Tokyo Olympics: ಮುಗಿದ ಬ್ಯಾಡ್ಮಿಂಟನ್ ಸ್ಪರ್ಧೆ; ಸಿಂಧುಗೆ ಕಂಚು.. ಚೀನಾದ್ದೇ ಪಾರುಪತ್ಯ! ಪದಕ ವಿಜೇತರ ಸಂಪೂರ್ಣ ವಿವರ ಹೀಗಿದೆ
Tokyo Olympics: ಟೋಕಿಯೊ ಒಲಿಂಪಿಕ್ಸ್‌ನ ಎಲ್ಲಾ ಬ್ಯಾಡ್ಮಿಂಟನ್ ಸ್ಪರ್ಧೆಗಳು ಸೋಮವಾರ ಕೊನೆಗೊಂಡಿವೆ. ಈ ಒಲಿಂಪಿಕ್ಸ್‌ನಲ್ಲಿ ಭಾರತವು ಮೂರು ಈವೆಂಟ್‌ಗಳಲ್ಲಿ ಭಾಗವಹಿಸಿತು ಆದರೆ ಪಿವಿ ಸಿಂಧು ಮಾತ್ರ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.
ಟೋಕಿಯೊ ಒಲಿಂಪಿಕ್ಸ್‌ನ ಎಲ್ಲಾ ಬ್ಯಾಡ್ಮಿಂಟನ್ ಸ್ಪರ್ಧೆಗಳು ಸೋಮವಾರ ಕೊನೆಗೊಂಡಿವೆ. ಈ ಒಲಿಂಪಿಕ್ಸ್‌ನಲ್ಲಿ ಭಾರತವು ಮೂರು ಈವೆಂಟ್‌ಗಳಲ್ಲಿ ಭಾಗವಹಿಸಿತು ಆದರೆ ಪಿವಿ ಸಿಂಧು ಮಾತ್ರ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಅವರು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಈ ಒಲಿಂಪಿಕ್ಸ್‌ನಲ್ಲಿ, ಚೀನಾ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತು. ಈ ಬಾರಿ ಮಹಿಳಾ ಸಿಂಗಲ್ಸ್ ವಿಭಾಗದ ಚಾಂಪಿಯನ್ ಚೆನ್ ಯು ಫೆಯಿ. ಪುರುಷರ ಸಿಂಗಲ್ಸ್ ನಲ್ಲಿ ಡೆನ್ಮಾರ್ಕ್ ವಿಕ್ಟರ್ ಆಕ್ಸೆಲ್ಸನ್ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಒಲಿಂಪಿಕ್ಸ್ ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಏಷ್ಯೇತರ ಆಟಗಾರ ಇವರು.
ಚೀನಾ ಎರಡು ಚಿನ್ನ, ನಾಲ್ಕು ಬೆಳ್ಳಿ ಸೇರಿದಂತೆ ಒಟ್ಟು ಆರು ಪದಕಗಳನ್ನು ಗೆದ್ದಿದೆ. ಚೈನೀಸ್ ತೈಪೆ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ. ಅದೇ ಸಮಯದಲ್ಲಿ, ಇಂಡೋನೇಷ್ಯಾ ಕೂಡ ಚಿನ್ನದ ಜೊತೆಗೆ ಕಂಚಿನ ಪದಕ ಗೆದ್ದಿತು. ಪುರುಷರ ಸಿಂಗಲ್ಸ್ ನಲ್ಲಿ ಡೆನ್ಮಾರ್ಕ್ ಚಿನ್ನದ ಪದಕ ಗೆದ್ದಿತು. ಜಪಾನ್, ಕೊರಿಯಾ ಮತ್ತು ಮಲೇಷ್ಯಾ ತಲಾ ಒಂದು ಕಂಚಿನ ಪದಕ ಗೆದ್ದಿವೆ.
