ಬಿಗ್​ ಬಾಸ್​ ಫಿನಾಲೆಯಲ್ಲಿ ಶಮಂತ್ ಹಾಡು, ರಘು ಡ್ಯಾನ್ಸ್​, ಪ್ರಿಯಾಂಕಾ-ದಿವ್ಯಾ ವೈಯ್ಯಾರ, ಹಳೇ ಸ್ಪರ್ಧಿಗಳ ಧಮಾಕಾ

ಬಿಗ್​ ಬಾಸ್​ ಫಿನಾಲೆಯಲ್ಲಿ ಶಮಂತ್ ಹಾಡು, ರಘು ಡ್ಯಾನ್ಸ್​, ಪ್ರಿಯಾಂಕಾ-ದಿವ್ಯಾ ವೈಯ್ಯಾರ, ಹಳೇ ಸ್ಪರ್ಧಿಗಳ ಧಮಾಕಾ
ಬಿಗ್​ ಬಾಸ್​ ಫಿನಾಲೆಯಲ್ಲಿ ಶಮಂತ್ ಹಾಡು, ರಘು ಡ್ಯಾನ್ಸ್​, ಪ್ರಿಯಾಂಕಾ-ದಿವ್ಯಾ ವೈಯ್ಯಾರ, ಹಳೇ ಸ್ಪರ್ಧಿಗಳ ಧಮಾಕಾ

ಬಿಗ್​ ಬಾಸ್​ ಫಿನಾಲೆ ಎಪಿಸೋಡ್​ ಎಂದರೆ ಅಲ್ಲಿ ಬರೀ ಯಾರು ವಿನ್ನರ್​ ಎಂಬುದರ ಘೋಷಣೆ ಮಾತ್ರ ಅಲ್ಲ, ಅದೊಂದು ಸೆಲೆಬ್ರೇಷನ್​. ಅದಕ್ಕಾಗಿ ತಿಂಗಳಿಂದಲೇ ಕಲರ್ಸ್​ ಕನ್ನಡ ವಾಹಿನಿ ತಾಲೀಮು ನಡೆಸಿರುತ್ತದೆ.

TV9kannada Web Team

| Edited By: Madan Kumar

Aug 07, 2021 | 12:50 PM


ಬಿಗ್​ ಬಾಸ್​ ವೀಕ್ಷಕರಿಗೆ ಆ.7 ಮತ್ತು 8ರಂದು ಹಬ್ಬವೇ ಸರಿ. ಶನಿವಾರ-ಭಾನುವಾರ ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆ (Bigg Boss Finale) ನಡೆಯುತ್ತಿದೆ. ಇಷ್ಟು ದಿನಗಳ ಕಾಲ ಕಠಿಣ ಸ್ಪರ್ಧೆ ನೀಡಿದ ಐವರು ಸ್ಪರ್ಧಿಗಳು ಫಿನಾಲೆ ವೇದಿಕೆಗೆ ಬಂದಿದ್ದಾರೆ. ಮಂಜು ಪಾವಗಡ, ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ, ಅರವಿಂದ್​ ಕೆ.ಪಿ. ಹಾಗೂ ವೈಷ್ಣವಿ ಗೌಡ ಅವರಲ್ಲಿ ಯಾರು ಬಿಗ್​ ಬಾಸ್​ ವಿನ್ನರ್ (Bigg Boss Winner)​ ಪಟ್ಟ ತಮ್ಮದಾಗಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ತೀವ್ರವಾಗಿದೆ. ತುಂಬ ಅದ್ದೂರಿಯಾಗಿ ಫಿನಾಲೆ ಕಾರ್ಯಕ್ರಮವನ್ನು ಕಲರ್ಸ್​ ಕನ್ನಡ (Colors Kannada) ವಾಹಿನಿ ಕಟ್ಟಿಕೊಡಲಿದೆ.

ಫಿನಾಲೆ ಎಂದರೆ ಅಲ್ಲಿ ಬರೀ ಯಾರು ವಿನ್ನರ್​ ಎಂಬುದರ ಘೋಷಣೆ ಮಾತ್ರ ಅಲ್ಲ. ಅದೊಂದು ಸೆಲೆಬ್ರೇಷನ್​. ಅದಕ್ಕಾಗಿ ತಿಂಗಳಿಂದಲೇ ಕಲರ್ಸ್​ ಕನ್ನಡ ವಾಹಿನಿ ತಾಲೀಮು ನಡೆಸಿರುತ್ತದೆ. ಹಲವು ಸೆಲೆಬ್ರಿಟಿಗಳನ್ನು ಕರೆಸಿ ವೇದಿಕೆಯ ರಂಗೇರಿಸಲಾಗಿದೆ. ಈ ಮೊದಲೇ ಎಲಿಮಿನೇಟ್​ ಆದ ಶಮಂತ್​ ಬ್ರೋ ಗೌಡ, ವಿಶ್ವನಾಥ್​ ಅವರು ಈ ವೇದಿಕೆಯಲ್ಲಿ ಹಾಡು ಹೇಳಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​ ಅವರು ಡ್ಯಾನ್ಸ್​ ಮಾಡಿದ್ದಾರೆ. ಡ್ಯಾನ್ಸ್​ ವಿಚಾರದಲ್ಲಿ ರಘು ಗೌಡ ಕೂಡ ಹಿಂದೆ ಬಿದ್ದಿಲ್ಲ.

ಹಳೇ ಸೀಸನ್​ನ ಸ್ಪರ್ಧಿಗಳು ಈ ಬಾರಿ ಬಿಗ್​ ಬಾಸ್​ ಫಿನಾಲೆಯಲ್ಲಿ ಕಿಚ್ಚು ಹಚ್ಚಿದ್ದಾರೆ. ಕಿಶನ್​ ಬಿಳಗಲಿ ಬಿಂದಾಸ್​ ಆಗಿ ಹೆಜ್ಜೆ ಹಾಕಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯ ಸ್ಟಾರ್​ ನಟ ಕಾರ್ತಿಕ್​ ಜಯರಾಮ್​ (ಜೆಕೆ) ಅವರು ಕೂಡ ನೃತ್ಯ ಮಾಡಿದ್ದಾರೆ. ಈ ಎಲ್ಲದರ ಝಲಕ್​ ತೋರಿಸಲು ಕಲರ್ಸ್​ ಕನ್ನಡ ವಾಹಿನಿ ಒಂದು ಪ್ರೋಮೋ ಬಿಡುಗಡೆ ಮಾಡಿದೆ. ಫಿನಾಲೆ ಎಪಿಸೋಡ್​ನ ಶೂಟಿಂಗ್​ ಭರದಿಂದ ಸಾಗಿದ್ದು, ಇಂದು ಸಂಜೆ 6 ಗಂಟೆಗೆ ಪ್ರಸಾರ ಆರಂಭ ಆಗಲಿದೆ.

ಈ ಬಾರಿ ಬಿಗ್​ ಬಾಸ್​ ಗೆಲ್ಲೋದು ಯಾರು ಎಂಬ ಬಗ್ಗೆ ದೊಡ್ಡ ಕೌತುಕ ಮೂಡಿದೆ. ಅರವಿಂದ್​ ಮತ್ತು ಮಂಜು ಪಾವಗಡ ನಡುವೆ ಟಫ್​ ಸ್ಪರ್ಧೆ ಏರ್ಪಟ್ಟಿದೆ. ವೀಕ್ಷಕರ ವೋಟಿಂಗ್​ ಬಲದಿಂದಾಗಿ ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ, ವೈಷ್ಣವಿ ಗೌಡ ಕೂಡ ಕಮಾಲ್​ ಮಾಡುವ ಸಾಧ್ಯತೆ ದಟ್ಟವಾಗಿದೆ.

ಫಿನಾಲೆ ತಲುಪಿರುವ ಈ ಐದೂ ಜನರಿಗೆ ಶುಭವಾಗಲಿ ಎಂದು ಕಿಚ್ಚ ಸುದೀಪ್​ ಅವರು ಟ್ವಿಟರ್​ ಮೂಲಕ ಹಾರೈಸಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ ಬಳಿಕ ರಂಜಿಸಲು ಬರ್ತಿವೆ ಹೊಸ ಸೀರಿಯಲ್​ಗಳು; ಲಕ್ಷಣ, ಕನ್ಯಾಕುಮಾರಿ ಕಥೆ ಏನು?

ಬಿಗ್​ ಬಾಸ್​ ಫಿನಾಲೆಯಲ್ಲಿ ಸುದೀಪ್​ ಅಕ್ಕ-ಪಕ್ಕ ನಿಲ್ಲುವ ಸ್ಪರ್ಧಿಗಳು ಇವರೇನಾ? ಸಿಕ್ತು ಮತ್ತೊಂದು ಸಾಕ್ಷಿ

Follow us on

Most Read Stories

Click on your DTH Provider to Add TV9 Kannada