ಯೋ ಯೋ ಹನಿ ಸಿಂಗ್​ಗೆ ಶಾರುಖ್ ಖಾನ್ ಕಪಾಳಕ್ಕೆ ಬಾರಿಸಿದ್ದು ಯಾಕೆ ಅಂತ ಇದುವರೆಗೆ ಗೊತ್ತಾಗಿಲ್ಲ!

ಶಾರುಖ್ ಮತ್ತು ದೀಪಿಕಾ ಪಡುಕೋಣೆ ಜೊತೆ ಅವರ ‘ಲುಂಗಿ ಡ್ಯಾನ್ಸ್’ ಹಾಡು ಜನಪ್ರಿಯತೆಯ ಉತ್ತುಂಗ ತಲುಪಿದ ನಂತರ ಹನಿ ಸಿಂಗ್ ಇದ್ದಕ್ಕಿದ್ದಂತೆ ಸುಮಾರು ಒಂದೂವರೆ ವರ್ಷಗಳ ಕಾಲ ಕಣ್ಮರೆಯಾದರು. ಎಲ್ಲಿ ಹೋದರು, ಏನು ಮಾಡುತ್ತಿದ್ದಾರೆ ಅಂತ ಶಾಲಿನಿ ಸಹ ಹೇಳಲಿಲ್ಲ.

ಕನ್ನಡದಲ್ಲಿ ಒಂದು ಮಾತನ್ನು ಯಾವಾಗಲೂ ಹೇಳುತ್ತಿರುತ್ತಾರೆ. ಉಪ್ಪು ತಿಂದವನು ನೀರು ಕುಡಿಯಬೇಕು ಮತ್ತು ಮೇಲಕ್ಕೇರಿದವನು ಕೆಳಗಿಳಿಯಲೇಬೇಕು ಅಂತ. ಕನ್ನಡದವರ ಈ ಮಾತು ಪಂಜಾಬಿನ ಱಪರ್ ಯೋ ಯೋ ಹನಿ ಸಿಂಗ್ಗೆ ಬಹಳ ಚೆನ್ನಾಗಿ ಅನ್ವಯಿಸುತ್ತದೆ. ಆದರೆ ಹನಿ ಸಿಂಗ್ ಅಷ್ಟು ಬೇಗ ನೆಲಕ್ಕಪ್ಪಿಳಿಸುತ್ತಾರೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಉಜ್ಜಲ ಕರೀಯರ್ ಹಾಳಾಗಿದ್ದಕ್ಕೆ ಅವರು ಕೇವಲ ತಮ್ಮನ್ನು ಮಾತ್ರ ದೂಷಿಸಿಕೊಳ್ಳಬೇಕು. ಯಾಕೆಂದರೆ ಈ ಮಹಾಶಯ ಸೃಷ್ಟಿಸಿದ ವಿವಾದಗಳು ಒಂದೆರಡಲ್ಲ. ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ರಿಂದ ಕಪಾಳಮೋಕ್ಷ ಮಾಡಿಸಿಕೊಂಡ ಅಪಖ್ಯಾತಿಯೂ ಹನಿ ಅವರದ್ದು. ಶಾರುಖ್ ಯಾಕೆ ಹೊಡೆದರು ಅನ್ನೋದು ಇದುವರೆಗೆ ಸ್ಪಷ್ಟವಾಗಿಲ್ಲ. ಹನಿಯಿಂದ ಈಗ ವಿಚ್ಛೇದನ ಕೋರಿರುವ ಅವರ ಪತ್ನಿ ಶಾಲಿನಿ ಸಿಂಗ್ ಅವರು ಆಗ ಕಪಾಳಮೋಕ್ಷದ ಸುದ್ದಿ ಸುಳ್ಳು ಅಂತ ಹೇಳಿದ್ದರು.

ಶಾರುಖ್ ಮತ್ತು ದೀಪಿಕಾ ಪಡುಕೋಣೆ ಜೊತೆ ಅವರ ‘ಲುಂಗಿ ಡ್ಯಾನ್ಸ್’ ಹಾಡು ಜನಪ್ರಿಯತೆಯ ಉತ್ತುಂಗ ತಲುಪಿದ ನಂತರ ಹನಿ ಸಿಂಗ್ ಇದ್ದಕ್ಕಿದ್ದಂತೆ ಸುಮಾರು ಒಂದೂವರೆ ವರ್ಷಗಳ ಕಾಲ ಕಣ್ಮರೆಯಾದರು. ಎಲ್ಲಿ ಹೋದರು, ಏನು ಮಾಡುತ್ತಿದ್ದಾರೆ ಅಂತ ಶಾಲಿನಿ ಸಹ ಹೇಳಲಿಲ್ಲ.

ಆದರೆ ಪಂಜಾಬಿನ ಮತ್ತೊಬ್ಬ ಖ್ಯಾತ ಹಾಡುಗಾರ ಜಸ್ಬೀರ್ ಜೆಸ್ಸಿ ಅವರು ಹನಿ ಸಿಂಗ್ರನ್ನು ಚಂಡೀಗಢ್ನಲ್ಲಿನ ಒಂದು ರಿಹ್ಯಾಬ್ ಸೆಂಟರ್ನಲ್ಲಿ ಭೇಟಿಯಾಗಿದ್ದೆ ಅಂತ ಹೇಳಿದಾಗ ಅಸಲೀಯತ್ತು ಹೊರಬಿತ್ತು. ಹನಿ ಸಿಂಗ್ ಮದ್ಯಪಾನ ಮತ್ತು ಮಾದಕ ವಸ್ತುಗಳ ದಾಸರಾಗಿದ್ದರು ಮತ್ತು ಅವರನ್ನು ಈ ಚಟಗಳಿಂದ ಮುಕ್ತ ಮಾಡಲು ರಿಹ್ಯಾಬ್ ಕೇಂದ್ರಕ್ಕೆ ಸೇರಿಸಲಾಗಿತ್ತು ಎನ್ನುವ ಸಂಗತಿ ನಂತರ ಹೊರಬಿತ್ತು.

ಹನಿ ಸಿಂಗ್ ಮತ್ತು ಅವರ ಜೊತೆಯೇ ಕರೀಯರ್ ಆರಂಭಿಸಿದ ಮತ್ತೊಬ್ಬ ಖ್ಯಾತ ಱಪರ್ ಬಾದಶಾಹ ನಡುವೆ ಗಾಢವಾದ ಸ್ನೇಹವಿತ್ತ್ತು. ಇಬ್ಬರೂ ಸೇರಿ ಜನಪ್ರಿಯ ಆಲ್ಬಮ್ಗಳನ್ನು ನೀಡಿದ್ದಾರೆ. ಆದರೆ ಯಾವುದೋ ಕಾರ್ಯಕ್ರಮದಲ್ಲಿ ಹನಿಸಿಂಗ್ ತನ್ನನ್ನು ರೋಲ್ಸ್ ರಾಯ್ಸ್ ಕಾರಿಗೆ ಹೋಲಿಸಿಕೊಂಡು ಬಾದಶಾಹರನ್ನು ನ್ಯಾನೊ ಕಾರು ಅಂತ ಹೇಳಿದಾಗ ಇಬ್ಬರ ನಡುವೆ ವೈಮನಸ್ಸು ಶುರುವಾಯಿತು.

ಹಾಗೆಯೇ, ಹನಿ ಸಿಂಗ್ ಅಶ್ಲೀಲ ಹಾಡುಗಳನ್ನು ರಚಿಸಿ ವಿವಾದಕ್ಕೀಡಾಗಿದ್ದಾರೆ. ಹಾಡುಗಳಲ್ಲಿ ಕೆಟ್ಟ ಪದಗಳನ್ನು ಬಳಸಿದ್ದರಿಂದ ಅವರ ಮಖನ್ ಅಲ್ಬಮ್ ಬ್ಯಾನ್ ಮಾಡಲಾಯಿತು.

ಈಗ ಶಾಲಿನಿ ತಲ್ವಾರ್ ಅವರು ಪತಿಯ ವಿರುದ್ಧ ಲೈಂಗಿಕ ದೌರ್ಜನ್ಯ, ಭಾವನಾತ್ಮಕ, ಮಾನಸಿಕ ಮತ್ತು ಕೌಟುಂಬಿಕ ಹಿಂಸೆ ಮತ್ತು ವ್ಯಭಿಚಾರದ ಆರೋಪಗಳನ್ನು ಮಾಡಿ ಅವರಿಂದ ವಿಚ್ಛೇದನ ಕೋರಿದ್ದಾರೆ. ಪಾಪದ ಕೊಡ ತುಂಬಿದಂತೆ ಕಾಣುತ್ತಿದೆ.

ಇದನ್ನೂ ಓದಿ: Viral Video: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಯೋಗಾಸನ ಮಾಡಿದ ಯುವತಿ; ಶಾಕಿಂಗ್ ವಿಡಿಯೋ ಇಲ್ಲಿದೆ

Click on your DTH Provider to Add TV9 Kannada