ಪುರುಷರ ಸಿಂಗಲ್ಸ್ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಡೆನ್ಮಾರ್ಕ್ ನ ವಿಕ್ಟರ್ ಆಕ್ಸೆಲ್ಸನ್ ಚೀನಾದ ಚೆನ್ ಲಾಂಗ್ ಅವರನ್ನು ಎದುರಿಸಿದರು. ವಿಕ್ಟರ್ ಪಂದ್ಯವನ್ನು 21-15, 21-12ರಿಂದ ಗೆದ್ದರು.
ಕಂಚಿನ ಪದಕದ ಪಂದ್ಯವನ್ನು ಗ್ವಾಮಾಟ್ಲಾದ ಕೆವಿನ್ ಕಾರ್ಡನ್ ಮತ್ತು ಇಂಡೋನೇಷ್ಯಾದ ಆಂಟನಿ ಜಿಂಟಿಂಗ್ ನಡುವೆ ಆಡಲಾಯಿತು. ಗಿಂಟಿಂಗ್ ಈ ಪಂದ್ಯವನ್ನು 21-11, 21-13ರಿಂದ ಗೆದ್ದರು.
ಚಿನ್ನದ ಪದಕ – ವಿಕ್ಟರ್ ಆಕ್ಸೆಲ್ಸನ್ ಬೆಳ್ಳಿ ಪದಕ – ಚೆನ್ ಲಾಂಗ್ ಕಂಚಿನ ಪದಕ – ಆಂಟನಿ ಜಿಂಟಿಂಗ್
ಮಹಿಳಾ ಸಿಂಗಲ್ಸ್ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯವು ಚೈನೀಸ್ ತೈಪೆಯ ತೈ ತ್ಸು ಯಿಂಗ್ ಮತ್ತು ಚೀನಾದ ಚೆನ್ ಯು ಫೆಯಿ ನಡುವೆ ನಡೆಯಿತು. ಚೆನ್ ಈ ಪಂದ್ಯವನ್ನು 21-18,19-21,21-18ರಿಂದ ಗೆದ್ದುಕೊಂಡರು.
ಭಾರತದ ಪಿವಿ ಸಿಂಧು ಕಂಚಿನ ಪದಕದ ಪಂದ್ಯದಲ್ಲಿ ಚೀನಾದ ಹೀ ಬಿಂಗ್ ಕ್ಸಿಯಾವೊ ಅವರನ್ನು ಎದುರಿಸಿದರು. ಸಿಂಧು ಪಂದ್ಯವನ್ನು 21-13, 21-15ರಿಂದ ಗೆದ್ದರು.
ಚಿನ್ನದ ಪದಕ – ಚೆನ್ ಯು ಫೀ ಬೆಳ್ಳಿ ಪದಕ – ತೈ ತ್ಸು ಯಿಂಗ್ ಕಂಚಿನ ಪದಕ – ಪಿವಿ ಸಿಂಧು
ಪುರುಷರ ಡಬಲ್ಸ್ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಚೀನಾದ ಲಿ ಜುಮ್ ಹುಯಿ ಮತ್ತು ಲಿಯೋ ಚೆನ್ ಅವರು ಚೀನಾದ ತೈಪೆ ಜೋಡಿ ಲಿ ಯಾಂಗ್ ಮತ್ತು ವಾಂಗ್ ಚಿ ಲಿನ್ ಅವರನ್ನು ಎದುರಿಸಿದ್ದರು. ಚೀನಾದ ಜೋಡಿ 21-18, 21-12ರಿಂದ ಪಂದ್ಯವನ್ನು ಗೆದ್ದುಕೊಂಡಿತು.
ಕಂಚಿನ ಪದಕದ ಪಂದ್ಯದಲ್ಲಿ ಮಲೇಷ್ಯಾದ ಚಿಯಾ ಅರಾನ್ ಮತ್ತು ಸೋ ವೋಯ್ ಯಿಕ್ ಅವರು ಇಂಡೋನೇಷ್ಯಾದ ಮೊಹಮದ್ ಎಹ್ಸಾನ್ ಮತ್ತು ಹೆಂದೆರಾ ಸೆಟಿಯಾವಾನ್ ಅವರನ್ನು ಎದುರಿಸಿದರು. ಮಲೇಷಿಯಾದ ಜೋಡಿ 17-21, 21-17, 21-14ರಿಂದ ಪಂದ್ಯವನ್ನು ಗೆದ್ದುಕೊಂಡಿತು.
