ಗುದನಾಳದಲ್ಲಿ ಚಿನ್ನವನ್ನಿಟ್ಟುಕೊಂಡು ಬಂದರೂ ಪಾರಾಗಲು ಸಾಧ್ಯವಾಗಲಿಲ್ಲ; ವ್ಯಕ್ತಿ ಅರೆಸ್ಟ್, 810 ಗ್ರಾಂ ಬಂಗಾರ ವಶ
ಗುದನಾಳದಲ್ಲಿ ಚಿನ್ನ ಇಟ್ಟು ಸ್ಮಗ್ಲಿಂಗ್ ಮಾಡುವ ಪ್ರಕರಣಗಳು ಇತ್ತೀಚೆಗೆ ತುಂಬ ಏರಿಕೆಯಾಗುತ್ತಿವೆ. ಡಿಸೆಂಬರ್ನಲ್ಲಿ ದುಬೈನಿಂದ ಬಂದ ಇಬ್ಬರು ಹೀಗೆ ಗುದನಾಳದಲ್ಲಿ ಚಿನ್ನದ ಪೇಸ್ಟ್ ತಂದಿದ್ದರು.
ದುಬೈನಿಂದ ಚೆನ್ನೈಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ತನ್ನ ಗುದನಾಳದಲ್ಲಿ 40 ಲಕ್ಷ ರೂ. ಮೌಲ್ಯದ 810 ಗ್ರಾಂ ಚಿನ್ನವನ್ನು ಸಾಗಿಸಲು ಪ್ರಯತ್ನಿಸಿ ಏರ್ಪೋರ್ಟ್ನ ಕಸ್ಟಮ್ ಅಧಿಕಾರಿಗಳ ಬಳಿ ಸಿಕ್ಕಿಬಿದ್ದಿದ್ದಾನೆ. ದುಬೈನಿಂದ ಚೆನ್ನೈಗೆ ಪ್ರಯಾಣ ಮಾಡುತ್ತಿರುವ ವ್ಯಕ್ತಿಯೊಬ್ಬ ಚಿನ್ನವನ್ನು ಸ್ಮಗ್ಲಿಂಗ್ ಮಾಡುತ್ತಿದ್ದಾನೆ ಎಂದು ಕೇಂದ್ರೀಯ ಕಂದಾಯ ತನಿಖಾ ವಿಭಾಗಕ್ಕೆ ಮಾಹಿತಿ ಬಂದಿತ್ತು. ಹಾಗಾಗಿ ಚೆನ್ನೈ ಏರ್ಪೋರ್ಟ್ನಲ್ಲಿ ಅಧಿಕಾರಿಗಳು ಪ್ರತಿಯೊಬ್ಬ ಪ್ರಯಾಣಿಕನನ್ನು ತಪಾಸಣೆಗೆ ಒಡ್ಡುತ್ತಿದ್ದರು.
ಕಸ್ಟಮ್ಸ್ ಅಧಿಕಾರಿಗಳ ಬಳಿ ಈತ ಸಿಕ್ಕಿಬಿದ್ದಿದ್ದಾನೆ. ಈತ ಗುದನಾಳದಲ್ಲಿ ಕೊಂಡೊಯ್ಯುತ್ತಿದ್ದ 24 ಕ್ಯಾರೆಟ್ ಚಿನ್ನದ ಬೆಲೆ 40.35 ಲಕ್ಷ ಎಂದು ಏರ್ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಸದ್ಯ ಆತ ಬಂಧಿತನಾಗಿದ್ದಾನೆ. ಇವನ ಗುದನಾಳದಿಂದ ಒಟ್ಟು 948 ಗ್ರಾಂ.ತೂಕದ 4 ಬಂಡಲ್ಗಳಷ್ಟು ಗೋಲ್ಡ್ ಪೇಸ್ಟ್ನ್ನು ಹೊರತೆಗೆಯಲಾಗಿದ್ದು, ಅದರಲ್ಲಿ 810 ಗ್ರಾಂ. 24 ಕ್ಯಾರೆಟ್ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇನ್ನೂ ತನಿಖೆ ನಡೆಯುತ್ತಿದೆ.
ಗುದನಾಳದಲ್ಲಿ ಚಿನ್ನ ಇಟ್ಟು ಸ್ಮಗ್ಲಿಂಗ್ ಮಾಡುವ ಪ್ರಕರಣಗಳು ಇತ್ತೀಚೆಗೆ ತುಂಬ ಏರಿಕೆಯಾಗುತ್ತಿವೆ. ಡಿಸೆಂಬರ್ನಲ್ಲಿ ದುಬೈನಿಂದ ಬಂದ ಇಬ್ಬರು ಹೀಗೆ ಗುದನಾಳದಲ್ಲಿ ಚಿನ್ನದ ಪೇಸ್ಟ್ ತಂದಿದ್ದರು. ಅವರಿಂದ 35.5 ಲಕ್ಷ ರೂ.ಮೌಲ್ಯದ 706 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಹಾಗೇ, ಜನವರಿಯಲ್ಲೂ 17 ಮಂದಿ ಹೀಗೆ ಮಾಡಿದ್ದರು. ಈ ಎಲ್ಲರಿಂದ ಒಟ್ಟಾರೆ 3.93 ಕೋಟಿ ರೂ.ಬೆಲೆಯ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: Rashmika Mandanna: ಸೆಟ್ಟೇರಿತು ರಶ್ಮಿಕಾರ ಹೊಸ ತೆಲುಗು ಚಿತ್ರ; ತೆರೆ ಹಂಚಿಕೊಳ್ಳಲಿದ್ದಾರೆ ತೆಲುಗಿನ ಈ ಖ್ಯಾತ ನಟ!
Gold worth over 40 lakh Rupees has been seized from a man In Chennai