ಸೀಕ್ರೆಟ್​ ಆಗಿ ನಡೆಯಿತು ಬಿಗ್​ ಬಾಸ್​ ಫಿನಾಲೆ; ಫೋಟೋದಿಂದ ಬಯಲಾಯ್ತು ವಿನ್ನರ್​ ಹೆಸರು

TV9 Digital Desk

| Edited By: ಮದನ್​ ಕುಮಾರ್​

Updated on: Jul 25, 2021 | 11:39 AM

ತಮ್ಮಿಷ್ಟದ ಸ್ಪರ್ಧಿಗಳಿಗೆ ವೋಟ್​ ಮಾಡಲು 7 ದಿನಗಳ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಸ್ಪರ್ಧಿಗಳು ಸೋಶಿಯಲ್​ ಮೀಡಿಯಾದಲ್ಲಿ ವೋಟ್​ಗಾಗಿ ಮನವಿ ಮಾಡಿಕೊಂಡಿದ್ದರು.

ಸೀಕ್ರೆಟ್​ ಆಗಿ ನಡೆಯಿತು ಬಿಗ್​ ಬಾಸ್​ ಫಿನಾಲೆ; ಫೋಟೋದಿಂದ ಬಯಲಾಯ್ತು ವಿನ್ನರ್​ ಹೆಸರು
ಸೀಕ್ರೆಟ್​ ಆಗಿ ನಡೆಯಿತು ಬಿಗ್​ ಬಾಸ್​ ಫಿನಾಲೆ; ಫೋಟೋದಿಂದ ಬಯಲಾಯ್ತು ವಿನ್ನರ್​ ಹೆಸರು

ಬಿಗ್​ ಬಾಸ್​ ಫಿನಾಲೆ (Bigg Boss finale) ಕಾರ್ಯಕ್ರಮ ಎಂದರೆ ಅದ್ದೂರಿಯಾಗಿ ನಡೆಯುತ್ತದೆ. ಹಲವಾರು ಪ್ರೇಕ್ಷಕರ ಸಮ್ಮುಖದಲ್ಲಿ ಚಿತ್ರೀಕರಣ ನಡೆಯುತ್ತದೆ. ಫಿನಾಲೆ ದಿನಾಂಕ ಮುಂಚಿತವಾಗಿಯೇ ಘೋಷಣೆ ಆಗಿರುತ್ತದೆ. ಆದರೆ ಮಲಯಾಳಂ ಬಿಗ್ ಬಾಸ್​ ಮೂರನೇ ಸೀಸನ್​ನಲ್ಲಿ (Bigg Boss Malayalam season 3 ) ಇದೆಲ್ಲ ಉಲ್ಟಾಪಲ್ಟಾ ಆಗಿದೆ. ಏನೂ ಸದ್ದು ಗದ್ದಲ ಇಲ್ಲದೇ ಫಿನಾಲೆ ಕಾರ್ಯಕ್ರಮ ಮಾಡಿ ಮುಗಿಸಲಾಗಿದೆ. ವಿನ್ನರ್​ (Bigg Boss Winner) ಯಾರು ಎಂಬ ವಿಷಯವನ್ನೂ ಗೌಪ್ಯವಾಗಿ ಇರಿಸಲಾಗಿದೆ. ಆದರೆ ವೈರಲ್​ ಆಗಿರುವ ಒಂದು ಫೋಟೋದಿಂದಾಗಿ ಮಣಿಕುಟ್ಟನ್​ ಅವರೇ ವಿನ್ನರ್​ ಎಂಬ ವಿಚಾರ ಬಯಲಾಗಿದೆ.

