AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 8 Finale: ಬಿಗ್​ ಬಾಸ್​ ಸೀಸನ್​ 8 ವಿನ್ನರ್​​ ಇವರೇನಾ? ಇಲ್ಲಿದೆ ಲೆಕ್ಕಾಚಾರ

‘ಬಿಗ್​ ಬಾಸ್​ ಸೀಸನ್​ 8’ ಫಿನಾಲೆಯಲ್ಲಿ ಮಂಜು ಪಾವಗಡ, ವೈಷ್ಣವಿ ಗೌಡ, ಅರವಿಂದ್​ ಕೆ.ಪಿ., ದಿವ್ಯಾ ಉರುಡುಗ ಹಾಗೂ ಪ್ರಶಾಂತ್​ ಸಂಬರಗಿ ಇದ್ದಾರೆ. ಈ ಪೈಕಿ ಇಬ್ಬರು ಸುದೀಪ್ ಅಕ್ಕಪಕ್ಕ ನಿಲ್ಲಲಿದ್ದಾರೆ.

Bigg Boss Kannada 8 Finale: ಬಿಗ್​ ಬಾಸ್​ ಸೀಸನ್​ 8 ವಿನ್ನರ್​​ ಇವರೇನಾ? ಇಲ್ಲಿದೆ ಲೆಕ್ಕಾಚಾರ
ಬಿಗ್​ ಬಾಸ್​ ಸೀಸನ್​ 8 ವಿನ್ನರ್​​ ಇವರೇನಾ? ಇಲ್ಲಿದೆ ಲೆಕ್ಕಾಚಾರ
TV9 Web
| Edited By: |

Updated on:Aug 07, 2021 | 9:51 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಫಿನಾಲೆ ಬಂದೇ ಬಿಟ್ಟಿದೆ. 115ಕ್ಕೂ ಅಧಿಕ ದಿನ ಮನೆಯಲ್ಲಿ ಕಳೆದ ಐವರು ಸ್ಪರ್ಧಿಗಳು ಫಿನಾಲೆ ತಲುಪಿದ್ದಾರೆ. ಇವರಲ್ಲಿ ಗೆಲ್ಲೋದು ಯಾರು ಅನ್ನೋ ಕುತೂಹಲ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಫಿನಾಲೆಗೆ ಈಗಾಗಲೇ ಕಲರ್​ಫುಲ್​ ವೇದಿಕೆ ಸಜ್ಜಾಗಿದೆ. ಹಳೆಯ ಸ್ಪರ್ಧಿಗಳು ಬಿಗ್​ ಬಾಸ್​ ವೇದಿಕೆ ಏರಿ ಕಲರ್​ಫುಲ್​ ಆಗಿ ಡಾನ್ಸ್​ ಮಾಡಿದ್ದಾರೆ. ವಿನ್ನರ್​ ಯಾರು ಎನ್ನುವ ಪ್ರಶ್ನೆಗೆ ಭಾನುವಾರ ರಾತ್ರಿ ಉತ್ತರ ಸಿಗಲಿದೆ.

‘ಬಿಗ್​ ಬಾಸ್​ ಸೀಸನ್​ 8’ ಫಿನಾಲೆಯಲ್ಲಿ ಮಂಜು ಪಾವಗಡ, ವೈಷ್ಣವಿ ಗೌಡ, ಅರವಿಂದ್​ ಕೆ.ಪಿ., ದಿವ್ಯಾ ಉರುಡುಗ ಹಾಗೂ ಪ್ರಶಾಂತ್​ ಸಂಬರಗಿ ಇದ್ದಾರೆ. ಈ ಪೈಕಿ ಇಬ್ಬರು ಸುದೀಪ್ ಅಕ್ಕಪಕ್ಕ ನಿಲ್ಲಲಿದ್ದಾರೆ. ಇವರಲ್ಲಿ ಒಬ್ಬರು ‘ಬಿಗ್​ ಬಾಸ್ ಸೀಸನ್​ 8’ ವಿನ್ನರ್​ ಆಗಲಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿರುವ ಐದು ಸ್ಪರ್ಧಿಗಳ ಪೈಕಿ ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ ವೀಕ್​ ಕ್ಯಾಂಡಿಡೇಟ್​ ಎನಿಸಿಕೊಂಡಿದ್ದಾರೆ. ದಿವ್ಯಾ ಟಾಸ್ಕ್​ನಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಆದರೆ, ಅವರಿಗೆ ಹೆಚ್ಚು ವೋಟ್ ಬೀಳುವ ಸಾಧ್ಯತೆ ತುಂಬಾನೇ ಕಡಿಮೆ. ಅರವಿಂದ್​ ಹಾಗೂ ದಿವ್ಯಾ ನಡುವಿನ ಪ್ರೇಮ ವಿಚಾರ ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ.

