ಪೊಲೀಸ್ ಸ್ಟೇಷನ್ ಒಳಗಡೆ ಡಾನ್ಸ್ ಮಾಡಿ ಪೋಸ್ ಕೊಟ್ಟು ವಿಡಿಯೋ ಹರಿಬಿಟ್ಟ ಯುವಕರು ಪೊಲೀಸರಿಗೆ ಅತಿಥಿಯಾದ್ರು! ವಿಡಿಯೋ ನೋಡಿ
Viral Video: ನಾಲ್ವರಲ್ಲಿ ಓರ್ವನು ಇನ್ಸ್ಪೆಕ್ಟರ್ ಖುರ್ಚಿಯ ಮೇಲೆ ಕುಳಿತು ಮೇಜಿನ ಮೇಲೆ ಕಾಲು ಹಾಕಿ ಕುಳಿತಿರುವುದು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಷಯ ಗೊತ್ತಾಗುತ್ತಿದ್ದಂತೆಯೇ ಯುವಕರನ್ನು ಬಂಧಿಸಲಾಗಿದೆ.
ಪೊಲೀಸ್ ಠಾಣೆಯ ಒಳಗೆ ಮೇಜು ಹತ್ತಿ ಡಾನ್ಸ್ ಮಾಡಿ ವಿಡಿಯೋ ಹರಿಬಿಟ್ಟ ನಾಲ್ಕು ಯುವಕರು ಅರೆಸ್ಟ್ ಆಗಿದ್ದಾರೆ. ಡೈಲಾಗ್ ಹೊಡೀತಾ, ಡಾನ್ಸ್ ಮಾಡುತ್ತಾ ಪೋಸ್ ಕೊಟ್ಟಿದ್ದಾರೆ. ನಾಲ್ವರಲ್ಲಿ ಓರ್ವನು ಇನ್ಸ್ಪೆಕ್ಟರ್ ಖುರ್ಚಿಯ ಮೇಲೆ ಕುಳಿತು ಮೇಜಿನ ಮೇಲೆ ಕಾಲು ಹಾಕಿ ಕುಳಿತಿರುವುದು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಷಯ ಗೊತ್ತಾಗುತ್ತಿದ್ದಂತೆಯೇ ಯುವಕರನ್ನು ಬಂಧಿಸಲಾಗಿದೆ.
ಘಟನೆ ಆಗ್ರಾದ ಜಗದೀಶ್ಪುರ ಪೊಲೀಸ್ ಸ್ಟೇಷನ್ನಲ್ಲಿ ನಡೆದಿದೆ. ವಿಡಿಯೋ ನೋಡಿದ ನೆಟ್ಟಿಗರು ಠಾಣೆಯಲ್ಲಿ ಓರ್ವ ಪೊಲೀಸರು ಇಲ್ಲ ಯಾಕೆ? ವಿಡಿಯೋದಲ್ಲಿ ಗಮನಿಸಿದಂತೆ ಪೊಲೀಸ್ ಸ್ಟೇಷನ್ ಖಾಲಿ ಇದ್ದಂತೆ ಅನಿಸುತ್ತಿದೆ. ಓರ್ವ ಪೊಲೀಸರು ಕಾಣಿಸುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
Tik Tok hangover at a police outpost In UP’s Agra. pic.twitter.com/7cH9hn9XCE
— Piyush Rai (@Benarasiyaa) August 4, 2021
ಅಧಿಕಾರಿ ಯೋಗೇಂದ್ರ ಕುಮಾರ್ ಹೇಳಿಕೆ ನೀಡಿದ್ದು, ಆ ದಿನ ಪೊಲೀಸರು ಮೀಟಿಂಗ್ಗೆ ಹೊರಗಡೆ ಹೋದ ಸಮಯದಲ್ಲಿ ಯುವಕರು ಹೀಗೆ ಮಾಡಿರಬಹುದು. ಯಾವುದೋ ಕೆಲಸದ ನಿಮಿತ್ತ ಯುವಕರು ಠಾಣೆಗೆ ಬಂದಿರಬಹುದು. ಪೊಲೀಸರು ಇಲ್ಲದ್ದನ್ನು ನೋಡಿ ವಿಡಿಯೋ ಮಾಡಲು ಅವಕಾಶವಾಯಿತು ಎಂದು ಹೇಳಿದ್ದಾರೆ. ಯುವಕನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಂತೆ ವರದಿಗಳಿಂದ ಮಾಹಿತಿ ಲಭ್ಯವಾಗಿದೆ.
IC चौकी अवधपुरी के प्रयागराज में ड्यूटीरत होने के दौरान घटित उक्त प्रकरण में #CO_Lohamandi को, चौकी पर निगरानी ड्यूटी में तैनात पुलिसकर्मी के विरुद्ध विभागीय जांच व वीडियो में दोषी आर्यन,गोलू, हर्षित व आदित्य को गिरफ्तार करते हुए,अग्रिम वैधानिक कार्यवाही की जा रही है। @Uppolice pic.twitter.com/VgjA4mJ6Iq
— AGRA POLICE (@agrapolice) August 3, 2021
ಇದನ್ನೂ ಓದಿ:
ಅಶ್ಲೀಲ ಸಿನಿಮಾ ದಂಧೆಯಲ್ಲಿ ನಟಿ-ಮಾಡೆಲ್ ನಂದಿತಾ ದತ್ತ ಅರೆಸ್ಟ್; ಹಲವರಿಗೆ ಬಂಧನ ಭೀತಿ
ಗುದನಾಳದಲ್ಲಿ ಚಿನ್ನವನ್ನಿಟ್ಟುಕೊಂಡು ಬಂದರೂ ಪಾರಾಗಲು ಸಾಧ್ಯವಾಗಲಿಲ್ಲ; ವ್ಯಕ್ತಿ ಅರೆಸ್ಟ್, 810 ಗ್ರಾಂ ಬಂಗಾರ ವಶ
(four Youths arrested by police after dancing inside the police station in agra)