5 ಅಡಿ ಉದ್ದದ ಹಾವು ಸೆರೆ ಹಿಡಿದ ಮಹಾರಾಷ್ಟ್ರದ ಬಿಜೆಪಿ ನಾಯಕ ಗಿರೀಶ್ ಮಹಾಜನ್; ಧೈರ್ಯಕ್ಕೆ ನೆಟ್ಟಿಗರ ಶ್ಲಾಘನೆ

Girish Mahajan: ದೇವಾಲಯದಿಂದ ಹಿಂತಿರುಗುವಾಗ ಆತಂಕಕ್ಕೊಳಗಾದ ಜನಸಮೂಹವನ್ನು ಮಹಾಜನ್ ಗಮನಿಸಿದರು. ಅಲ್ಲಿ ಹಾವಿದೆ ಎಂದು ತಿಳಿದಾಗ ಅದನ್ನು ಸೆರೆಹಿಡಿಯಲು ಮುನ್ನುಗ್ಗಿದರು. ಮಾಜಿ ಸಚಿವರು ಹಾವನ್ನು ಹಿಡಿಯುತ್ತಿದ್ದಂತೆ ಜನಸಮೂಹ ಹುರಿದುಂಬಿಸಿತು.

5 ಅಡಿ ಉದ್ದದ ಹಾವು ಸೆರೆ ಹಿಡಿದ ಮಹಾರಾಷ್ಟ್ರದ ಬಿಜೆಪಿ ನಾಯಕ ಗಿರೀಶ್ ಮಹಾಜನ್; ಧೈರ್ಯಕ್ಕೆ ನೆಟ್ಟಿಗರ ಶ್ಲಾಘನೆ
ಗಿರೀಶ್ ಮಹಾಜನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 21, 2021 | 12:48 PM

ಮುಂಬೈ : ಭಾರತೀಯ ಜನತಾ ಪಕ್ಷದ (BJP) ಮಾಜಿ ಸಚಿವ ಗಿರೀಶ್ ಮಹಾಜನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.ಈ ಬಾರಿ ಮಹಾರಾಷ್ಟ್ರದ ಜಾಮ್ನರ್ ಪಟ್ಟಣದಲ್ಲಿ ಮಂಗಳವಾರ ಜೀವಂತ 5 ಅಡಿ ಉದ್ದದ ಹಾವನ್ನು ಹಿಡಿದು ಸುದ್ದಿಯಾಗಿದ್ದಾರೆ. ದೇವಾಲಯದಿಂದ ಹಿಂತಿರುಗುವಾಗ ಆತಂಕಕ್ಕೊಳಗಾದ ಜನಸಮೂಹವನ್ನು ಮಹಾಜನ್ ಗಮನಿಸಿದರು. ಅಲ್ಲಿ ಹಾವಿದೆ ಎಂದು ತಿಳಿದಾಗ ಅದನ್ನು ಸೆರೆಹಿಡಿಯಲು ಮುನ್ನುಗ್ಗಿದರು. ಮಾಜಿ ಸಚಿವರು ಹಾವನ್ನು ಹಿಡಿಯುತ್ತಿದ್ದಂತೆ ಜನಸಮೂಹ ಹುರಿದುಂಬಿಸಿತು.

ಮಹಾಜನ್ ಈ ಹಿಂದೆಯೂ ಸುದ್ದಿಯಾಗಿದ್ದರು. ಡಿಸೆಂಬರ್ 2020 ರಲ್ಲಿ ಸಂಸ್ಥೆಯೊಂದನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡ ಆರೋಪ ಕೇಳಿ ಬಂದಿತ್ತು. ಜಲ್ಗಾಂವ್ ನಗರದ ನಿಂಬೋರಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಕಳೆದ ತಿಂಗಳು ನಡೆದ ಮತ್ತೊಂದು ಘಟನೆಯಲ್ಲಿ, ಮಸ್ಸೂರಿಯ ಬೆನೊಗ್ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ಜಾತಿಯ ವಿಷಪೂರಿತ ಹಾವು ಪತ್ತೆಯಾಗಿದೆ. ಕಪ್ಪು-ಹೊಟ್ಟೆಯ ಹವಳದ ಹಾವು (ಸಿನೊಮೈಕ್ರುರಸ್ ನಿಗ್ರಿವೆಂಟರ್) ಎಂದು ಕರೆಯಲ್ಪಡುವ ಈ ಹಾವನ್ನು 6,233 ಅಡಿ ಎತ್ತರದಲ್ಲಿ ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಡಬ್ಲ್ಯುಡಬ್ಲ್ಯುಐಐ) ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಹಾವು ಸಾಮಾನ್ಯವಾಗಿ 2,500 ರಿಂದ 6,000 ಅಡಿಗಳಷ್ಟು ಎತ್ತರದಲ್ಲಿ ಕಂಡುಬರುತ್ತದೆ.ಭದ್ರಾಜ್ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಇದು ಕಾಣಲು ಸಿಕ್ಕಿದೆ. ಈ ಹಾವಿನ 107 ಜಾತಿಗಳನ್ನು ಮಾತ್ರ ವಿಶ್ವದಾದ್ಯಂತ ಕಂಡುಹಿಡಿಯಲಾಗಿದೆ ಮತ್ತು ಏಳು ಪ್ರಬೇಧಗಳನ್ನು ಭಾರತದಲ್ಲಿ ಗುರುತಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಳೆದ ವಾರ ಬೆಳಕಿಗೆ ಬಂದ ಮತ್ತೊಂದು ವಿಲಕ್ಷಣ ಘಟನೆಯಲ್ಲಿ ಅಮೆರಿಕದ ಮಹಿಳೆಯೊಬ್ಬರು ಜಾರ್ಜಿಯಾದ ಅಗಸ್ಟಾದಲ್ಲಿರುವ ತನ್ನ ಮನೆಯಲ್ಲಿ 18 ಹಾವುಗಳನ್ನು ತನ್ನ ಹಾಸಿಗೆಯ ಕೆಳಗೆ ವಾಸಿಸುತ್ತಿರುವುದು ಕಂಡುಬಂದಿದೆ. “ನನ್ನ ಮಲಗುವ ಕೋಣೆಯಲ್ಲಿರುವ ಎಲ್ಲಾ ಮರಿ ಹಾವುಗಳನ್ನು ನೋಡಿ. ” ಎಂದು ಅವರು ಫೇಸ್‌ಬುಕ್‌ನಲ್ಲಿ ಹಾವುಗಳ ಚಿತ್ರಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: Kisan Parliament: ನಾಳೆಯಿಂದ ಜಂತರ್ ಮಂತರ್​​ನಲ್ಲಿ ಕಿಸಾನ್ ಪಾರ್ಲಿಮೆಂಟ್, ಪ್ರತಿದಿನ ಇಲ್ಲಿ ಸೇರಲಿದ್ದಾರೆ 200 ರೈತರು