Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತ ಆಮೆ ಗರ್ಭದಲ್ಲಿನ ಮೊಟ್ಟೆಗಳಲ್ಲಿ ಜೀವ ತಳೆಯುತ್ತಿದ್ದ ಮರಿಗಳಿಗೆ ಬದುಕು ನೀಡಿದ್ದು ಎರಿಕ್ ಹೆಸರಿನ ವಾತ್ಸಲ್ಯಮಯಿ ವಿಜ್ಞಾನಿ!

ಸತ್ತ ಆಮೆ ಗರ್ಭದಲ್ಲಿನ ಮೊಟ್ಟೆಗಳಲ್ಲಿ ಜೀವ ತಳೆಯುತ್ತಿದ್ದ ಮರಿಗಳಿಗೆ ಬದುಕು ನೀಡಿದ್ದು ಎರಿಕ್ ಹೆಸರಿನ ವಾತ್ಸಲ್ಯಮಯಿ ವಿಜ್ಞಾನಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 04, 2021 | 6:36 PM

ಅವರ ಶ್ರಮ ಮತ್ತು ಕಕ್ಕುಲತೆ ಫಲ ನೀಡಿದೆ. ಸುಂದರ ಆಮೆಮರಿಗಳು ಒಂದೊಂದಾಗಿ ಚಿಪ್ಚಿನಿಂದ ಹೊರರಬರುತ್ತಿವೆ. ವಿಸ್ಮಯಕಾರಿ ಸಂಗತಿಯೆಂದರೆ, ತಮ್ಮಮ್ಮ ಅಪಘಾತದಲ್ಲಿ ಸತ್ತರೂ ಮೊಟ್ಟೆಗಳಲ್ಲಿ ಜೀವ ತಳೆಯುತ್ತಿದ್ದ ಮರಿಗಳಿಗೆ ಯಾವುದೇ ತೊಂದರೆಯಾಗಿಲ್ಲ.

ರಸ್ತೆಯಲ್ಲಿ ಒಂದು ಪ್ರಾಣಿ ಸತ್ತುಬಿದ್ದಿರುವುದು ಕಂಡರೆ ಮುಖ ಸಿಂಡರಿಸಿಕೊಂಡು ಹೋಗುವ ಜನರಿರುವ ಪ್ರಪಂಚದಲ್ಲಿ ನಮಗೆ ಎರಿಕ್ ಸಿ ಮಾರ್ಟಿನ್ ಅವರಂಥ ಅಪರೂಪದ ಜನ ಸಹ ಸಿಗುತ್ತಾರೆ. ಎರಿಕ್, ಅಮೇರಿಕದ ಮಿಚಿಗನ್ ನಿವಾಸಿ ಮತ್ತು ವೃತ್ತಿಯಲ್ಲಿ ವಿಜ್ಞಾನಿ. ಅವರಲ್ಲಿ ಒಂದು ದೊಡ್ಡ ಹೃದಯವಿದೆ ಅನ್ನುವುದಕ್ಕಿಂತ ಮಾತೃಹೃದಯ ಹೊಂದಿದ್ದಾರೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ವಿಷಯವೇನು ಗೊತ್ತಾ? ಜೂನ್ನಲ್ಲಿ ಎರಿಕ್ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುವಾಗ ತಮ್ಮ ಮನೆ ಬಳಿ ಆಮೆಯೊಂದು ರಸ್ತೆ ದಾಟಲು ಹೆಣಗಾಡುತ್ತಿರುವಂತೆ ಕಂಡಿದೆ. ಅದಕ್ಕೆ ಸಹಾಯ ಮಾಡುವ ಉದ್ದೇಶದಿಂದ ಅವರು ತಮ್ಮ ಕಾರಿನಿಂದಿಳಿದು ಹೋದಾಗ ಯಾವನೋ ಒಬ್ಬ ನಿರ್ದಯಿ ಡ್ರೈವರ್ ಅದರ ಮೇಲೆ ಕಾರು ಓಡಿಸಿಕೊಂಡು ಹೋಗಿದ್ದು ಅದು ಸ್ಥಳದಲ್ಲೇ ಸತ್ತಿದ್ದು ಅವರ ಗಮನಕ್ಕೆ ಬಂದಿದೆ.

