತಕ್ಕೇರಲು ವಿಫಲರಾಗಿದ್ದಾರೆ. ಅನ್ನು ರಾಣಿ ಭಾರತದ ಪರ ಅತೀ ಹೆಚ್ಚು ದೂರ ಜಾವೆಲಿನ್ ಎಸೆದ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಆದರೆ ಒಲಂಪಿಕ್ಸ್​ನಲ್ಲಿ 54.04 ಮೀಟರ್ ದೂರವೆಸೆದ ಅನ್ನು, ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ.

ಮೂರು ಸುತ್ತಿನಲ್ಲೂ ನೀರಸ ಪ್ರದರ್ಶನ ನೀಡಿದ ಅನ್ನು ರಾಣಿ, 15 ಜನ ಸ್ಪರ್ಧಿಗಳಿದ್ದ ರೌಂಡ್​ನಲ್ಲಿ 14ನೆಯವರಾಗಿ ಸ್ಪರ್ಧೆ ಮುಗಿಸಿದರು. ಮೂರು ಸುತ್ತುಗಳಲ್ಲಿ ಕ್ರಮವಾಗಿ 50.35m, 53.19m, 54.04m ಅಷ್ಟು ದೂರವನ್ನು ಎಸೆಯಲು ಮಾತ್ರ ಅವರು ಶಕ್ತರಾದರು. ಇದು ಅನ್ನು ಅವರ ಸ್ವದಾಖಲೆಗೆ ಹೋಲಿಸಿದರೂ ತೀರಾ ಕಳಪೆ ಪ್ರದರ್ಶನವಾಗಿತ್ತು. ಕಾರಣ, ಅನ್ನು ರಾಷ್ಟ್ರೀಯ ಮಟ್ಟದಲ್ಲಿ 63.24m ದೂರವೆಸೆದ ದಾಖಲೆ ಹೊಂದಿದ್ದಾರೆ. ಗುಂಪು ಹಂತದಲ್ಲಿ 63ಮೀಟರ್ ದೂರವೆಸೆದಿದ್ದರೆ ಅನ್ನು ಅವರ ಫೈನಲ್ ಪ್ರವೇಶ ಖಚಿತವಾಗುತ್ತಿತ್ತು.

ಅನ್ನು ರಾಣಿ ಅವರು ಟೊಕಿಯೊ ಒಲಂಪಿಕ್ಸ್​ಗೆ ಪ್ರವೇಶ ಪಡೆದಿದ್ದು ತಮ್ಮ ಜಾಗತಿಕ ಸ್ಥಾನದ(Ranking) ಮೂಲಕ. ಅವರು ಟೊಕಿಯೊ ಒಲಂಪಿಕ್ಸ್​ಗೆ ನಿಗದಿಪಡಿಸಲಾಗಿದ್ದ 64ಮೀಟರ್ ದೂರದ ಅರ್ಹತೆಯನ್ನು ಪಡೆದಿರಲಿಲ್ಲ. ತಮ್ಮ ಅಂಕದಿಂದ ಅರ್ಹತೆ ಸಿಕ್ಕಿದರೂ ಅದನ್ನು ಪದಕವಾಗಿ ಪರಿವರ್ತಿಸಲು 28 ವರ್ಷದ ಅನ್ನು ರಾಣಿ ಅವರು ವಿಫಲರಾಗಿದ್ದಾರೆ. ಈ ಮೊದಲು ಅನ್ನು ಅವರು 2014ರ ಏಷಿಯನ್ ಗೇಮ್ಸ್​ನಲ್ಲಿ ಕಂಚನ್ನೂ ಹಾಗೂ 2019ರ ಏಷಿಯನ್ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿಯನ್ನು ಪಡೆದಿದ್ದರು. ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅವರು ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಾರೆ.

ಇದನ್ನೂ ಓದಿ:

Tokyo Olympics: ‘ಭಾರತಕ್ಕೆ ತನ್ನ ಆಟಗಾರರ ಕುರಿತು ಹೆಮ್ಮೆಯಿದೆ’ ಎಂದು ಹಾಕಿ ತಂಡದ ಬೆಂಬಲಕ್ಕೆ ನಿಂತ ಪ್ರಧಾನಿ ಮೋದಿ

Tokyo Olympics: ಕೊನೆಯ 15 ಸೆಕೆಂಡ್​ಗಳಲ್ಲಿ 2 ಅಂಕ ಬಿಟ್ಟುಕೊಟ್ಟು ಸೋತ ಭಾರತದ ವನಿತಾ ಕುಸ್ತಿಪಟು ಸೋನಮ್ ಮಲಿಕ್

(India’s Women Javelin Throw competitor Annu Rani fails to qualify for the Tokyo Olympics Final)

Published On - 12:31 pm, Tue, 3 August 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