ಇನ್ನು, ಪ್ರಶಾಂತ್​ ಸಂಬರಗಿ ಫಿನಾಲೆ ತಲುಪಿದ್ದರೂ ಕೂಡ ಅವರ ಅಭಿಮಾನಿ ವರ್ಗ ಅಷ್ಟಾಗಿ ಹಿರಿದಾಗಿಲ್ಲ. ಅವರು ಮೊದಲ ಇನ್ನಿಂಗ್ಸ್​ನಲ್ಲಿ ಒಂದು ರೀತಿ ಇದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ ಕೊಂಚ ಬದಲಾದರು. ಕೊನೆಯ ದಿನಗಳಲ್ಲಿ ಅವರ ವರ್ತನೆ ಮತ್ತಷ್ಟು ಬದಲಾಗಿತ್ತು. ಹೀಗಾಗಿ, ಪ್ರಶಾಂತ್​ ಗೆಲ್ಲುವ ಸಾಧ್ಯತೆ ತುಂಬಾನೇ ಕಡಿಮೆ. ಆರಂಭದಲ್ಲಿ ವೈಷ್ಣವಿ ಡಲ್​ ಆಗಿದ್ದರು. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಅವರು ಬದಲಾಗಿದ್ದಾರೆ. ಹೆಚ್ಚು ಎಕ್ಸ್​​ಪ್ರೆಸಿವ್​ ಆಗಿದ್ದಾರೆ. ಈ ಕಾರಣಕ್ಕೆ ವೀಕ್ಷಕರಿಗೆ ಅವರು ಇಷ್ಟವಾಗುತ್ತಾರೆ. ಆದರೆ, ಅವರಿಗೂ ಗೆಲ್ಲೋ ಚಾನ್ಸ್​ ಕಡಿಮೆ.

ಅರವಿಂದ್​ ಕೆ.ಪಿ. ಟಾಸ್ಕ್​ಗಳನ್ನು ಅದ್ಭುತವಾಗಿ ಆಡಿದ್ದಾರೆ. ಆದರೆ, ಮನರಂಜನೆಯಲ್ಲಿ ಅವರು ಹಿಂದೆ ಬಿದ್ದಿದ್ದಾರೆ. ಇದು ಅವರಿಗೆ ಮೈನಸ್​ ಆಗಬಹುದು. ಆದರೆ, ಅರವಿಂದ್​ ಅಭಿಮಾನಿ ಬಳಗ ತುಂಬಾನೇ ದೊಡ್ಡದಾಗಿದೆ. ಈ ಕಾರಣಕ್ಕೆ ಅರವಿಂದ್ ಸುದೀಪ್​ ಪಕ್ಕ ನಿಲ್ಲುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇನ್ನು,  ಇನ್ನು, ಮಂಜು ಪಾವಗಡ ಬಿಗ್​ ಬಾಸ್​ ಮನೆಯಲ್ಲಿ ನಾಯಕತ್ವ ಹಾಗೂ ಮನರಂಜನೆ ಎರಡರಲ್ಲೂ ಹೆಚ್ಚು ಗುರುತಿಸಿಕೊಂಡಿದ್ದಾರೆ.  ಅವರ ಅಭಿಮಾನಿ ಬಳಗ ಕೂಡ ದೊಡ್ದದಿದೆ. ಈ ಕಾರಣಕ್ಕೆ ಮಂಜು ಪಾವಗಡ ಕೂಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಅರವಿಂದ್ ಅಥವಾ, ಮಂಜು ಪಾವಗಡ  ಇಬ್ಬರಲ್ಲಿ ಒಬ್ಬರಿಗೆ ವಿಜಯದ ಮಾಲೆ ಬೀಳಲಿದೆ. ಯಾರು ಗೆಲ್ಲುತ್ತಾರೆ ಎನ್ನುವುದಕ್ಕೆ ಆಗಸ್ಟ್​ 8ರ ರಾತ್ರಿ ಉತ್ತರ ಸಿಗಲಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಯಲ್ಲಿ ಶಮಂತ್ ಹಾಡು, ರಘು ಡ್ಯಾನ್ಸ್​, ಪ್ರಿಯಾಂಕಾ-ದಿವ್ಯಾ ವೈಯ್ಯಾರ, ಹಳೇ ಸ್ಪರ್ಧಿಗಳ ಧಮಾಕಾ

Published On - 2:39 pm, Sat, 7 August 21

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?