ಬಿಗ್​ ಬಾಸ್​ ಫಿನಾಲೆಗೂ ಮೊದಲೇ ರಘು ಗೌಡ-ರಾಜೀವ್ ಅಭಿಮಾನಿಗಳಿಗೆ ಗುಡ್ ನ್ಯೂಸ್​

ಬಿಗ್​ ಬಾಸ್​ ಮನೆ ಪ್ರವೇಶಿಸಿದಾಗ ರಾಜೀವ್​ ಹಾಗೂ ರಘುಗೆ ಅಷ್ಟಾಗಿ ಗೆಳೆತನ ಬೆಳೆದಿರಲಿಲ್ಲ. ಆದರೆ, ಬಿಗ್​ ಬಾಸ್​ನಲ್ಲಿ ಹಲವು ವಾರಗಳ ಕಾಲ ಒಟ್ಟಿಗೆ ಕಳೆದ ನಂತರದಲ್ಲಿ ಇಬ್ಬರೂ ಉತ್ತಮ ಗೆಳೆಯರಾದರು.

ಬಿಗ್​ ಬಾಸ್​ ಫಿನಾಲೆಗೂ ಮೊದಲೇ ರಘು ಗೌಡ-ರಾಜೀವ್ ಅಭಿಮಾನಿಗಳಿಗೆ ಗುಡ್ ನ್ಯೂಸ್​
TV9kannada Web Team

| Edited By: Rajesh Duggumane

Jul 25, 2021 | 9:07 PM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಳ್ಳೋಕೆ ಕೆಲವೇ ವಾರಗಳು ಬಾಕಿ ಇವೆ. ಎಂಟನೇ ಸೀಸನ್​ ಕೊನೆಯ ಹಂತ ತಲುಪಿದ್ದು, ಒಬ್ಬೊಬ್ಬರಾಗಿ ಸ್ಪರ್ಧಿಗಳು ಮನೆಯಿಂದ ಹೊರ ಹೋಗುತ್ತಿದ್ದಾರೆ. ಬಿಗ್​ ಬಾಸ್​ನಿಂದ ಹೊರ ಬಂದ ಸ್ಪರ್ಧಿಗಳು ಹೊಸ ಸಿನಿಮಾ ಘೋಷಣೆ ಮಾಡುತ್ತಿದ್ದಾರೆ. ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದ ರಘು ಗೌಡ ಹಾಗೂ ರಾಜೀವ್​ ಈಗ ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ರಘು ಹಾಗೂ ರಾಜೀವ್​ ಬಿಗ್​ ಬಾಸ್​ ಸೀಸನ್​ 8ರ ಸ್ಪರ್ಧಿಗಳಾಗಿ ಮನೆ ಪ್ರವೇಶಿಸಿದ್ದರು. ಬಿಗ್​ ಬಾಸ್​ ಮೊದಲನೇ ಇನ್ನಿಂಗ್ಸ್​ ಪೂರ್ಣಗೊಳ್ಳಲು ಕೆಲವೇ ವಾರ ಇರುವಾಗ ರಾಜೀವ್​ ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆಗಿದ್ದರು. ಗೋಲ್ಡನ್​ ಪಾಸ್​ ಹೊಂದಿದ್ದ ಅವರಿಂದ ನಾಮಿನೇಷನ್​ನಿಂದ ಬಚಾವ್​ ಆಗುವ ಆಯ್ಕೆ ಇತ್ತು. ಆದರೆ, ಅವರು ಪಾಸ್​ ಬಳಕೆ ಮಾಡಿಕೊಳ್ಳಲಿಲ್ಲ. ಸೆಕೆಂಡ್​ ಇನ್ನಿಂಗ್ಸ್​ನ ಎರಡನೇ ವಾರದ ಎಲಿಮಿನೇಷನ್​ನಲ್ಲಿ ರಘು ಗೌಡ ಮನೆಯಿಂದ ಹೊರ ಬಂದಿದ್ದರು. ಈಗ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿರೋದು ವಿಶೇಷ.

ವಿಜಯ್​ ನಿರ್ದೇಶನ ಮಾಡುತ್ತಿರುವ ‘ಉಸಿರೇ ಉಸಿರೇ’  ಚಿತ್ರದಲ್ಲಿ ರಘು ಹಾಗೂ ರಾಜೀವ್​ ನಟಿಸುತ್ತಿದ್ದಾರೆ. ಇಬ್ಬರೂ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿರುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಂದಹಾಗೆ, ಕಾಲೇಜಿನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಇಬ್ಬರೂ ಗೆಳೆಯರಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಿಗ್​ ಬಾಸ್​ ಮನೆ ಪ್ರವೇಶಿಸಿದಾಗ ರಾಜೀವ್​ ಹಾಗೂ ರಘುಗೆ ಅಷ್ಟಾಗಿ ಗೆಳೆತನ ಬೆಳೆದಿರಲಿಲ್ಲ. ಆದರೆ, ಬಿಗ್​ ಬಾಸ್​ನಲ್ಲಿ ಹಲವು ವಾರಗಳ ಕಾಲ ಒಟ್ಟಿಗೆ ಕಳೆದ ನಂತರದಲ್ಲಿ ಇಬ್ಬರೂ ಉತ್ತಮ ಗೆಳೆಯರಾದರು. ಈಗ ಇಬ್ಬರೂ ತೆರೆಮೇಲೆಯೂ ಫ್ರೆಂಡ್ಸ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.

ಆಗಸ್ಟ್ 8ರಂದು ಬಿಗ್​ ಬಾಸ್​ ಫಿನಾಲೆ ನಡೆಯುತ್ತಿದೆ. ಈ ವೇಳೆ 8ನೇ ಸೀಸನ್​ನಲ್ಲಿ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದ ಎಲ್ಲಾ ಸ್ಪರ್ಧಿಗಳು ಮತ್ತೆ ವೇದಿಕೆ ಏರಲಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಿಂದ ಶಮಂತ್​ ಬ್ರೋ ಗೌಡ ಎಲಿಮಿನೇಟ್? ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ

ಸೀಕ್ರೆಟ್​ ಆಗಿ ನಡೆಯಿತು ಬಿಗ್​ ಬಾಸ್​ ಫಿನಾಲೆ; ಫೋಟೋದಿಂದ ಬಯಲಾಯ್ತು ವಿನ್ನರ್​ ಹೆಸರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada