Viral Video: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಯೋಗಾಸನ ಮಾಡಿದ ಯುವತಿ; ಶಾಕಿಂಗ್ ವಿಡಿಯೋ ಇಲ್ಲಿದೆ

Viral Video: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಯೋಗಾಸನ ಮಾಡಿದ ಯುವತಿ; ಶಾಕಿಂಗ್ ವಿಡಿಯೋ ಇಲ್ಲಿದೆ
ನಡುರಸ್ತೆಯಲ್ಲಿ ಕುಡಿದ ಯುವತಿಯ ಅವಾಂತರ

ಬಸ್​, ಕಾರುಗಳು ತನ್ನ ಅಕ್ಕಪಕ್ಕದಲ್ಲಿ ಹೋಗುವುದನ್ನೇ ನೋಡುತ್ತಾ ನಡುರಸ್ತೆಯಲ್ಲಿ ಮಲಗಿದ್ದ ಯುವತಿ ರಸ್ತೆಯಲ್ಲೇ ಮಲಗಿ ಯೋಗಾಸನ ಮಾಡುತ್ತಿದ್ದಳು. ಕುಡಿದು ಟೈಟಾಗಿದ್ದ ಆಕೆಯ ಅವಾಂತರಗಳನ್ನು ನೀವೂ ಒಮ್ಮೆ ನೋಡಿಬಿಡಿ. 

TV9kannada Web Team

| Edited By: Sushma Chakre

Aug 04, 2021 | 8:35 PM

ಪುಣೆ: ಮಹಾರಾಷ್ಟ್ರದ ಪುಣೆಯ ನಡುರಸ್ತೆಯಲ್ಲಿ ಯುವತಿಯೊಬ್ಬಳು ಕುಡಿದು ತೂರಾಡಿಕೊಂಡು, ನೆಲದಲ್ಲೇ ಮಲಗಿ ಹೊರಳಾಡುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಪುಣೆಯ ತಿಲಕ್ ರಸ್ತೆಯ ಹೀರಾಭಾಗ್ ಚೌಕ್​ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಜನರು ಈ ದೃಶ್ಯವನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಮಂಗಳವಾರ ರಾತ್ರಿ 10.30ಕ್ಕೆ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳು ಅವಾಂತರ ಸೃಷ್ಟಿಸಿದ್ದಾಳೆ.

ಪುರುಷರು ಅತಿಯಾಗಿ ಕುಡಿದು ತೂರಾಡುವುದು ಸಾಮಾನ್ಯ. ಆದರೆ, ಕಪ್ಪು ಬಣ್ಣದ ಜೀನ್ಸ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿದ್ದ ಯುವತಿ ಹೀಗೆ ಕಂಠಪೂರ್ತಿ ಕುಡಿದು ರಾತ್ರಿ ವೇಳೆ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿರುವ ವಿಡಿಯೋ ಅನೇಕರ ಕಣ್ಣು ಕೆಂಪಾಗಿಸಿದೆ. ಮಧ್ಯರಸ್ತೆಯಲ್ಲಿ ಮಲಗಿ ಕೈಕಾಲುಗಳನ್ನು ಮೇಲೆತ್ತಿ ವ್ಯಾಯಾಮ ಮಾಡುತ್ತಿದ್ದ ಯುವತಿಯ ಅವಾಂತರಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ನಡು ರಸ್ತೆಯಲ್ಲೇ ಮಲಗಿದ್ದ ಆಕೆಯನ್ನು ನೋಡಿದ ವಾಹನ ಸವಾರರು ಪಕ್ಕದಲ್ಲಿ ಮುಂದೆ ಸಾಗಿದ್ದಾರೆ. ಅವರ ಅವಸ್ಥೆಯನ್ನು ನೋಡಲು ಅನೇಕ ಜನರು ಸೇರಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಂದು ಆ ಯುವತಿಯನ್ನು ಎಬ್ಬಿಸಿ ಕರೆದುಕೊಂಡು ಹೋಗಿದ್ದಾರೆ.

ಬಸ್​, ಕಾರುಗಳು ತನ್ನ ಅಕ್ಕಪಕ್ಕದಲ್ಲಿ ಹೋಗುವುದನ್ನೇ ನೋಡುತ್ತಾ ನಡುರಸ್ತೆಯಲ್ಲಿ ಮಲಗಿದ್ದ ಮಾಡರ್ನ್ ಯುವತಿ ರಸ್ತೆಯಲ್ಲೇ ಮಲಗಿ ಯೋಗಾಸನಗಳನ್ನು ಮಾಡುತ್ತಿದ್ದಳು. ಕುಡಿದು ಟೈಟಾಗಿದ್ದ ಆಕೆಯ ಅವಾಂತರಗಳನ್ನು ನೀವೂ ಒಮ್ಮೆ ನೋಡಿಬಿಡಿ.

ಇದನ್ನೂ ಓದಿ: Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!

Viral Video: 100 ಕೆಜಿ ತೂಕದ ಲೆಹೆಂಗಾ ತೊಟ್ಟು ನಿಂತ ವಧು; ವಿಷ್ ಮಾಡಲು ಜಾಗವಿಲ್ಲದೆ ಅತಿಥಿಗಳು ಕಂಗಾಲು!

(Viral Video Drunk Woman Rolls Around Sleeps Exercise on Traffic Road in Pune Shocking Video is here)

Follow us on

Related Stories

Most Read Stories

Click on your DTH Provider to Add TV9 Kannada