ಬಿಗ್​ ಬಾಸ್​ ವಿನ್ನರ್​ಗೆ ಸಿಕ್ತು 75 ಲಕ್ಷದ ಮನೆ; 16 ವರ್ಷದ ಪರಿಶ್ರಮಕ್ಕೆ ಸಿಕ್ಕ ಫಲ ಇದು

ಬಿಗ್​ ಬಾಸ್​ ವಿನ್ನರ್​ಗೆ ಸಿಕ್ತು 75 ಲಕ್ಷದ ಮನೆ; 16 ವರ್ಷದ ಪರಿಶ್ರಮಕ್ಕೆ ಸಿಕ್ಕ ಫಲ ಇದು
ಬಿಗ್​ ಬಾಸ್​ ವಿನ್ನರ್​ಗೆ ಸಿಕ್ತು 75 ಲಕ್ಷದ ಮನೆ; 16 ವರ್ಷದ ಪರಿಶ್ರಮಕ್ಕೆ ಸಿಕ್ಕ ಫಲ ಇದು

ಕಳೆದ 16 ವರ್ಷದಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಮಣಿಕುಟ್ಟನ್​ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ವೋಟ್​ ಮಾಡಿ ಗೆಲ್ಲಿಸಿದ ಎಲ್ಲ ವೀಕ್ಷಕರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

TV9kannada Web Team

| Edited By: Madan Kumar

Aug 04, 2021 | 8:15 AM

ಬಿಗ್​ ಬಾಸ್ (Bigg Boss)​ ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕು ಎಂಬುದು ಲಕ್ಷಾಂತರ ಜನರ ಆಸೆ. ಆದರೆ ಎಲ್ಲರಿಗೂ ಅಂಥ ಅವಕಾಶ ಸಿಗುವುದಿಲ್ಲ. ಒಂದುವೇಳೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರೆ ಸ್ಪರ್ಧಿಗಳ ಲೈಫ್​ ಬದಲಾಗುತ್ತದೆ. ವಿನ್ನರ್​ (Bigg Boss Winner) ಆದರಂತೂ ಬಂಪರ್​ ಲಾಟರಿ ಹೊಡೆದಂತೆಯೇ ಸರಿ. ಈಗ ಮಲಯಾಳಂ ಬಿಗ್​ ಬಾಸ್​ ಸೀಸನ್​ 3ರಲ್ಲಿ ಗೆದ್ದಿರುವ ನಟ ಮಣಿಕುಟ್ಟನ್​ (Manikuttan) ಅವರಿಗೆ ಭರ್ಜರಿ ಬಹುಮಾನ ಸಿಕ್ಕಿದೆ. ಬಿಗ್​ ಬಾಸ್​ ಫಿನಾಲೆಯಲ್ಲಿ ಅವರನ್ನು ವಿನ್ನರ್​ ಎಂದು ಘೋಷಿಸಲಾಗಿದೆ. ಆಕರ್ಷಕ ಟ್ರೋಫಿ ಜೊತೆಗೆ 75 ಲಕ್ಷ ರೂ. ಬೆಲೆಬಾಳುವ ಫ್ಲಾಟ್​ ನೀಡಲಾಗಿದೆ!