ಚಿನ್ನ- ಚೀನಾ ಬೆಳ್ಳಿ – ಚೈನೀಸ್ ತೈಪೆ ಕಂಚಿನ ಪದಕ – ಮಲೇಷ್ಯಾ
ಮಹಿಳೆಯರ ಡಬಲ್ಸ್ ಮಹಿಳೆಯರ ಡಬಲ್ಸ್‌ನಲ್ಲಿ ಇಂಡೋನೇಷ್ಯಾದ ಗ್ರಾಸಿಯಾ ಪೋಲಿ ಮತ್ತು ರಹಯೊ ಅಪರಿಯಾನಿ ಚೀನಾದ ಜಿಯಾ ಯಿ ಫ್ಯಾನ್ ಮತ್ತು ಚೆನ್ ಕ್ವಿಂಗ್ ಚೆನ್ ವಿರುದ್ಧ ಮುಖಾಮುಖಿಯಾದರು. ಇಂಡೋನೇಷ್ಯಾ ಜೋಡಿ 21-19, 21-15 ರಲ್ಲಿ ಈ ಪಂದ್ಯವನ್ನು ಗೆದ್ದುಕೊಂಡಿತು.
ಕಂಚಿನ ಪದಕದ ಪಂದ್ಯವನ್ನು ಎರಡು ಕೊರಿಯನ್ ಜೋಡಿಗಳ ನಡುವೆ ಆಡಲಾಯಿತು. ಲೀ ಸೋಹೀ ಮತ್ತು ಶಿನ್ ಜೋಡಿಯನ್ನು 21-10, 21-17ರಲ್ಲಿ ಕಿಮ್ ಸೊಯೊಂಗ್ ಮತ್ತು ಕಾಂಗ್ ಹಿಯೊಂಗ್ ಸೋಲಿಸಿದರು.
ಚಿನ್ನ – ಇಂಡೋನೇಷ್ಯಾ ಬೆಳ್ಳಿ – ಚೀನಾ ಕಂಚು – ಕೊರಿಯಾ
ಮಿಶ್ರ ಡಬಲ್ಸ್ ಮಿಶ್ರ ಡಬಲ್ಸ್‌ನ ಅಂತಿಮ ಪಂದ್ಯ ಚೀನಾದ ಎರಡು ತಂಡಗಳ ನಡುವೆ ನಡೆಯಿತು. ವಾಂಗ್ ಲಿ ಲು ಮತ್ತು ಹುವಾಂಗ್ ಡಾಂಗ್ ಪಿಂಗ್ ಜೋಡಿ ಜಿಂಗ್ ಸಿ ಮತ್ತು ಹುವಾಂಗ್ ಯಾ ಕಿಯಾಂಗ್ ಜೋಡಿಯನ್ನು 21-17, 17-21, 21-19ರಿಂದ ಸೋಲಿಸಿದರು.
ಕಂಚಿನ ಪದಕದ ಪಂದ್ಯದಲ್ಲಿ, ಹಾಂಕಾಂಗ್‌ನ ಟ್ಯಾಂಗ್ ಚುನ್ ಮ್ಯಾನ್ ಮತ್ತು ಯಿಂಗ್ ಸುಯೆಟ್ ಅವರನ್ನು ಜಪಾನ್‌ನ ವಟನಾಬೆ ಉತಾಹ್ ಮತ್ತು ಆರಿಸಾ ಹಿಗಾಶಿನೊ 21-17, 23-21ರಿಂದ ಸೋಲಿಸಿದರು.
ಚಿನ್ನದ ಪದಕ – ಚೀನಾ ಬೆಳ್ಳಿ ಪದಕ – ಚೀನಾ ಕಂಚಿನ ಪದಕ – ಜಪಾನ್