Tokyo Olympics: ಭಾರತಕ್ಕೆ ಆಗಮಿಸಿದ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು; ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ
PV Sindhu: ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಅವರ ತರಬೇತುದಾರ ಪಾರ್ಕ್ ಟೇ-ಸಾಂಗ್ ಅವರನ್ನು ದೆಹಲಿಯಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ಸ್ವಾಗತಿಸಿದರು.
ಟೋಕಿಯೋ ಒಲಿಂಪಿಕ್ಸ್ನ (Tokyo Olympic) ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ( PV Sindhu ) ಇಂದು ಭಾರತಕ್ಕೆ ಆಗಮಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಅವರ ತರಬೇತುದಾರ ಪಾರ್ಕ್ ಟೇ-ಸಾಂಗ್ ಅವರನ್ನು ದೆಹಲಿಯಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ಸ್ವಾಗತಿಸಿದರು. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಚೀನಾದ ಹೀ ಬಿಂಗ್ಜಿಯಾವೊ ( He Bingjiao ) ಅವರನ್ನು 21-13, 21-15 ನೇರ ಸೆಟ್ಗಳಿಂದ ಮಣಿಸುವ ಮೂಲಕ ಪದಕಕ್ಕೆ ಕೊರೊಳೊಡ್ಡಿದ್ದರು.
ಪ್ರಧಾನಿಯೊಂದಿಗೆ ಐಸ್ ಕ್ರೀಂ ತಿನ್ನುವ ಯೋಗ ಪಿವಿ ಸಿಂಧು ಆಗಮನದ ಬಗ್ಗೆ ಮಾಹಿತಿ ಪಡೆದ ನಂತರ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯ ಮಾಧ್ಯಮದವರು ಹಾಜರಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಪಿಐ ಸಿಂಧು ಅವರನ್ನು ಸಿಐಎಸ್‌ಎಫ್ ರಕ್ಷಣೆಯಲ್ಲಿ ವಿಮಾನ ನಿಲ್ದಾಣದಿಂದ ಹೊರಗೆ ಕರೆತರಲಾಯಿತು. ಒಂದು ಅಥವಾ ಎರಡು ದಿನಗಳಲ್ಲಿ ಸಿಂಧು ಮತ್ತು ಅವರ ಕೋಚ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಊಹಿಲಾಗಿದೆ. ಪಿವಿ ಸಿಂಧು ಮತ್ತು ಅವರ ಹೆತ್ತವರೊಂದಿಗೆ ಒಲಿಂಪಿಕ್ ಕ್ರೀಡಾಕೂಟ ಪ್ರಾರಂಭವಾಗುವ ಮೊದಲು ಪ್ರಧಾನಮಂತ್ರಿ ವಾಸ್ತವಿಕವಾಗಿ ಮಾತನಾಡಿದ್ದರು.
ಸಿಂಧು ಟೋಕಿಯೊದಿಂದ ಹಿಂದಿರುಗಿದಾಗ ಅವರೊಂದಿಗೆ ಐಸ್ ಕ್ರೀಂ ತಿನ್ನುತ್ತೇನೆ ಎಂದು ಮೋದಿ ಹೇಳಿಕೊಂಡಿದ್ದರು. ಏತನ್ಮಧ್ಯೆ, ಪ್ರಧಾನಿ ಮೋದಿಯವರು ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸಿಂಧು ಅವರನ್ನು ಆಹ್ವಾನಿಸಬಹುದು. ಈ ಬಾರಿ ಒಲಿಂಪಿಕ್ಸ್‌ಗೆ ಹೋದ ಎಲ್ಲ ಆಟಗಾರರನ್ನು ಸ್ವಾತಂತ್ರ್ಯ ವಾರ್ಷಿಕೋತ್ಸವದಂದು ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಲಾಗುವುದು ಎಂದು ವರದಿಯಾಗಿದೆ.
ಫೈನಲ್ ಪಂದ್ಯ ಹೀಗಿತ್ತು ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಬಿಂಗ್ಜಿಯಾವೊ ವಿರುದ್ದ ಮೊದಲ ಸುತ್ತಿನ ಆರಂಭದಲ್ಲೇ ಸಿಂಧು ಮೇಲುಗೈ ಸಾಧಿಸಿದ್ದರು . ಸಿಂಧು ಅವರ ಭರ್ಜರಿ ಟೈಮಿಂಗ್ ಹಾಗೂ ನಿಖರತೆ ಮುಂದೆ ಮೊದಲ ಸುತ್ತಿನಲ್ಲಿ ಚೀನಾ ಆಟಗಾರ್ತಿ 21-13 ರಿಂದ ಸೋಲೊಪ್ಪಿಕೊಂಡರು. ಇನ್ನು ಮೊದಲ ಸುತ್ತನ್ನು ಗೆದ್ದ ಆತ್ಮ ವಿಶ್ವಾಸದಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸಿಂಧು 2ನೇ ಸುತ್ತಿನಲ್ಲೂ ಭರ್ಜರಿ ಪ್ರದರ್ಶನ ನೀಡಿದರು.
ಕ್ರಾಸ್ ಕೋರ್ಟ್ ಆಟದ ಮೂಲಕ ಗಮನ ಸೆಳೆದ ಸಿಂಧು ಒಂದು ಹಂತದಲ್ಲಿ ಹೀ ಬಿಂಗ್ಜಿಯಾವೊ ವಿರುದ್ದ ಮೇಲುಗೈ ಸಾಧಿಸಿದ್ದರು. ಆದರೆ ಕಂಬ್ಯಾಕ್ ಮಾಡುವಲ್ಲಿ ಯಶಸ್ವಿಯಾದ ಹೀ ಬಿಂಗ್ಜಿಯಾವೊ ಭರ್ಜರಿ ಪೈಪೋಟಿ ನೀಡಿದರು. ಇದಾಗ್ಯೂ ಅಂತಿಮವಾಗಿ 21-15 ಅಂತರದಿಂದ ಸೋಲುಣಿಸಿದ ಸಿಂಧು ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು. ಇದರೊಂದಿಗೆ ಒಲಿಂಪಿಕ್ಸ್ನಲ್ಲಿ ಬಾಡ್ಮಿಂಟನ್ನಲ್ಲಿ ಭಾರತಕ್ಕಾಗಿ 2 ಪದಕ ಗೆದ್ದುಕೊಟ್ಟ ದಾಖಲೆಯನ್ನು ಸಿಂಧು ಬರೆದರು.
Olympic medallist PV Sindhu and her coach Park Tae-Sang welcomed by the general secretary of Badminton Association of India, Ajay Singhania, in Delhi pic.twitter.com/eioEBPBhvd
— ANI (@ANI) August 3, 2021
#WATCH PV Sindhu and her coach welcomed at the Delhi airport; Sindhu bagged a bronze medal in women's singles badminton at #TokyoOlympics pic.twitter.com/6UORPFX851
— ANI (@ANI) August 3, 2021
Published On - 5:22 pm, Tue, 3 August 21