ಈ ವರ್ಷ ಫೆ.14ರಂದು ಮಲಯಾಳಂ ಬಿಗ್​ ಬಾಸ್​ ಆರಂಭ ಆಗಿತ್ತು. ಚೆನ್ನೈನ ಸ್ಡುಡಿಯೋವೊಂದರಲ್ಲಿ ದೊಡ್ಮನೆಯ ಸೆಟ್​ ಹಾಕಿ ಶೋ ನಡೆಸಲಾಗುತ್ತಿತ್ತು. ಆದರೆ ಕೊರೊನಾ ವೈರಸ್​ ಎರಡನೇ ಅಲೆ ಜೋರಾದ ಹಿನ್ನೆಲೆಯಲ್ಲಿ ಆಟವನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. 95ನೇ ದಿನಕ್ಕೆ ಅಧಿಕಾರಿಗಳು ಸ್ಟುಡಿಯೋ ಮೇಲೆ ದಾಳಿ ನಡೆಸಿ ಬಿಗ್​ ಬಾಸ್​ಗೆ ಬ್ರೇಕ್​ ಹಾಕಿದ್ದರು. ಆದರೆ ಈಗ ವೀಕ್ಷಕರ ವೋಟಿಂಗ್​ ಆಧಾರದ ಮೇಲೆ ವಿನ್ನರ್​ ಯಾರು ಎಂಬುದನ್ನು ತೀರ್ಮಾನಿಸಲಾಗಿದೆ. ವೀಕ್ಷಕರಿಂದ ಅತಿ ಹೆಚ್ಚು ವೋಟ್​ ಪಡೆದ ಮಣಿಕುಟ್ಟನ್​ ಅವರು ವಿನ್ನರ್​ ಆಗಿದ್ದಾರೆ. ಕಳೆದ 16 ವರ್ಷದಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ‘ಬಿಡುವಿನ ಸಮಯದಲ್ಲಿ ಸಾಕಷ್ಟು ಸಿನಿಮಾಗಳನ್ನು ನೋಡಿ ನಾನು ಜ್ಞಾನ ಪಡೆಯುತ್ತಿದ್ದೆ. ಎಲ್ಲ ಟಾಸ್ಕ್​ಗಳನ್ನು ನಿಭಾಯಿಸುವಾಗ ಅದು ನನಗೆ ಸಹಾಯಕ್ಕೆ ಬಂತು. ಈ ಕಾರ್ಯಕ್ರಮಕ್ಕಾಗಿ ನಾನು ನನ್ನ ಸರ್ವಸ್ವವನ್ನೂ ಮೀಸಲಾಗಿಟ್ಟಿದ್ದೆ. ವೋಟ್​ ಮಾಡಿದ ಜನರಿಗೆ ಮತ್ತು ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಮಣಿಕುಟ್ಟನ್​ ಹೇಳಿದ್ದಾರೆ.

ಮಲಯಾಳಂ ಬಿಗ್​ ಬಾಸ್​ ಸೀಸನ್ 3ಕ್ಕೆ ಮಾಲಿವುಡ್​ ಸ್ಟಾರ್​ ನಟ ಮೋಹನ್​​ಲಾಲ್​ ನಿರೂಪಕರಾಗಿದ್ದರು. ಮೋಹನ್​ಲಾಲ್​ ಜೊತೆಗೆ ಹಲವು ಸಿನಿಮಾಗಳಲ್ಲಿ ತೆರೆಹಂಚಿಕೊಳ್ಳುವ ಅವಕಾಶ ಕೂಡ ಈ ಹಿಂದೆ ಮಣಿಕುಟ್ಟನ್​ ಅವರಿಗೆ ಸಿಕ್ಕಿತ್ತು. ಬಿಗ್​ ಬಾಸ್​ ಗೆದ್ದಿರುವ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಕನ್ನಡ ಬಿಗ್​ ಬಾಸ್​ ಸೀಸನ್​ 8ಕ್ಕೆ ಫಿನಾಲೆ ಹತ್ತಿರವಾಗಿದೆ. ಆ.8ರಂದು ಅದ್ದೂರಿಯಾಗಿ ಫಿನಾಲೆ ನಡೆಯಲಿದೆ. ಸದ್ಯ ಮನೆಯೊಳಗೆ ಮಂಜು ಪಾವಗಡ, ದಿವ್ಯಾ ಸುರೇಶ್​, ಅರವಿಂದ್​ ಕೆ.ಪಿ., ದಿವ್ಯಾ ಉರುಡುಗ, ವೈಷ್ಣವಿ ಗೌಡ ಹಾಗೂ ಪ್ರಶಾಂತ್​ ಸಂಬರಗಿ ನಡುವೆ ಹಣಾಹಣಿ ನಡೆಯುತ್ತಿದೆ.

ಇದನ್ನೂ ಓದಿ:

ಬಿಗ್​ ಬಾಸ್​ನಲ್ಲಿ ‘ಕಣ್ಣೇ ಅದಿರಿಂದಿ’ ಗಾಯಕಿ ಮಂಗ್ಲಿ? ಹೆಚ್ಚಿತು ವೀಕ್ಷಕರ ನಿರೀಕ್ಷೆ

ಬಿಗ್​ ಬಾಸ್​ ಫಿನಾಲೆಯಲ್ಲಿ ಸುದೀಪ್​ ಅಕ್ಕ-ಪಕ್ಕ ನಿಲ್ಲುವ ಸ್ಪರ್ಧಿಗಳು ಇವರೇನಾ? ಸಿಕ್ತು ಮತ್ತೊಂದು ಸಾಕ್ಷಿ

Follow us on

Related Stories

Most Read Stories

Click on your DTH Provider to Add TV9 Kannada