ಮಾಲಿವುಡ್​ ಸ್ಟಾರ್​ ನಟ ಮೋಹನ್​ಲಾಲ್​ ನಡೆಸಿಕೊಡುವ ಮಲಯಾಳಂ ಬಿಗ್​ ಬಾಸ್​ಗೆ ಈ ಬಾರಿ ಕೊರೊನಾ ವೈರಸ್​ ಎರಡನೇ ಅಲೆಯ ಕಾರಣದಿಂದ ವಿಘ್ನ ಎದುರಾಗಿತ್ತು. ಚೆನ್ನೈನ ಸ್ಟುಡಿಯೋವೊಂದರಲ್ಲಿ ನಡೆಯುತ್ತಿದ್ದ ಈ ಶೋ ಅನ್ನು ಮೇ 19ರಂದು ರದ್ದು ಪಡಿಸಲಾಗಿತ್ತು. 97 ದಿನ ಪೂರೈಸಿದ್ದ ಮಲಯಾಳಂ ಬಿಗ್​ ಬಾಸ್​ ಮೂರನೇ ಸೀಸನ್​ಗೆ ಅನಿರೀಕ್ಷಿತವಾಗಿ ಬ್ರೇಕ್​ ಬಿದ್ದಿತ್ತು. ಈಗ ವಾತಾವರಣ ತಿಳಿಗೊಂಡಿದೆ. ಆದರೆ ಶೋಗೆ ಮರುಚಾಲನೆ ನೀಡಿಲ್ಲ. ಅದರ ಬದಲು ವೋಟಿಂಗ್​ ಮೂಲಕ ವಿನ್ನರ್​ ಯಾರು ಎಂಬುದನ್ನು ನಿರ್ಧರಿಸಲಾಗಿದೆ.

ತಮ್ಮಿಷ್ಟದ ಸ್ಪರ್ಧಿಗಳಿಗೆ ವೋಟ್​ ಮಾಡಲು 7 ದಿನಗಳ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಸ್ಪರ್ಧಿಗಳು ಸೋಶಿಯಲ್​ ಮೀಡಿಯಾದಲ್ಲಿ ವೋಟ್​ಗಾಗಿ ಮನವಿ ಮಾಡಿಕೊಂಡಿದ್ದರು. ಯಾರಿಗೆ ಎಷ್ಟು ವೋಟ್​ ಬಂದಿದೆ ಎಂಬ ಆಧಾರದಲ್ಲಿ ವಿನ್ನರ್​ ಯಾರೆಂಬುದನ್ನು ನಿರ್ಧರಿಸಲಾಗಿದೆ. ನಟ ಮಣಿಕುಟ್ಟನ್​ ಈ ಬಾರಿ ಬಿಗ್​ ಬಾಸ್​ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಆಯೋಜಕರು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಬಿಗ್​ ಬಾಸ್​ ಟ್ರೋಫಿ ಹಿಡಿದು, ಅದಕ್ಕೆ ಮುತ್ತಿಕ್ಕುತ್ತಿರುವ ಮಣಿಕುಟ್ಟನ್​ ಅವರ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸೋರಿಕೆ ಆಗಿದೆ. ಅದನ್ನು ಕಂಡ ಎಲ್ಲರೂ ಮಣಿಕುಟ್ಟನ್​ ಅವರೇ ವಿನ್ನರ್​ ಎಂದು ಅಭಿನಂದನೆ ತಿಳಿಸುತ್ತಿದ್ದಾರೆ. ಶೀಘ್ರದಲ್ಲೇ ಏಷ್ಯಾನೆಟ್​ ವಾಹಿನಿಯಲ್ಲಿ ಫಿನಾಲೆ ಎಪಿಸೋಡ್​ ಪ್ರಸಾರ ಆಗಲಿದೆ. ಆಗ ಯಾರು ವಿನ್ನರ್​ ಎಂಬುದು ಅಧಿಕೃತವಾಗಿ ಗೊತ್ತಾಗಲಿದೆ.

ಕನ್ನಡದಲ್ಲೂ ಬಿಗ್​ ಬಾಸ್​ ಸೀಸನ್​ 8ರ ಫಿನಾಲೆ ದಿನಾಂಕ ಹತ್ತಿರ ಆಗುತ್ತಿದೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಅಂತಿಮವಾಗಿ ಯಾರು ಬಿಗ್​ ಬಾಸ್​ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬ ಕೌತುಕ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಮೂಡಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಿಂದ ಶಮಂತ್​ ಬ್ರೋ ಗೌಡ ಎಲಿಮಿನೇಟ್? ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ

ಬಿಗ್​ ಬಾಸ್​ ಸ್ಪರ್ಧಿ ವನಿತಾಗೆ 4ನೇ ಮದುವೆ? ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada