ಬಿಗ್​ ಬಾಸ್​ ಮನೆಯಲ್ಲಿ ನಾಲ್ಕೇ ದಿನಕ್ಕೆ ಎರಡು ಲಕ್ಷ ಸಂಪಾದಿಸಿದ ಅರವಿಂದ್​ ಕೆಪಿ

ಬಿಗ್​ ಬಾಸ್​ ಮನೆಯಲ್ಲಿ ನಾಲ್ಕೇ ದಿನಕ್ಕೆ ಎರಡು ಲಕ್ಷ ಸಂಪಾದಿಸಿದ ಅರವಿಂದ್​ ಕೆಪಿ
ಅರವಿಂದ್​

ಪ್ರತಿ ವಾರ ಸ್ಪರ್ಧಿಗಳಿಗೆ ಟಾಸ್ಕ್​ ನೀಡಲಾಗುತ್ತದೆ. ವಾರ ಪೂರ್ತಿ ಟಾಸ್ಕ್​ ಇರುತ್ತದೆ. ಈ ಟಾಸ್ಕ್​ನಲ್ಲಿ ಗೆಲ್ಲೋರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗುತ್ತಾರೆ. ಕೊನೆಯಲ್ಲಿ ಟಾಸ್ಕ್​​ನಲ್ಲಿ ಗೆಲ್ಲೋರು ಕ್ಯಾಪ್ಟನ್​ ಆಗುತ್ತಾರೆ.

TV9kannada Web Team

| Edited By: Rajesh Duggumane

Aug 07, 2021 | 4:14 PM

ಬಿಗ್​ ಬಾಸ್​ ಕನ್ನಡ ಸೀಸನ್​ 8 ಫಿನಾಲೆ ಹಂತ ತಲುಪಿದೆ. ವೀಕ್ಷಕರನ್ನು ಸೆಳೆಯುವ ಉದ್ದೇಶದಿಂದ ನಾನಾ ರೀತಿಯ ಟಾಸ್ಕ್​ಗಳನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು.  ಈ ಟಾಸ್ಕ್​ ಗೆದ್ದ ಸ್ಪರ್ಧಿಗೆ ಎರಡು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ಎಂದು ಬಿಗ್​ ಬಾಸ್​ ಘೋಷಣೆ ಮಾಡಿದ್ದರು. ಈ ಜಾಕ್​ಪಾಟ್ ಅರವಿಂದ್​ಗೆ ಸಿಕ್ಕಿದೆ. 

ಪ್ರತಿ ವಾರ ಸ್ಪರ್ಧಿಗಳಿಗೆ ಟಾಸ್ಕ್​ ನೀಡಲಾಗುತ್ತದೆ. ವಾರ ಪೂರ್ತಿ ಟಾಸ್ಕ್​ ಇರುತ್ತದೆ. ಈ ಟಾಸ್ಕ್​ನಲ್ಲಿ ಗೆಲ್ಲೋರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗುತ್ತಾರೆ. ಕೊನೆಯಲ್ಲಿ ಟಾಸ್ಕ್​​ನಲ್ಲಿ ಗೆಲ್ಲೋರು ಕ್ಯಾಪ್ಟನ್​ ಆಗುತ್ತಾರೆ. ಆದರೆ, ಕೊನೆಯ ವಾರವಾದ್ದರಿಂದ ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ ಇರಲಿಲ್ಲ. ಆದರೆ, ಬಿಗ್​ ಬಾಸ್​ ಸರ್​ಪ್ರೈಸ್​ ನೀಡಿದ್ದರು.

‘ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು 113 ದಿನಗಳ ಸುದೀರ್ಘ ಪಯಣದಲ್ಲಿ ಎಲ್ಲಾ ಭಾವಗಳನ್ನು ದಾಟಿ ಗುರಿಗೆ ಹತ್ತಿರವಾಗಿದ್ದಾರೆ. ಎರಡು ಲಕ್ಷ ಪಡೆದುಕೊಳ್ಳಲು ಬಿಗ್​ ಬಾಸ್​ ಟಾಸ್ಕ್​ ನೀಡುತ್ತಿದ್ದಾರೆ. ಪ್ರತಿ ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿರುವ ಸ್ಪರ್ಧಿಗೆ 5 ಅಂಕ, ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗೆ ಅಂಕ 3 ಹಾಗೂ ಮೂರನೇ ಸ್ಥಾನಕ್ಕೆ 1 ಅಂಕ ಸಿಗುತ್ತದೆ. ವಾರದ ಕೊನೆಯಲ್ಲಿ ಯಾರ ಬಳಿ ಅಂಕ ಹೆಚ್ಚಿರುತ್ತದೆಯೋ ಅವರಿಗೆ ಎರಡು ಲಕ್ಷ ರೂಪಾಯಿ ಸಿಗಲಿದೆ’ ಎಂದು ಬಿಗ್​ ಬಾಸ್​ನಿಂದ ಸುತ್ತೋಲೆ ಬಂದಿತ್ತು.

ಎರಡು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ಎನ್ನುವ ವಿಚಾರ ತಿಳಿದ ಸ್ಪರ್ಧಿಗಳು ಸಾಕಷ್ಟು ಖುಷಿಪಟ್ಟಿದ್ದರು.  ಅಲ್ಲದೆ, ವಾರ ಪೂರ್ತಿ ನಾನಾ ರೀತಿಯ ಟಾಸ್ಕ್​ ಆಡಿದ್ದರು. ಇದನ್ನು ಯಶಸ್ವಿಯಾಗಿ ಆಡಿ ಅರವಿಂದ್ 31 ಅಂಕ ಗಳಿಸಿಕೊಂಡು ಮೊದಲ ಸ್ಥಾನ ಪಡೆದರು. ಮಂಜು ಹಾಗೂ ದಿವ್ಯಾ ಉರುಡುಗ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ವೈಷ್ಣವಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಟಾಸ್ಕ್​ನಲ್ಲಿ ಮೊದಲ ಸ್ಥಾನ ಪಡೆದ ಅರವಿಂದ್​ಗೆ ಎರಡು ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಕ್ಕಿದೆ.

ಇದನ್ನೂ ಓದಿ: Bigg Boss Kannada 8 Finale: ಬಿಗ್​ ಬಾಸ್​ ಸೀಸನ್​ 8 ವಿನ್ನರ್​​ ಇವರೇನಾ? ಇಲ್ಲಿದೆ ಲೆಕ್ಕಾಚಾರ

Follow us on

Most Read Stories

Click on your DTH Provider to Add TV9 Kannada