ಅದನ್ನು ಅದೇ ಪ್ರದೇಶದಲ್ಲಿರುವ ಹೊಂಡವೊಂದರ ಪಕ್ಕ ಹೂತು ಬಿಡುವ ಯೋಚನೆ ಮಾಡಿ ಎತ್ತಲು ಹೋದಾಗ ಸತ್ತ ಆಮೆಯ ಗರ್ಭದಲ್ಲಿ ಮೊಟ್ಟೆಗಳಿರುವುದು ಅವರಿಗೆ ಗೊತ್ತಾಗಿದೆ. ತಾಯಿ ಆಮೆಯಂತೂ ಸತ್ತಿದೆ, ಅದರ ಸಂತಾನವನ್ನಾದರೂ ಉಳಿಸುವ ಅಂತ ಅವರು ಅದರ ಹೊಟ್ಟೆಯಿಂದ ಒಟ್ಟು 7 ಮೊಟೆಗಳನ್ನು ಶಸ್ತ್ರಚಿಕಿತ್ಸೆ (ಸಿ-ಸೆಕ್ಷನ್) ಮೂಲಕ ಹೊರತೆಗೆದು ಮನೆಯಲ್ಲಿ ಇನ್ಕ್ಯೂಬೇಟರ್ ವ್ಯವಸ್ಥೆ ಮಾಡಿ ಕಾವು ನೀಡಿದ್ದಾರೆ.

ಅವರ ಶ್ರಮ ಮತ್ತು ಕಕ್ಕುಲತೆ ಫಲ ನೀಡಿದೆ. ಸುಂದರ ಆಮೆಮರಿಗಳು ಒಂದೊಂದಾಗಿ ಚಿಪ್ಚಿನಿಂದ ಹೊರರಬರುತ್ತಿವೆ. ವಿಸ್ಮಯಕಾರಿ ಸಂಗತಿಯೆಂದರೆ, ತಮ್ಮಮ್ಮ ಅಪಘಾತದಲ್ಲಿ ಸತ್ತರೂ ಮೊಟ್ಟೆಗಳಲ್ಲಿ ಜೀವ ತಳೆಯುತ್ತಿದ್ದ ಮರಿಗಳಿಗೆ ಯಾವುದೇ ತೊಂದರೆಯಾಗಿಲ್ಲ.

ಮರಿಗಳನ್ನು ತಮ್ಮ ಬಳಿಯೇ ಕೆಲ ದಿನ ಇಟ್ಟುಕೊಂಡು ಅವುಗಳಿಗೆ ಆಹಾರ, ಆರೈಕೆ ಒದಗಿಸಿ ಅವು ಸ್ವತಂತ್ರವಾಗಿ ಬದುಕಬಲ್ಲವು ಅಂತ ಖಾತ್ರಿಯಾದ ಮೇಲೆ ತಾಯಿ ಆಮೆ ವಾಸವಾಗಿದ್ದ ಹೊಂಡದಲ್ಲೇ ಮರಿಗಳನ್ನೂ ಬಿಡುವ ಯೋಚನೆ ಎರಿಕ್ ಅವರಿಗಿದೆ.

ಎರಿಕ್; ನಿಮ್ಮ ವಾತ್ಸಲ್ಯ, ಅಂತಃಕರಣ, ಪ್ರೀತಿ, ಮಮತೆ ಯಾವ ತಾಯಿಗಿಂತಲೂ ಕಮ್ಮಿಯಿಲ್ಲ. ಟೇಕ್ ಎ ಬೋ ಮೇಟ್!

ಇದನ್ನೂ ಓದಿ: ಚೀನೀ ಸೈನಿಕರು ಕಲ್ಲು ತೂರಾಟ ನಡೆಸಿರುವುದು ನೆರೆರಾಷ್ಟ್ರ ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ!