ಖ್ಯಾತ ನಟಿ ಯಶಿಕಾ ಆನಂದ್​ ಭೀಕರ ಕಾರು ಅಪಘಾತ; ಸ್ನೇಹಿತೆ ಸ್ಥಳದಲ್ಲೇ ಸಾವು

TV9 Digital Desk

| Edited By: ಮದನ್​ ಕುಮಾರ್​

Updated on:Jul 25, 2021 | 1:40 PM

ಪ್ರಥಮ ಚಿಕಿತ್ಸೆ ಬಳಿಕ ಯಶಿಕಾ ಆನಂದ್​ ಮತ್ತು ಸ್ನೇಹಿತರನ್ನು ಚೈನ್ನೈನ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಅಪಘಾತ ಸಂಬಂಧ ಮಹಾಬಲಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಖ್ಯಾತ ನಟಿ ಯಶಿಕಾ ಆನಂದ್​ ಭೀಕರ ಕಾರು ಅಪಘಾತ; ಸ್ನೇಹಿತೆ ಸ್ಥಳದಲ್ಲೇ ಸಾವು
ಖ್ಯಾತ ನಟಿ ಯಶಿಕಾ ಆನಂದ್​ ಭೀಕರ ಕಾರು ಅಪಘಾತ; ಸ್ನೇಹಿತೆ ಸ್ಥಳದಲ್ಲೇ ಸಾವು

ಚಿತ್ರರಂಗಕ್ಕೆ ಇದು ಬ್ಯಾಡ್​ ನ್ಯೂಸ್​. ಖ್ಯಾತ ನಟಿ ಯಶಿಕಾ ಆನಂದ್​ (Yashika Aannand) ಅವರು ಚಲಿಸುತ್ತಿದ್ದ ಕಾರು ಭೀಕರವಾಗಿ ಅಪಘಾತಕ್ಕೆ ಈಡಾಗಿದೆ. ಸ್ನೇಹಿತರ ಜೊತೆ ಮಹಾಬಲಿಪುರಂನಿಂದ ಚೆನ್ನೈಗೆ ಪ್ರಯಾಣ ಮಾಡುತ್ತಿದ್ದ ವೇಳೆ ಈ ಆ್ಯಕ್ಸಿಡೆಂಟ್ (Car Accident) ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಯಶಿಕಾ ಆನಂದ್​ ಅವರಿಗೆ ಗಂಭೀರ ಗಾಯಗಳಾಗಿವೆ. ಅವರ ಜೊತೆ ಪ್ರಯಾಣ ಮಾಡುತ್ತಿದ್ದ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ (28) (Vallichatti Bhavani) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ. ಯಶಿಕಾ ಆನಂದ್​ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ.

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಟಿ ಯಶಿಕಾ ಆನಂದ್​ ಫೇಮಸ್​ ಆಗಿದ್ದಾರೆ. ಬಿಗ್​ ಬಾಸ್​ ಮುಂತಾದ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಕೂಡ ಅವರು ಹೆಸರು ಗಳಿಸಿದ್ದಾರೆ. ಪ್ರಸ್ತುತ ಅನೇಕ ಸಿನಿಮಾ ಅವಕಾಶಗಳು ಅವರ ಕೈಯಲ್ಲಿವೆ. ಈಗ ಅವರಿಗೆ ಅಪಘಾತ ಸಂಭವಿಸಿರುವುದು ನೋವಿನ ಸಂಗತಿ.

ಮೂಲಗಳ ಪ್ರಕಾರ, ಯಶಿಕಾ ಆನಂದ್​ ಮತ್ತು ವಲ್ಲಿಚೆಟ್ಟಿ ಭವಾನಿ ಅವರು ಇನ್ನಿಬ್ಬರು ಪುರುಷ ಸ್ನೇಹಿತರ ಜೊತೆ ಮಹಾಬಲಿಪುರಂನಿಂದ ಚೆನ್ನೈಗೆ ಮರಳುತ್ತಿದ್ದರು. ಭವಾನಿ ಅವರು ಅಮೆರಿಕದಲ್ಲಿ ಸಾಫ್ಟ್​ವೇರ್​ ಕಂಪನಿ ಉದ್ಯೋಗಿ ಆಗಿದ್ದರು. ಈಸ್ಟ್​ ಕೋಸ್ಟ್​ ರೋಡ್​ನಲ್ಲಿ ಶನಿವಾರ (ಜು.24) ರಾತ್ರಿ 11.45ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದಿದೆ. ಕಾರು ಪಲ್ಟಿ ಆಗಿ ಎಲ್ಲರಿಗೂ ತೀವ್ರ ಗಾಯಗಾಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಮೃತರಾದರು ಎಂಬ ಸುದ್ದಿ ಕೇಳಿಬಂದಿದೆ.

ಪ್ರಥಮ ಚಿಕಿತ್ಸೆ ಬಳಿಕ ಯಶಿಕಾ ಆನಂದ್​ ಮತ್ತು ಸ್ನೇಹಿತರನ್ನು ಚೈನ್ನೈನ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಅಪಘಾತ ಸಂಬಂಧ ಮಹಾಬಲಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅತಿ ವೇಗವಾಗಿ ಕಾರು ಚಾಲನೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಡ್ರಂಕ್​ ಆ್ಯಂಡ್​ ಡ್ರೈವ್​ ಅನುಮಾನ ಕೂಡ ಮೂಡಿದೆ. ವಿಜಯ್​ ದೇವರಕೊಂಡ ನಟನೆಯ ‘ನೋಟಾ’, 2019ರಲ್ಲಿ ಬಂದ ‘ಜೋಂಬಿ’ ಮುಂತಾದ ಸಿನಿಮಾಗಳಲ್ಲಿ ಯಶಿಕಾ ಆನಂದ್​ ಅಭಿನಯಿಸಿದ್ದಾರೆ.

ಇದನ್ನೂ ಓದಿ:

ಸಂಚಾರಿ ವಿಜಯ್​ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ

ಸಂಚಾರಿ ವಿಜಯ್​ಗೆ ಅಪಘಾತವಾದ ದಿನ ನಿಜಕ್ಕೂ ನಡೆದಿದ್ದೇನು? ಪೊಲೀಸರಿಗೆ ಹೇಳಿಕೆ ನೀಡಿದ ಸ್ನೇಹಿತ ನವೀನ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada