ಆಶೀರ್ವದಿಸಲು ಹೋಗಿ ಅಂಗೈಗೆ ಹೇರ್ಪಿನ್ ಚುಚ್ಚಿಸಿಕೊಂಡರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

ಗೋಪಾಲಯ್ಯನವರ ಕುಟುಂಬದ ಮಹಿಳಾ ಸದಸ್ಯರು ಯಡಿಯೂರಪ್ಪನವರನ್ನು ಕಂಡೊಡನೆ ಅವರಿಗೆ ನಮಸ್ಕರಿಸಿ ಕಾಲಿಗೆ ಬಿದ್ದರು. ಆಗಲೇ ಒಬ್ಬ ಮಹಿಳೆಯ ತಲೆ ಮುಟ್ಟಿ ಬಿಎಸ್ವೈ ಆಶೀರ್ವದಿಸಿದಾಗ ಆಕೆಯ ಹೇರ್ ಪಿನ್ ಅವರ ಅಂಗೈಗೆ ಚುಚ್ಚಿದೆ.

TV9kannada Web Team

| Edited By: Arun Belly

Aug 04, 2021 | 8:29 PM

ಬಿಎಸ್ ಯಡಿಯೂರಪ್ಪನವರು ಈಗ ಮಾಜಿ ಮುಖ್ಯಮಂತ್ರಿಗಳಾಗಿಬಹುದು, ಆದರೆ, ಅಧಿಕಾರವಿರಲಿ ಇಲ್ಲದಿರಲಿ ಅವರು ಕ್ರೌಡ್ ಪುಲ್ಲರ್, ಮಾಸ್ ಲೀಡರ್ ಅನ್ನೋದು ಸುಳ್ಳಲ್ಲ. ಆವರಿದ್ದಲ್ಲಿ ಜನಗಳು-ಪಕ್ಷದ ಧುರೀಣರೇ ಆಗಲಿ, ವಿರೋಧ ಪಕ್ಷದವರೇ ಆಗಲಿ ಅಥವಾ ಸಾಮಾನ್ಯರಾಗಲೀ ಸುತ್ತವರಿಯುವುದು ಅವರು ಹೋದೆಡೆಯೆಲ್ಲ ಕಂಡು ಬರುವ ಸಾಮಾನ್ಯ ದೃಶ್ಯ. ಬುಧವಾರವೂ ಬೆಂಗಳೂರಿನಲ್ಲಿ ಅದೇ ಆಯಿತು. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಿದ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ರಾಜಭವನದಲ್ಲಿ ನಡೆಯಿತು. ಅದರಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪನವರು ಹೋದಾಗ ಎಂದಿನಂತೆ ಜನ ಅವರನ್ನು ಮುಕ್ಕುರಿದರು. ಕೆಲವರು ಅವರಿಗೆ ಕೈ ಮುಗಿದರೆ, ಬೇರೆ ಕೆಲವರು ಪಾದ ಮುಟ್ಟಿ ಆಶೀರ್ವಾದ ಪಡೆದರು.
ಈ ಸಮಾರಂಭದಲ್ಲಿ ಮಹಿಳೆಯರು ಸಹ ಹೆಚ್ಚಿನ ಪ್ರಮಾಣದಲ್ಲಿ ಹಾಜರಿದ್ದರು. ಈ ಬಾರಿಯೂ ಮಂತ್ರಿಯಾಗಿರುವ ಗೋಪಾಲಯ್ಯನವರ ಕುಟುಂಬದ ಮಹಿಳಾ ಸದಸ್ಯರು ಯಡಿಯೂರಪ್ಪನವರನ್ನು ಕಂಡೊಡನೆ ಅವರಿಗೆ ನಮಸ್ಕರಿಸಿ ಕಾಲಿಗೆ ಬಿದ್ದರು. ಆಗಲೇ ಒಬ್ಬ ಮಹಿಳೆಯ ತಲೆ ಮುಟ್ಟಿ ಬಿಎಸ್ವೈ ಆಶೀರ್ವದಿಸಿದಾಗ ಆಕೆಯ ಹೇರ್ ಪಿನ್ ಅವರ ಅಂಗೈಗೆ ಚುಚ್ಚಿದೆ. ನೋವಿನಿಂದ ಅವರು ಕೈ ಜಾಡಿಸುವುದು ಸ್ಪಷ್ಟವಾಗಿ ಈ ವಿಡಿಯೋದಲ್ಲಿ ಕಾಣುತ್ತದೆ.

ವಿರೋಧ ಪಕ್ಷದ ಕೆಲ ನಾಯಕರು ಬಿಎಸ್ವೈ ಅವರ ಮುಂದಿನ ಹಾದಿ ಸರಾಗವಾಗಿಲ್ಲ ಅದು ಮುಳ್ಳುಗಳಿಂದ ಕೂಡಿದೆ ಎಂದು ಹೇಳಿದ್ದರ ಸೂಚಕವೇ ಇದು!?

ಇದನ್ನೂ ಓದಿ: ಮನೆಯಲ್ಲೇ ಕಪ್ ಕೇಕ್ ಮಾಡಿ ಸಂಭ್ರಮಿಸಿದ ಐಶ್ವರ್ಯಾ ಅರ್ಜುನ್​; ಇಲ್ಲಿದೆ ವಿಡಿಯೋ

Follow us on

Click on your DTH Provider to Add TV9 Kannada