Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನೀ ಸೈನಿಕರು ಕಲ್ಲು ತೂರಾಟ ನಡೆಸಿರುವುದು ನೆರೆರಾಷ್ಟ್ರ ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ!

ಚೀನೀ ಸೈನಿಕರು ಕಲ್ಲು ತೂರಾಟ ನಡೆಸಿರುವುದು ನೆರೆರಾಷ್ಟ್ರ ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 04, 2021 | 5:16 PM

ಆದರೆ ರಕ್ಷಣಾ ಇಲಾಖೆ ಮೂಲಗಳ ಪ್ರಕಾರ ಭಾರತದ ಯೋಧರು, ಚೀನಾದ ಅತಿಕ್ರಮಣವನ್ನು ಯಶಸ್ವೀಯಾಗಿ ಹತ್ತಿಕ್ಕಿ ಅವರ ಕನಿಷ್ಟ 30 ಸೈನಿಕರನ್ನು ಕೊಂದು ಹಾಕಿದರು. ಈ ಅಂಶವನ್ನು ನೆರೆ ರಾಷ್ಟ್ರ ಅಂಗೀಕರಿಸುತ್ತಿಲ್ಲ.

ಕಳೆದ ವರ್ಷ ಜೂನ್​ನಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಒಂದು ವಿಡಿಯೋವನ್ನು ನೆರೆರಾಷ್ಟ್ರ ಬಿಡುಗಡೆ ಮಾಡಿದೆ. ಈ ವಿಡಿಯೋನಲ್ಲಿ ಗಮನಿಸಬೇಕಾದ ಮಹತ್ತರ ಸಂಗತಿಯೆಂದರೆ, ಸಂಘರ್ಷ ನಡೆದ ಹಲವಾರು ತಿಂಗಳುಗಳವರೆಗೆ ತನ್ನ ಸೈನಿಕರದ್ದೇನೂ ತಪ್ಪಿಲ್ಲ, ಅವರು ಭಾರತೀಯ ಸೈನಿಕರ ಮೇಲೆ ಹಲ್ಲೆ ನಡೆಸಲೇ ಇಲ್ಲ ಎಂದು ವಾದಿಸಿದ ಚೀನಾದ ಸೈನಿಕರು ಭಾರತೀಯರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ಬರಿಗಣ್ಣಿಗೆ ಗೋಚರಿಸುತ್ತಿದೆ. ಮೊದಲೆಲ್ಲ ತನ್ನ ಶಿಬಿರದ ಯಾವೊಬ್ಬ ಸೈನಿಕನೂ ಆ ಹೊಡೆದಾಟದಲ್ಲಿ ಸತ್ತಿಲ್ಲ, ಗಾಯಗೊಂಡಿಲ್ಲ ಎಂದೇ ಹೇಳುತ್ತಿದ್ದ ಕಮ್ಯುನಿಸ್ಟ್ ರಾಷ್ಟ್ರ ನಂತರದ ದಿನಗಳಲ್ಲಿ ಅಧಿಕಾರಿ ಮತ್ತು ಸೈನಿಕರು ಸೇರಿ ಒಟ್ಟು ನಾಲ್ವರು ಸತ್ತಿರುವರೆಂದು ಹೇಳಿತ್ತು.

ಆದರೆ ರಕ್ಷಣಾ ಇಲಾಖೆ ಮೂಲಗಳ ಪ್ರಕಾರ ಭಾರತದ ಯೋಧರು, ಚೀನಾದ ಅತಿಕ್ರಮಣವನ್ನು ಯಶಸ್ವೀಯಾಗಿ ಹತ್ತಿಕ್ಕಿ ಅವರ ಕನಿಷ್ಟ 30 ಸೈನಿಕರನ್ನು ಕೊಂದು ಹಾಕಿದರು. ಈ ಅಂಶವನ್ನು ನೆರೆ ರಾಷ್ಟ್ರ ಅಂಗೀಕರಿಸುತ್ತಿಲ್ಲ. ಈ ವಿಡಿಯೋದಲ್ಲಿ ಗಾಯಗೊಂಡಿರುವ ಚೀನಾದ ಸೈನಿಕರನ್ನು ಹೊತ್ತುಕೊಂಡು ಹೋಗುತ್ತಿರುವುದು ಕಾಣುತ್ತಿದೆ ಮತ್ತು ಗಾಯಗೊಂಡ ಕೆಲ ಸೈನಿಕರು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದೂ ಕಾಣಿತ್ತಿದೆ.

ಮೂಲಗಳ ಪ್ರಕಾರ ಭಾರತದ 20 ಸೈನಿಕರು ಸದರಿ ಗಡಿ-ತಿಕ್ಕಾಟದಲ್ಲಿ ವೀರಮರಣ ಹೊಂದಿದರು. ಈ ವಿಡಿಯೋದಲ್ಲಿ ಎರಡೂ ದೇಶಗಳ ಸೈನಿಕರು ಕೊರೆಯುವ ಚಳಿಯಲ್ಲಿ ಅದೂ ಸಾಯಂಕಾಲದ ಸಮಯದಲ್ಲಿ ನದಿಯನ್ನು ದಾಟುತ್ತಿರುವುದು ಕಾಣುತ್ತಿದೆ. ಎರಡೂ ಗುಂಪುಗಳ ಗುರಿ, ಕಲ್ಲು-ಬಂಡೆಗಳಿಂದ ಆವೃತವಾಗಿರುವ ನದಿ ದಡವನ್ನು ಸೇರುವುದಾಗಿದೆ.

ಕತ್ತಲೆ ಆವರಿಸುತ್ತಿದ್ದಂತೆ ಸೈನಿಕರು ತಮ್ಮ ಬಳಿಯಿರುವ ಫ್ಲ್ಯಾಶ್ ಲೈಟ್ ಮತ್ತು ಪಂಜುಗಳನ್ನು ಹಿಡಿದಿರುವುದು ಕಾಣುತ್ತಿದೆ. ಕತ್ತಲೆಯಲ್ಲಿ ಎರಡೂ ಕಡೆಯ ಸೈನಿಕರು ಏರುಧ್ವನಿಯಲ್ಲಿ ಕೂಗಾಡುವುದು ಕೇಳಿಸುತ್ತದೆ.

ಇದನ್ನೂ ಓದಿ: Viral Video: ಸ್ಟೈಲ್ಆಗಿ ಸನ್​ಗ್ಲಾಸ್​ ತೊಟ್ಟು ಕುಳಿತ ಒರಾಂಗೂಟಾನ್! ವಿಡಿಯೋ ವೈರಲ್